LATEST NEWS
ಸುರತ್ಕಲ್ ಪ್ಲ್ಯಾಟ್ ನಲ್ಲಿ ಕಳ್ಳತನ ನಾಲ್ವರ ಆರೆಸ್ಟ್
Published
4 years agoon
By
Adminಮಂಗಳೂರು ಸೆಪ್ಟೆಂಬರ್ 22: ಮಂಗಳೂರು ಸುರತ್ಕಲ್ ಹೊರವಲಯದ ಇಡ್ಯಾ ಎಂಬಲ್ಲಿಯ ಜಾರ್ಡಿನ್ ಅಪಾರ್ಟ್ ಮೆಂಟ್ ನಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನವೀನ್, ರಘು, ಅಮೇಶ್, ಸಂತೋಷ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 224 ಗ್ರಾಂ ಚಿನ್ನ, 30.80 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಆಗಸ್ಟ್ 15 ರಂದು ಸುರತ್ಕಲ್ ಬಳಿಯ ಫ್ಲಾಟಿಗೆ ನುಗ್ಗಿ ಕಳ್ಳತನ ಕೃತ್ಯ ಎಸಗಿದ್ದರು. ಕೇರಳ ಮೂಲದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ನಗದು ಇಟ್ಟು ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಫ್ಲಾಟ್ ಅನ್ನು ವಹಿವಾಟಿಗೆ ಬಳಸಿಕೊಳ್ಳುತ್ತಿದ್ದರು.ಈ ಬಗ್ಗೆ ಅರಿತಿದ್ದ ಫ್ಲಾಟ್ ಸೆಕ್ರೆಟರಿ ನವೀನ್‌ನಿಂದ ಕಳ್ಳತನ ಪ್ಲಾನ್ ಹಾಕಿದ್ದ ಎಂದು ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಫ್ಲಾಟ್ ಮಾಲಕಿ ವಿದ್ಯಾ ಪ್ರಭು ಪೊಲೀಸರಿಗೆ ದೂರು ನೀಡಿದ್ದು, 51 ಲಕ್ಷ ನಗದು, 224 ಗ್ರಾಂ ಚಿನ್ನ ಕಳವಾಗಿದೆ ಎಂದು ತಿಳಿಸಿದ್ದರು. ಆರೋಪಿಗಳಿಂದ 30.85 ಲಕ್ಷ ನಗದು, ಚಿನ್ನ, ಕಾರು ವಶ ಪಡಿಸಿಕೊಳ್ಳಲಾಗಿದೆ.
DAKSHINA KANNADA
ಬಂಟ್ವಾಳ : 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರ್ ಡಿಕ್ಕಿ – ವಾಹನಗಳು ಜಖಂ
Published
50 minutes agoon
24/01/2025By
NEWS DESK2ಬಂಟ್ವಾಳ: ರಸ್ತೆ ಬದಿಯಲ್ಲಿ ಖಾಲಿ ಜಾಗದಲ್ಲಿ ನಿಲ್ಲಿಸಿ ಟಯರ್ ಚೆಕ್ ಮಾಡುತ್ತಿದ್ದ ವೇಳೆ 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಗಾಯವಿಲ್ಲದೆ ಪಾರಾಗಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ.
ವಿಟ್ಲದಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ವಾಪಸು ವಿಟ್ಲಕ್ಕೆ ಬರುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿದೆ. ಕಡೆಗೋಳಿ ಎಂಬಲ್ಲಿ ಆಂಬ್ಯುಲೆನ್ಸ್ ವಾಹನದ ಚಕ್ರದಲ್ಲಿ ಶಬ್ದ ಬಂದಿದೆ ಎಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕ ಕರುಣಾಕರ ಅವರು ಪರಿಶೀಲನೆ ಮಾಡುತ್ತಿದ್ದ ವೇಳೆ ಇನ್ನೋವ ಕಾರು ಚಾಲಕ ಶ್ರವಣ್ ಅಂಬ್ಯುಲೆನ್ಸ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಯಾವುದೇ ಗಾಯವಾಗದಿದ್ದರೂ ಎರಡು ವಾಹನಗಳಿಗೆ ಹಾನಿಯಾಗಿದೆ. ಪಾಣೆಮಂಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಸಚಿವ ಉತ್ತಮ್ ಕುಮಾರ್ ರೆಡ್ಡಿ ಬೆಂಗಾವಲು ಪಡೆಯ 8 ಕಾರುಗಳ ಸರಣಿ ಅಪಘಾತ
Published
57 minutes agoon
24/01/2025By
NEWS DESK3ಮಂಗಳೂರು/ಹೈದರಾಬಾದ್ : ತೆಲಂಗಾಣದ ನೀರಾವರಿ ಮತ್ತು ನಾಗರಿಕ ಪೂರೈಕೆ ಸಚಿವ ಉತ್ತಮ್ ಕುಮಾರ್ ರೆಡ್ಡಿ ಬೆಂಗಾವಲು ಪಡೆಯ 8 ಕಾರುಗಳು ಡಿಕ್ಕಿ ಹೊಡೆದಿವೆ.
ಸಚಿವರು ಹುಜೂರ್ ನಗರದಿಂದ, ಸೂರ್ಯಪೇಟೆ ಜಿಲ್ಲೆಯ ಜಾನ್‌ಪಹಾಡ್ ದರ್ಗಾಕ್ಕೆ ಹೋಗುತ್ತಿದ್ದ ವೇಳೆ, ಗರೀಡೆಪಲ್ಲಿ ಪಿಎಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ಇದನ್ನೂ ಓದಿ: ನಿಶ್ಚಿತಾರ್ಥಗೊಂಡ ಯುವತಿಯ ಆ ಒಂದು ಪ್ರಶ್ನೆಗೆ ಆತ್ಮಹ*ತ್ಯೆ ಮಾಡಿಕೊಂಡ ಯುವಕ ?
ಅಷ್ಟಕ್ಕೂ ಆಗಿದ್ದೇನು?
ಸಚಿವರ ಆಗಮನದ ಮಾಹಿತಿ ತಿಳಿದ ಕಾರ್ಯಕರ್ತರು ರಸ್ತೆಯಲ್ಲಿ ನಿಂತು ಕಾಯುತ್ತಿದ್ದರು. ಈ ವೇಳೆ ಸಚಿವ ಉತ್ತಮ್ ಕುಮಾರ್ ರೆಡ್ಡಿ ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ಏಕಾಏಕಿ ಚಾಲಕ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂದೆ ಬರುತ್ತಿದ್ದ ಬೆಂಗಾವಲು ಪಡೆಯ 8 ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
FILM
ಟಾಕ್ಸಿಕ್, ಕಾಂತಾರ ಎಫೆಕ್ಟ್; ಅರಣ್ಯದಲ್ಲಿ ಚಿತ್ರೀಕರಣಕ್ಕೆ ಹೊಸ ರೂಲ್ಸ್
Published
1 hour agoon
24/01/2025By
NEWS DESK4ಬೆಂಗಳೂರು/ಮಂಗಳೂರು : ಕಾಂತಾರ ಚಾಪ್ಟರ್ 1 ಮತ್ತು ಟಾಕ್ಸಿಕ್ ಸಿನಿಮಾಗಳು ಮಾಡಿರುವ ಎಡವಟ್ಟಿನಿಂದಾಗಿ ಅರಣ್ಯ ನಾಶವಾಗಿದೆ. ಇದು ಅರಣ್ಯ ಇಲಾಖೆಯ ಕೆಂಗಣ್ಣಿಗೆ ಕಾರಣವಾಗಿದೆ. ಟಾಕ್ಸಿಕ್ ಚಿತ್ರತಂಡ ಮರ ಕಡಿದ ಆರೋಪ ಎದುರಿಸಿದ್ದು, ಕಾಂತಾರ ತಂಡ ಬಾಂ*ಬ್ ಸ್ಫೋ*ಟಿಸಿ ಅರಣ್ಯ ನಾಶ ಮಾಡಿರುವ ಬಗ್ಗೆ ಭಾರೀ ದಂಡ ತೆತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅರಣ್ಯದಲ್ಲಿ ಚಿತ್ರೀಕರಣ ಮಾಡುವವರಿಗೆ ಹೊಸ ನಿಯಮ ಜಾರಿಗೊಳಿಸಿದೆ.
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಚಿತ್ರೀಕರಿಸಲು ಅನುಮತಿ ನೀಡಲಾಗುತ್ತಿದೆ. ಇದಲ್ಲದೆ, ಸ್ಥಳೀಯ ಮಟ್ಟದಲ್ಲೂ ಅಧಿಕಾರಿಗಳು ಅನುಮತಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿ ಹೊರ ಜಗತ್ತಿಗೆ ಲಭಿಸುವ ಸಂಭವ ಇರುತ್ತದೆ. ಇದು ಪರಿಸರ ಹಾಗೂ ಜೀವವೈವಿಧ್ಯಕ್ಕೂ ಧಕ್ಕೆ ತರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ನಿಶ್ಚಿತಾರ್ಥಗೊಂಡ ಯುವತಿಯ ಆ ಒಂದು ಪ್ರಶ್ನೆಗೆ ಆತ್ಮಹ*ತ್ಯೆ ಮಾಡಿಕೊಂಡ ಯುವಕ ?
ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಅರಣ್ಯ ಹಾಗೂ ವನ್ಯ ಜೀವಿಗಳನ್ನು ಉಳಿಸುವ ಹಿತದೃಷ್ಟಿಯಿಂದ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ಅನುಮತಿ ಪಡೆಯಬೇಕು ಎಂದು ಆದೇಶಿಸಲಾಗಿದೆ.
LATEST NEWS
ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ..? ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ
ನಿಶ್ಚಿತಾರ್ಥಗೊಂಡ ಯುವತಿಯ ಆ ಒಂದು ಪ್ರಶ್ನೆಗೆ ಆತ್ಮಹ*ತ್ಯೆ ಮಾಡಿಕೊಂಡ ಯುವಕ ?
ಈ ವಸ್ತುಗಳನ್ನು ತಪ್ಪಿಯೂ ನಿಮ್ಮ ಪ್ರೀತಿ ಪಾತ್ರರಿಗೆ ನೀಡಬೇಡಿ…
ತೆಂಗಿನೆಣ್ಣೆಯಲ್ಲಿ ಈ ಪುಡಿ ಮಿಕ್ಸ್ ಮಾಡಿ ಹಚ್ಚಿ, ನಿಮ್ಮ ತಲೆಯ ಮೇಲೆ ಒಂದೇ ಒಂದು ಬಿಳಿ ಕೂದಲು ಕಾಣಿಸೋದಿಲ್ಲ
ಉದ್ಯಮಿ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಪ್ರಕರಣ : ಅಂತರಾಜ್ಯ ದರೋಡೆಕೋರ ಅರೆಸ್ಟ್
ರಾತ್ರಿ ಬರಿಗಣ್ಣಿಗೆ ದರ್ಶನ ನೀಡುತ್ತಿರುವ ಗ್ರಹಗಳು
Trending
- BIG BOSS2 days ago
ಗೌತಮಿ-ಧನರಾಜ್ ಬೆನ್ನಲ್ಲೇ ಈ ವಾರ ಫಸ್ಟ್ ಎಲಿಮಿನೇಟ್ ಆಗೋದ್ಯಾರು ?
- BIG BOSS4 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- BIG BOSS23 hours ago
ಭಾವನೆಗಳ ಮಹಾಪೂರ ನೀನು, ಕನಸುಗಳ ಶಿಖರ ನೀನು: ಭವ್ಯಾಗೆ ತ್ರಿವಿಕ್ರಮ್ ಪ್ರಪೋಸ್
- BIG BOSS4 days ago
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಒಬ್ಬರಲ್ಲ ಇಬ್ಬರು… ಅಷ್ಟಕ್ಕೂ ಟ್ರೋಫಿ ನೀಡಿದ ಸುಳಿವೇನು ?