ಕಡಬ: ಗೋಣಿಯಲ್ಲಿ ಕಟ್ಟಿಟ್ಟಿದ್ದ ಅಡಕೆಯನ್ನು ಪರಿಚಿತ ವ್ಯಕ್ತಿಯೊಬ್ಬ ಕದ್ದೋಯ್ದ ಘಟನೆ ಕಡಬ ಠಾಣೆಯ ಹಳೆನೇರಂಕಿ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಅಲೇಪ್ಪಾಡಿ ನಿವಾಸಿ ಸುಕೇಶ ಎಂಬುವವರು ತನ್ನ ಮನೆಯ ಅಂಗಳದಲ್ಲಿ ಎರಡು ಗೋಣಿ ಚೀಲಗಳಲ್ಲಿ ಅಡಿಕೆ ತುಂಬಿಸಿಟ್ಟಿದ್ದರು. ಬುಧವಾರದಂದು ಕೆಲಸದ ನಿಮಿತ್ತ ತೋಟಕ್ಕೆ ತೆರಳಿದ ವೇಳೆ ಪಕ್ಕದ ಮನೆಯ ಪರಮೇಶ್ವರ ಎಂಬಾತ ಒಂದು ಗೋಣಿ ಅಡಿಕೆ ಚೀಲ ಕದ್ದೋಯದ್ದಿದ್ದಾನೆಂಬು ಕಡಬ ಠಾಣೆಗೆ ಸುಕೇಶ್ ದೂರು ನೀಡಿದ್ದಾರೆ.