Connect with us

DAKSHINA KANNADA

ಮಂಗಳೂರು ಮಹಾನಗರ ಪಾಲಿಕೆಯಿಂದ ಜನ ವಿರೋಧಿ ಆಡಳಿತ : ನಾಳೆ ಸುರತ್ಕಲ್ ಪಾಲಿಕೆ ಕಚೇರಿ ಎದುರು ಪ್ರತಿಭಟನೆ..!

Published

on

ಮಂಗಳೂರು ಮಹಾನಗರ ಪಾಲಿಕೆಯಿಂದ ಜನ ವಿರೋಧಿ ಆಡಳಿತ : ನಾಳೆ ಸುರತ್ಕಲ್ ಪಾಲಿಕೆ ಕಚೇರಿ ಎದುರು ಪ್ರತಿಭಟನೆ..!

ಮಂಗಳೂರು : ಸುರತ್ಕಲ್ ಮಾರ್ಕೆಟ್ ಕಾಮಗಾರಿ ವಿಳಂಬ, ಈ ಖಾತಾ ಸಮಸ್ಯೆ, ಪ್ರಾಪರ್ಟಿ ಟ್ಯಾಕ್ಸ್, ಟ್ರೇಡ್ ಲೈಸೆನ್ಸ್ ಆನ್ಲೈನ್ ಸಿಸ್ಟಮ್,ಘನತ್ಯಾಜ ಸೆಸ್,ಹಾಗೂ ಕುಡಿಯುವ ನೀರಿನ ಬಿಲ್ಲುಗಳನ್ನು ಹೆಚ್ಚಳ ಗೊಳಿಸಿದ್ದು ಜನರ ಜೀವನ ದುಸ್ತರವಾಗಿದೆ.

ಈ ಪ್ರಯುಕ್ತ ನಾಳೆ ಬುಧವಾರ ಸುರತ್ಕಲ್ ಪಾಲಿಕೆ ಮುಂಭಾಗ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುರತ್ಕಲ್ ಪಾಲಿಕೆ ವಲಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸದಾಶಿವ ಶೆಟ್ಟಿ‌ ಕುಳಾಯಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ನುಡಿದರು.

ಡಾ.ಮೊಯಿದೀನ್ ಬಾವಾ ಅವರು ಅಧಿಕಾರದಲ್ಲಿದ್ದಾಗ ಉತ್ತಮ ಅಬಿವೃದ್ಧಿ ಕಾರ್ಯಗಳಾಗಿತ್ತು.ಇದೀಗ ನಿಂತ ನೀರಾಗಿದೆ.
ಮಂಗಳೂರು ಉತ್ಯರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ.

ಇದೀಗ ಮಂಗಳೂರು ಮಹಾನಗರ ಪಾಲಿಕೆ ಜನರಿಗೆ ಎಲ್ಲಾ ತೆರಿಗೆ ಜಾಸ್ತಿ ಮಾಡುವ ಮೂಲಕ ಬಡವರು ತಲೆ ಎತ್ತದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ವೈ.ರಾಘವೇಂದ್ರ ರಾವ್ ಅವರು ಪಾಲಿಕೆಯಿಂದ ತೆರಿಗಳನ್ನು ದ್ವಿಗುಣಗೊಳಿಸುವ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಮುಖಂಡ ಆನಂದ ಅಮೀನ್ ಮಾತನಾಡಿ ಖಾತೆ ಸಮಸ್ಯೆ, ನಿರಂತರವಾಗಿದೆ .ಜನರು ದಾಖಲೆ ಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ.
ನೀರಿನ ಬಿಲ್ ಹೆಚ್ಚಳದಿಂದ ಸಂದರ್ಭದಲ್ಲಿ ಹಣ ಪಾವತಿಸಲು ಪರದಾಡುವಂತಾಗಿದೆ .ಈ ಎಲ್ಲಾ ಜನರ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

Click to comment

Leave a Reply

Your email address will not be published. Required fields are marked *

DAKSHINA KANNADA

PUTTUR : ಅಂಗನವಾಡಿಯಲ್ಲಿ ಆಮ್ಲೇಟ್‌ ತಯಾರಿ; ಆರೋಗ್ಯ ಕೇಂದ್ರದ ಸಿಸಿ ಟಿವಿ ಕದ್ದು ಪರಾರಿ; ಕಿಡಿಗೇಡಿಗಳ ಅನೈತಿಕ ಚಟುವಟಿಕೆಗೆ ಯಾವಾಗ ಬ್ರೇಕ್!?

Published

on

ಪುತ್ತೂರು : ನಗರದ ಹೃದಯಭಾಗದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಾಡಬಾರದ್ದು ಮಾಡಿ ಸಿಸಿ ಕ್ಯಾಮೆರಾ ಸಹಿತ ಪರಾರಿಯಾಗಿದ್ದಾರೆ. ಆದ್ರೆ, ಪ್ರಕರಣ ದಾಖಲಿಸಿ ಅಂತ ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳಿಗೆ ಅಂತ ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದಿರುವ ಕಿಡಿಗೇಡಿಗಳು, ಬಳಿಕ ಪಕ್ಕದಲ್ಲೇ ಇರೋ ಆರೋಗ್ಯ ಕೇಂದ್ರದಲ್ಲಿ ಏನಾದ್ರೂ ಸಿಗತ್ತದಾ ಎಂದು ತಡಕಾಡಿದ್ದಾರೆ. ಇನ್ನು ಇಲ್ಲೇ ಅನೈತಿಕ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಇದು ಕೇವಲ ಕಿಡಿಗೇಡಿಗಳ ಕೃತ್ಯ ಮಾತ್ರ ಆಗಿರದೆ ಅನೈತಿಕ ದಂಧೆಯವರೂ ಇದರ ಹಿಂದೆ ಇದ್ದಾರೆ ಅನ್ನೋ ಅನುಮಾನ ಸ್ಥಳಿಯರದ್ದು.

ಯಾಕಂದ್ರೆ ನಗರದ ನಡುವೆ ಇದ್ರೂ ಕೂಡಾ ರಾತ್ರಿಯಾದ ಮೇಲೆ ಇದೊಂದು ನಿರ್ಜನ ಪ್ರದೇಶವಾಗಿ ಜನ ಓಡಾಟ ಇರೋದು ಕಡಿಮೆ. ಹೀಗಾಗಿ ತಮ್ಮ ಅನೈತಿಕ ಚಟುವಟಿಕೆಗೆ ಈ ಜಾಗವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸ್ಥಳಿಯರ ಅನುಮಾನ.

ಈ ಹಿಂದೆಯೂ ಅನೇಕ ಬಾರಿ ಇಂತಹ ಘಟನೆ ಇದೇ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಆಗಲೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಇತ್ತೀಚೆಗೆ ಇಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಬಾರಿ ಕಿಡಿಗೇಡಿಗಳು ಗುರುತು ಪತ್ತೆಯಾಗಬಾರದು ಅಂತ ಸಿಸಿಟಿವಿನ್ನೇ ಹೊತ್ತೊಯ್ದಿದ್ದಾರೆ.
ಶಾಲೆ ಹಾಗೂ ಆರೋಗ್ಯ ಕೇಂದ್ರ ಒಂದೇ ಕಡೆ ಇದ್ರೂ ಇದಕ್ಕೆ ಸೂಕ್ತ ಭದ್ರತೆ ಇಲ್ಲ. ಆವರಣ ಗೋಡೆಯೂ ಇಲ್ಲದೆ ಇರೋದ್ರಿಂದ ಇಂತಹ ಕಿಡಿಗೇಡಿಗಳಿಗೆ ಕೃತ್ಯ ನಡೆಸಲು ಅನುಕೂಲ ಆಗಿದೆ. ಆದ್ರೆ, ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಬದಲಾಗಿ ಮೌನಕ್ಕೆ ಶರಣಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

DAKSHINA KANNADA

ಮಾರ್ಚ್ 25 ರ ವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ!

Published

on

ಸುಡು ಬಿಸಿಲಿನಿಂದ ಕರ್ನಾಟಕವೇ ಸುಡುತ್ತಿದೆ. ಅದರಲ್ಲೂ ಕರಾವಳಿ ಭಾಗದ ಬಗ್ಗೆಯಂತೂ ಹೇಳತೀರದು. ಈ ನಡುವೆ ಕೆಲವೆಡೆ ಈಗಾಗಲೇ ಮಳೆ ತಂಪೆರೆದಿದೆ. ಮಾರ್ಚ್ 25ರ ವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಲಿದೆ ಎಂದು ಭಾರತಿಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಇಂದಿನಿಂದ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ಮಳೆ ಬರಲಿದೆ ಎಂದು ತಿಳಿಸಲಾಗಿದೆ. ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಸಾಧ್ಯತೆ ಇದೆ.

ಹವಾಮಾನದಲ್ಲಿ ತೀವ್ರ ತರಹದ ಬದಲಾವಣೆಗಳು ಆಗಿವೆ. ಸಮುದ್ರ ಮೇಲ್ಮೈ ಸುಳಿಗಾಳಿಯ ತೀವ್ರತೆ ಹೆಚ್ಚಾದ ಪರಿಣಾಮ ಮಳೆಯಾಗುತ್ತಿದೆ. ಇಂದಿನಿಂದ (ಮಾರ್ಚ್ 19-21) ಮೂರು ದಿನ ಒಳನಾಡು ಜಿಲ್ಲೆಗಳಾದ ಬೀದರ್, ರಾಯಚೂರು ಮತ್ತು ಕೊಪ್ಪಳದ ಕೆಲವೆಡೆ ಮಳೆ ಸುರಿಯಲಿದೆ.

ಎಲ್ಲೆಲ್ಲಿ ಮಳೆ?
ಮಾರ್ಚ್ 22ರಂದು ಇಲ್ಲೆಲ್ಲಾ ವ್ಯಾಪಕ ಮಳೆ ಮಾರ್ಚ್ 22ರಂದು ಕೊಪ್ಪಳ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಚಿತ್ರದುರ್ಗದಲ್ಲಿ ಮಳೆ ಆರ್ಭಟಿಸಲಿದೆ.

ಮಾರ್ಚ್ 23ರಿಂದ ಮಾರ್ಚ್ 25ರವರೆಗೆ ಮೂರು ದಿನ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳು ಒಳಗೊಂಡಂತೆ ಒಂದು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ವಿವಿಧೆಡೆ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಾಪಮಾನ ಇಳಿಕೆ?
ಕರಾವಳಿ ಸೇರಿದಂತೆ ಒಳನಾಡು ಭಾಗದಲ್ಲಿ ಉಂಟಾಗಿದ್ದ ಶಾಖ ಅಲೆಯ ವಾತಾವರಣ ತುಸು ಇಳಿಕೆ ಆಗಲಿದೆ. ಆಗಾಗ ಬಿಸಿಲು ಕಂಡರೂ ಸಹಿತ ಅಷ್ಟಾಗಿ ಗರಿಷ್ಠ ತಾಪಮಾನ ಇರಲಾರದು ಎನ್ನಲಾಗಿದೆ.

ಮಳೆಯ ಆಗಮನದಿಂದಾಗಿ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಇಳಿಕೆ ಆಗಲಿದೆ. ಒಂದೆರಡು ದಿನಗಳಿಂದ ಬೀದರ್, ಕಲಬುರಗಿ, ಕೊಡಗು ಜಿಲ್ಲೆಗಳ ಹಲವೆಡೆ ಜೋರು ಮಳೆ ದಾಖಲಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನ, ಜಾನುವಾರುಗಳಿಗೆ ಈ ತಾತ್ಕಾಲಿಕ ಮಳೆಯಿಂದ ಕೊಂಚ ಸುಧಾರಿಸಿಕೊಳ್ಳುವಂತಾಗಿದೆ.

Continue Reading

DAKSHINA KANNADA

ದೈವದ ಕಾರ್ಯಕ್ಕೆ ಮುಸ್ಲೀಮರಿಗೆ ಆಹ್ವಾನ…!

Published

on

ಮಂಗಳೂರು : ಕರಾವಳಿಯಲ್ಲಿ ಅದೆಷ್ಟೇ ಹಿಂದೂ ಮುಸ್ಲಿಂ ಅನ್ನೋ ಸಂಘರ್ಷಗಳು ನಡೆದರೂ ಬಹುತೇಕ ಕಡೆಗಳಲ್ಲಿ ಎರಡೂ ಧರ್ಮದವರು ಸಾಮರಸ್ಯದಿಂದಲೇ ಇದ್ದಾರೆ. ಇಂತಹ ಒಂದು ಸಾಮರಸ್ಯಕ್ಕೆ ಸಾಕ್ಷಿಯಾಗಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮ ಸುದ್ದಿಯಾಗಿದೆ. ಇಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆಯುವ ದೈವಗಳ ಕಾರ್ಯಕ್ರಮಕ್ಕೆ ಪದರಂಗಿ ಮಸೀದಿಯವರಿಗೆ ಆಹ್ವಾನ ನೀಡಿದ್ದಾರೆ.

ತೆಂಕ ಎಡಪದವಿನ  ಕೊಂದೋಡಿ ಗಡುಸ್ಥಳ ವ್ಯಾಘ್ರ ಚಾಮುಂಡಿ ಮೈಸಂದಾಯ ದೈವಗಳ ಗರ್ಭಕುಂಡ ಹಾಗೂ ಮಹಮ್ಮಾಯಿ ಅಮ್ಮನವರ ಶಿಲಾಮಯ ಕಟ್ಟಯ ಪುನರ್‌ ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಈ ಆಹ್ವಾನ ನೀಡಲಾಗಿದೆ. ರಂಝಾನ್‌ ಪ್ರಯುಕ್ತ ನಮಾಜ್‌ ನಡೆಸುತ್ತಿದ್ದ ಮುಸ್ಲಿಂ ಬಾಂದವರ ನಮಾಜ್ ಮುಗಿಯುವರೆಗೂ ಕಾದೂ ಆಹ್ವನಾ ಪತ್ರ ನೀಡಿ ಸಾಮರಸ್ಯ ಮೆರೆಯಲಾಗಿದೆ. ಇವತ್ತಿನ ದಿನಗಳಲ್ಲಿ ಹಿಂದೂ-ಮುಸ್ಲಿಮರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೋಮು ಸೌಹಾರ್ದತೆ ಹದಗೆಡುತ್ತಿರುವ ದಿನಗಳಲ್ಲಿ ಇವರ ಸಾಮರಸ್ಯದ ನಡೆ ಇತರರಿಗೆ ಮಾದರಿಯಾಗಿದೆ. ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಪ್ರಭು.ಕೆ, ಇವರ ಮುಂದಾಳತ್ವದಲ್ಲಿ ಪದರಂಗಿಯ ಮುಸ್ಲಿಂ ಬಾಂದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಗ್ರಾಮದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

Continue Reading

LATEST NEWS

Trending