Sunday, December 4, 2022

ಖ್ಯಾತ ನಿರೂಪಕ ಅರ್ನಬ್ ಗೋಸ್ವಾಮಿ ಬಂಧನ ಹಿನ್ನೆಲೆ: ರಾಜ್ಯ ರಾಜಕೀಯದಲ್ಲಿ ಖಂಡನೆ

ಖ್ಯಾತ ನಿರೂಪಕ ಅರ್ನಬ್ ಗೋಸ್ವಾಮಿ ಬಂಧನ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ಖಂಡನೆ

ರಿಪಬ್ಲಿಕ್ ಟಿವಿಯ ಖ್ಯಾತ ನಿರೂಪಕ ಸಂಪಾದಕ ಅರ್ನಬ್ ಗೋಸ್ವಾಮಿ 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪದ ಮೇಲೆ ನವಂಬರ್ 4 ರಂದು ಅರ್ನಬ್ ಗೋಸ್ವಾಮಿಯವರ ಮನೆಗೆ ದಾಳಿ ನಡೆಸಿ, ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಂಧನ ಹಿನ್ನೆಲೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

ರಾಜ್ಯ ರಾಜಕೀಯದ ಹಲವು ನಾಯಕರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಷ್ಟೇ ಅಲ್ಲದೆ ರಾಜ್ಯದಲ್ಲೂ ಅರ್ನಬ್ ಗೋಸ್ವಾಮಿಯ ಬಂಧನವನ್ನು ಖಂಡಿಸಿದ್ದಾರೆ.

ಈ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಾ।ಸಿ.ಎನ್ ಅಶ್ವತ್ಥ್ ನಾರಾಯಣ್ ಒಗ್ಗಟ್ಟಿನಿಂದ ಈ ಬಗ್ಗೆ ಹೋರಾಡಬೇಕಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಹಾರಾಷ್ಟ್ರ ಸರ್ಕಾರ ತನ್ನ ಅಧಿಕಾರ ಬಲವನ್ನ ದುರ್ಬಳಕೆ ಮಾಡುತ್ತಿದೆ. ಎಂದು ಆರೋಪಿಸಿದ್ದಾರೆ..
ಈ ನಡುವೆ ಪೊಲೀಸರು ಬಂಧನಕ್ಕೂ ಮುನ್ನ ದೈಹಿಕವಾಗಿ ಹಲ್ಲೆ ನಡೆಸಿರುವ ಕುರಿತು ಅರ್ನಬ್ ಗೋಸ್ವಾಮಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics