Saturday, August 20, 2022

ಕೊಣಾಜೆ: ಅಂಗಳದಲ್ಲಿ ಒಣಗಿಸಿಟ್ಟ 60 ಕೆ.ಜಿ ಅಡಿಕೆ ಕಳ್ಳತನ

ಉಳ್ಳಾಲ: ಮನೆ ಅಂಗಳದಲ್ಲಿ ಒಣಗಿಸಿಟ್ಟ ಸಾವಿರಾರು ಬೆಲೆಯ ಅಡಿಕೆಯನ್ನು ಕಳ್ಳರು ಕಳವು ನಡೆಸಿರುವ ಘಟನೆ ಕೊಣಾಜೆ ಗ್ರಾಮದ ನಾಟೆಕಲ್‌ಸೈಟ್ ಎಂಬಲ್ಲಿ ನಡೆದಿದೆ.

ನಾಟೆಕಲ್ ಸೈಟ್ ನಿವಾಸಿ ಮಹಮ್ಮದ್ ಎ.ಎಸ್ ಎಂಬವರ ಮನೆಯಿಂದ 60 kg ಅಡಿಕೆ ಯನ್ನು ಕಳ್ಳರು ಕಳವು ನಡೆಸಿದ್ದಾರೆ. ಒಣಗಿಸಲು ಇಡಲಾದ ಅಡಿಕೆಯ ಒಟ್ಟು ಮೌಲ್ಯ ರೂ.28,000 ಎಂದು ಅಂದಾಜಿಸಲಾಗಿದೆ. ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Hot Topics