ಪುತ್ತೂರು:ಶೋಷಿತರ ದಮನಿತರ ಪರ ಧ್ವನಿ ಎತ್ತಿ ಅಮರತ್ವ ಸಂಪಾಧಿಸಿದ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯ್ಯರ ಜನ್ಮಸ್ಥಳ ಹಾಗೂ ತಾಯಿ ದೇಯಿ ಬೈದೆತಿ ಸಮಾಧಿ ಸ್ಥಳ ಇರುವ ಪಡುಮಲೆಯಲ್ಲಿ ಇದೇ ಎಪ್ರಿಲ್ 22 ರಿಂದ 24 ರವರೆಗೆ ಪ್ರತಿಷ್ಠೆ ಹಾಗೂ ಬ್ರಹ್ಮಕಲಾಶಾಭಿಷೇಕದ ಸಂಭ್ರಮ ವಿಜ್ರಂಭಣೆಯಿಂದ ನಡೆಯಲಿದೆ.ಪೂರ್ವಭಾವಿಯಾಗಿ ಇಂದು ಪಡುಮಲೆ ಕ್ಷೇತ್ರಕ್ಕೆ ಎಣ್ಮೂರು ಕ್ಷೇತ್ರದಿಂದ ಗಂಧ, ತೀರ್ಥಪ್ರಸಾದ ಆಗಮನವಾಯಿತು. ಎಣ್ಮೂರು ಗರಡಿಯಿಂದ ಗಂಧಪ್ರಸಾದ, ತೀರ್ಥವನ್ನು ಎಣ್ಮೂರಿನ ಕೋಟಿಚೆನ್ನಯ ಗರಡಿಯ ಆಡಳಿತ ಮುಖ್ಯಸ್ಥರಾದ ರಾಮಕೃಷ್ಣ ಶೆಟ್ಟಿ ಮತ್ತು ಪದ್ಮಾ ಆರ್ ಶೆಟ್ಟಿ ದಂಪತಿಗಳ ಜೊತೆಗೆ ಲೋಕನಾಥ್ ರವರು ಪಡುಮಲೆ ಕ್ಷೇತ್ರಕ್ಕೆ ತಂದರು.
ಇನ್ನು ಗಂಧಪ್ರಸಾದ, ಹಾಗೂ ತೀರ್ಥವನ್ನು ಪಡುಮಲೆಯ ಅರಮನೆ ಇದ್ದ ಕ್ಷೇತ್ರಕ್ಕೆ ತಂದು ಅಲ್ಲಿ ಕೋಟಿಚೆನ್ನಯರಿಗೆ ಸಂಬಂಧಿಸಿದ ಕಲ್ಲಿಗೆ ಮತ್ತು ದೇಯಿಬೈದೆತಿ ಮದ್ದು ತಯಾರಿಸುತ್ತಿದ್ದ ಕಲ್ಲಿಗೆ ಸಂಪ್ರೋಕ್ಷಣೆ ಮಾಡಿ,
ಬಳಿಕ ಎರುಕೊಟ್ಯದಲ್ಲಿರುವ ತಾಯಿ ದೇಯಿಬೈದೆತಿಯ ಸಮಾಧಿಗೆ ಹಾಗೂ ನಾಗಬ್ರಹ್ಮರ ಗುಡಿ, ನಾಗನ ಕಟ್ಟೆ, ರಕ್ತೇಶ್ವರಿ ಕಟ್ಟೆಗೆ ಸಿಂಪಡಿಸಿ ಬಳಿಕ ತೀರ್ಥಬಾವಿಗೆ ಸಮರ್ಪಿಸಿ ಕ್ಷೇತ್ರವನ್ನು ಶುಧ್ಧಿಗೊಳಿಸಿದರು.
ಈ ಸಂಧರ್ಭ ಪಡುಮಲೆ ಕೋಟಿಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶಾಸಕ ಸಂಜೀವ ಮಠಂದೂರು, ವಿಜಯಕುಮಾರ್ ಸೊರಕೆ, ಪ್ರವರ್ತಕ ಚರಣ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ, ಚಿನ್ಮಯಿ , ಸುರೇಶ್ ಆಳ್ವ ಪುತ್ತೂರು ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ ಕರ್ಕೇರ ಮತ್ತಿತ್ತರು ಉಪಸ್ಥಿತರಿದ್ದರು.