Connect with us

    LATEST NEWS

    ಬಾಲಗೌರವ, ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

    Published

    on

    ಮಂಗಳೂರು: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ 18 ವರ್ಷದೊಳಗಿನ ಮಕ್ಕಳಿಗೆ ರಾಜ್ಯ ಬಾಲವಿಕಾಸ ಅಕಾಡೆಮಿಯಿಂದ ‘ಬಾಲಗೌರವ’ ಹಾಗೂ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಲಾಗಿದೆ.


    ಕ್ರೀಡಾ, ನೃತ್ಯ, ಸಂಗೀತ, ಸಾಹಿತ್ಯ, ಕರಕುಶಲ, ಚಿತ್ರಕಲೆ ಕ್ಷೇತ್ರಗಳಲ್ಲಿ ಹಾಗೂ ಬಹುಮುಖ ಪ್ರತಿಭೆ, ನಾಟಕ ಕ್ಷೇತ್ರದಂತಹ 8 ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಸಾಧಾರಣಾ ಸಾಧನೆ ಮಾಡಿದ ಪ್ರಶಸ್ತಿ ಪುರಸ್ಕøತ ಮಕ್ಕಳು ಸ್ವಯಂ ದೃಢೀಕರಣ ನಕಲು, ಸ್ವವಿವರ, ದಾಖಲೆಗಳೊಂದಿಗೆ ಹಾಗೂ ಜನವರಿಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ, ಮಕ್ಕಳ ಸಾಹಿತ್ಯ ವಿಮಾರ್ಶಾ ಕೃತಿಯಂತಹ 7 ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ರಚಿಸಿದ ಮಕ್ಕಳು ಪ್ರತಿಯೊಂದು ಕೃತಿಯ 4 ಪ್ರತಿಯೊಂದಿಗೆ ಸ್ವವಿವರವನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಎಚ್.ಬಿ ಕಾಲೋನಿ, ಲಕಮನಹಳ್ಳಿ, ಧಾರವಾಡ-580004 ಈ ವಿಳಾಸಕ್ಕೆ ಕಳುಹಿಸಬೇಕು.
    ಯಾವ ವಿಭಾಗದ ಪ್ರಶಸ್ತಿಯೆಂದು ನಮೂದಿಸಿ ಕಳುಹಿಸಬೇಕು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0836-2461666ಅನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    LATEST NEWS

    ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ

    Published

    on

    ದಿನಕಳೆದಂತೆ ದಿನಬಳಕೆ ವಸ್ತುಗಳೆಲ್ಲಾ ದುಬಾರಿಯಾಗುತ್ತಿದೆ. ಅದರಂತೆ ನಿತ್ಯ ಅಡುಗೆ ಮಾಡಲು ಬೇಕಾದ ಗ್ಯಾಸ್ ಬೆಲೆ ಕೂಡಾ ಹೆಚ್ಚುತ್ತಿದೆ. ಹೀಗಾಗಿ ಅಡುಗೆ ಅನಿಲ ಉಳಿತಾಯ ಮಾಡಲು ಏನು ಮಾಡಬಹುದು ಎಂಬ ಯೋಚನೆ ನಿಮ್ಮದಾಗಿರಬಹುದು. ಇದಕ್ಕೆ ಸಲಹೆ ಇಲ್ಲಿದೆ.

    ಗ್ಯಾಸ್‌ನಲ್ಲಿ ಅಡುಗೆ ಮಾಡುವಾಗ ನೀವು ಕೆಲವು ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಅನಿಲದ ವೆಚ್ಚವನ್ನು ಕಡಿಮೆ ಮಾಡಬಹುದು. ಅಕ್ಕಿ, ಬೇಳೆಕಾಳು ಹಾಗೂ ತರಕಾರಿಗಳನ್ನು ಬೇಯಿಸುವಾಗ ಕೆಲವೊಂದು ಸಲಹೆಗಳನ್ನು ಸನುಸರಿಸಿ. ಬೇಯಿಸುವ ಮೊದಲು ಅಕ್ಕಿ (ಕೆಲವೊಂದು ಅಕ್ಕಿ ಮಾತ್ರ) ಮತ್ತು ಬೇಳೆಕಾಳುಗಳನ್ನು 1 ಗಂಟೆ ಕಾಲ ನೆನೆಸಿಡಿ. ಆಗ ಅವು ಮೃದುವಾಗುತ್ತದೆ. ಹೀಗಾಗಿ ಬೇಗನೆ ಬೇಯುತ್ತದೆ. ನಿಮ್ಮ ಗ್ಯಾಸ್‌ ಉಳಿಯುತ್ತದೆ.

    ನೆನೆಸಿದ ನಂತರ, ಬೇಳೆಕಾಳುಗಳನ್ನು ಕಡಿಮೆ ಶಾಖದಲ್ಲಿ ಪಾತ್ರೆಯಲ್ಲಿ ಕುದಿಸಿ. ನಿಮಗೆ ಕುಡಿಯಲು ನೀರು ಬೇಕೆಂದರೆ, ಬೇಳೆ ಕಾಳು ಪಾತ್ರೆ ಮೇಲೆ ಮತ್ತೊಂದು ಪಾತ್ರೆ ಇರಿಸಿ. ಮೇಲಿನ ನೀರು ಕೆಳಗಿನ ಪಾತ್ರೆಯ ಶಾಖದಿಂದ ಬಿಸಿಯಾಗುತ್ತದೆ. ನಿಮ್ಮ ಪಾತ್ರೆ ಎಷ್ಟು ದೊಡ್ಡದಿದೆಯೋ ಅದಕ್ಕೆ ತಕ್ಕವಾಗಿ ಗ್ಯಾಸ್‌ ಸ್ಟವ್‌ ಉರಿಸಿ. ಚಿಕ್ಕ ಪಾತ್ರೆ ಇದ್ದಾಗ ಸಿಮ್‌ನಲ್ಲಿಡಿ. ಆಗ ಗ್ಯಾಸ್‌ ಬಳಕೆ ಕಡಿಮೆಯಾಗುತ್ತದೆ.

    ಅಕ್ಕಿಯನ್ನು ಬೇಯಿಸುವಾಗ ಆರಂಭದಲ್ಲಿ ದೊಡ್ಡ ಉರಿಯಲ್ಲಿ ಬೇಯಿಸಿ. ಅನ್ನ ಬೇಯುವ ಹಂತಕ್ಕೆ ಬರುವಾಗ ಸಿಮ್‌ನಲ್ಲಿಡಿ. ತರಕಾರಿಗಳನ್ನು ಬೇಯಿಸುವಾಗಲೂ ಕೆಲವೊಂದು ಸುಲಭ ಟ್ರಿಕ್ ಅನುಸರಿಸಬೇಕು. ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುವ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬೇಯಲು ಕಡಿಮೆ ಸಮಯ ತೆಗೆದುಕೊಳ್ಳುವ ತರಕಾರಿಗಳನ್ನು ದೊಡ್ಡ ತುಂಡುಗಳಾಗಿ ಇಡಬಹುದು. ಅಡುಗೆ ಮಾಡುವಾಗ ತರಕಾರಿಗಳಿಗೆ ಮುಚ್ಚಳ ಮುಚ್ಚಿ ಬೇಯಿಸಿ. ಇದು ಹೆಚ್ಚು ಗ್ಯಾಸ್ ತೆಗೆದುಕೊಳ್ಳುವುದಿಲ್ಲ. ಸಾಧ್ಯವಾದಷ್ಟು ತರಕಾರಿಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ.

    ಗ್ಯಾಸ್‌ ಮೇಲೆ ಚಹಾ ಅಥವಾ ಇತರ ಆಹಾರವನ್ನು ತಯಾರಿಸುವಾಗ ಸಣ್ಣ ಬರ್ನರ್‌ನಲ್ಲಿ ಮಧ್ಯಮ ಉರಿಯಲ್ಲಿ ಅಡುಗೆ ಮಾಡಲು ಪ್ರಯತ್ನಿಸಿ. ಎಲ್ಲಾ ಸಮಯದಲ್ಲಿ ಹೆಚ್ಚು ಗ್ಯಾಸ್‌ ವ್ಯರ್ಥವಾಗುವಂತೆ ದೊಡ್ಡ ಉರಿ ಬೇಡ. ಇದು ಸಾಕಷ್ಟು ಅನಿಲವನ್ನು ಉಳಿಸಬಹುದು.

    ಗ್ಯಾಸ್‌ ಲೀಕೇಜ್‌ ಆಗದಂತೆ ಎಚ್ಚರವಹಿಸಿ. ಒಲೆ ಸಿಮ್‌ನಲ್ಲಿಟ್ಟು ಅಡುಗೆ ಮಾಡುವ ಅಭ್ಯಾಸ ಮಾಡಿ.‌ ಕುಕ್ಕರ್‌ ಬಳಕೆ ಜಾಸ್ತಿ ಮಾಡಿ. ಮೇಲಿನ ಎಲ್ಲಾ ಸಲಹೆ ಅಭ್ಯಾಸ ಮಾಡಿದರೆ, ನಿಮ್ಮ ಗ್ಯಾಸ್‌ ಕೆಲವು ದಿನಗಳವರೆಗಾದರೂ ಹೆಚ್ಚು ಬಾಳಿಕೆ ಬರುತ್ತದೆ.

    Continue Reading

    International news

    ಬೆಂಗಳೂರಿನಲ್ಲಿ ನಡೆಯಲಿದೆ ಡಬ್ಲ್ಯುಪಿಎಲ್ ಮಿನಿ ಹರಾಜು

    Published

    on

    ಮಂಗಳೂರು/ಬೆಂಗಳೂರು: ಐಪಿಎಲ್ ಹರಾಜು ಪ್ರಕ್ರಿಯೆ ಈಗಗಾಲೇ ಮುಗಿದಿದ್ದು, ಈಗ ಮಹಿಳಾ ಪ್ರೀಮಿಯರ್ ಲೀಗ್ ಗಾಗಿ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ನಡೆಯಲಿದೆ.


    ಮಹಿಳೆಯರ ಪ್ರೀಮಿಯರ್ ಲೀಗ್ ನ ಮುಂದಿನ ಸೀಸನ್ ಗಾಗಿ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಮಿನಿ ಹರಾಜು ನಡೆಯಲಿದೆ. ಡಬ್ಲ್ಯುಪಿಎಲ್ ನಲ್ಲಿ ಒಟ್ಟು 5 ತಂಡಗಳು ಪಾಲ್ಗೋಳ್ಳುತ್ತಿವೆ. ಅದರಲ್ಲಿ ಪ್ರತಿ ತಂಡವು ಆರು ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು. ಭಾಗಶಃ ತಂಡಗಳು ತಮ್ಮ ಹಳೆಯ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.

    ಇದನ್ನೂ ಓದಿ: 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲಾತಾಣ ಬಳಕೆಗೆ ನಿಷೇಧ; ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್ !

    ಈ ಬಾರಿಯ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಅಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಅಲ್ ರೌಂಡರ್ ಸ್ನೇಹ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣ ಮೂರ್ತಿ ಕೂಡ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಇನ್ನೂ ಹಲವು ಯುವ ಆಟಗಾರ್ತಿಯರನ್ನು ಖರೀದಿಸಲು ತಂಡಗಳು ಕಾಯುತ್ತಿವೆ.

    Continue Reading

    LATEST NEWS

    ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ

    Published

    on

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 31 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ.

    ಕಳೆದ 31 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, 3,92,58,940 ರೂ. ಕಾಣಿಕೆ ಸಂಗ್ರಹವಾಗಿದೆ. ರಜೆ, ಹಬ್ಬದ ಹಿನ್ನೆಲೆ ಮಂತ್ರಾಲಯ ಮಠಕ್ಕೆ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ.

    ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3 ಕೋಟಿ 83 ಲಕ್ಷ 93,760 ರೂ. ಕರೆನ್ಸಿ ನೋಟುಗಳು ಹಾಗೂ 8,65,180 ರೂ. ನಾಣ್ಯಗಳು ಸಂಗ್ರಹವಾಗಿವೆ. ಇನ್ನೂ 174 ಗ್ರಾಂ ಚಿನ್ನ, 1270 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಳೆದ ವರ್ಷ ನವೆಂಬರ್ ತಿಂಗಳ ಕಾಣಿಕೆ ಹುಂಡಿಯಲ್ಲಿ ಒಟ್ಟು 2,86,43,454 ರೂ. ಕಾಣಿಕೆ ಸಂಗ್ರಹವಾಗಿತ್ತು.

    ಮಂತ್ರಾಲಯ ಮಠದಲ್ಲಿ ನಿನ್ನೆ (ನ.28) ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಗುರುಪಾದ ಕರಸೇವಕರು ಭಾಗವಹಿಸಿದ್ದರು.

    Continue Reading

    LATEST NEWS

    Trending