Friday, July 1, 2022

ಗಮನಿಸಿ: ಅರಿವು ಸಾಲ ಯೋಜನೆಗೆ ಅರ್ಜಿ ಆಹ್ವಾನ-ಜು.20 ಕೊನೆ ದಿನಾಂಕ

ಮಂಗಳೂರು: ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿಗೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ,

ಸಿಖ್ಖ್ ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಂದ ಸಿ.ಇ.ಟಿ/ನೀಟ್ (ಎಮ್.ಬಿ.ಬಿ.ಎಸ್, ಬಿ.ಡಿ.ಎಸ್,

ಆಯುಷ್, ಬಿ.ಇ, ಬಿ.ಟೆಕ್ ವಿದ್ಯಾರ್ಥಿಗಳಿಂದ ಅರಿವು ಸಾಲ ಸೌಲಭ್ಯ ಪಡೆಯಲು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ವೆಬ್ ಸೈಟ್: kmdconline.karnataka.gov.in ಮೂಲಕ ಅರ್ಜಿ ಸಲ್ಲಿಸಿದ ನಂತರ ಇಂಡೆಮ್ನಿಟಿ ಬಾಂಡ್ ಹಾಗೂ ಸೂಕ್ತ ದಾಖಲೆಯೊಂದಿಗೆ ನಗರದ ಪಾಂಡೇಶ್ವರದಲ್ಲಿರುವ

ಮೌಲಾನಾ ಅಜಾದ್ ಭವನದ 2ನೇ ಮಹಡಿಯಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮಕ್ಕೆ ಜುಲೈ 20ರೊಳಗೆ ಅರ್ಜಿ ಸಲ್ಲಿಸಬೇಕು.

ಬೇಕಾಗುವ ದಾಖಲೆಗಳು:
ಜಾತಿ ಮತ್ತು 8 ಲಕ್ಷ ರೂ.ಗಳ ಮೀರದ ಆದಾಯ ಪ್ರಮಾಣ ಪತ್ರ, ಆಧಾರ್, ಪಡಿತರ ಚೀಟಿ, ಸಿ.ಇ.ಟಿ/ನೀಟ್ ಪರೀಕ್ಷೆ ಪ್ರವೇಶ ಪತ್ರ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಅಂಕ ಪಟ್ಟಿ,

50 ರೂಪಾಯಿ ಇ-ಸ್ಟ್ಯಾಂಪ್‍ನೊಂದಿಗೆ ಇಂಡಿಮ್ನಿಟಿ ಬಾಂಡ್ ಹಾಗೂ ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ-2 ಎಂದು ಅಲ್ಪ ಸಂಖ್ಯಾತರ ಅಭಿವೃಧ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕ್ಷುಲ್ಲಕ ಕಾರಣಕ್ಕೆ ಮಗುವನ್ನು ಕತ್ತು ಹಿಸುಕಿ ಕೊಂದು ತಾಯಿ ಜೀವಾಂತ್ಯ

ಬೆಂಗಳೂರು: ಮೂರೂವರೆ ವರ್ಷದ ಮಗುವನ್ನು ವೇಲ್‌ನಿಂದ ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ದೀಪಾ (31) ತನ್ನ ಮಗು...

ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ: ನಟಿ ಪವಿತ್ರ ಲೋಕೇಶ್‌

ಬೆಂಗಳೂರು: ನನಗೆ ಸುಚೇಂದ್ರ ಪ್ರಸಾದ್‌ ಜೊತೆ ಮದುವೆಯೇ ಆಗಿಲ್ಲ. ಮದುವೆಯೇ ಆಗದಿದ್ದರೆ ನಾನು ಯಾಕೆ ಡಿವೋರ್ಸ್‌ ಕೊಡಬೇಕು ಎಂದು ಕನ್ನಡ ಚಿತ್ರನಟಿ ಪವಿತ್ರ ಲೋಕೇಶ್‌ ಹೇಳಿಕೆ ನೀಡಿದ್ದಾರೆ.ಕೆಲದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ...

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ...