Friday, March 31, 2023

ಆಸ್ಟ್ರೇಲಿಯಾದ ಹಿಂದೂ ದೇವಾಲಯದಲ್ಲಿ ಭಾರತ ವಿರೋಧಿ ಬರಹ..!ಭಾರತಕ್ಕೆ ಧಿಕ್ಕಾರ, ಮೋದಿ ಟೆರರಿಸ್ಟ್..!

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ತಾನಿ ವಿಧ್ವಂಸಕ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಮಾ.4ರಂದು ನಡೆದಿದೆ.

ಬ್ರಿಸ್ಬೇನ್ : ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿರುವ ಲಕ್ಷ್ಮೀ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಖಲಿಸ್ತಾನಿ ವಿಧ್ವಂಸಕ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಮಾ.4ರಂದು ನಡೆದಿದೆ.

ಕಳೆದ ಎರಡು ತಿಂಗಳಲ್ಲಿ ಆಸ್ಟ್ರೇಲಿಯಾದ ಹಿಂದು ದೇವಾಲಯಗಳ ಮೇಲೆ ನಡೆಯುತ್ತಿರುವ 4ನೇ ದಾಳಿ ಇದಾಗಿದೆ.

ಖಲಿಸ್ತಾನಿ ಬೆಂಬಲಿಗರು ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ. ಗೋಡೆ ಮೇಲೆ ಭಾರತಕ್ಕೆ ಧಿಕ್ಕಾರ, ಮೋದಿ ಟೆರರಿಸ್ಟ್ ಎಂದೆಲ್ಲಾ ಗೀಚಲಾಗಿದೆ.

ಅಲ್ಲದೆ, ಖಲಿಸ್ತಾನಿ ರಾಷ್ಟ್ರದ ಹೋರಾಟಕ್ಕೆ ಅಡ್ಡಿ ಮಾಡದಂತೆ ಪಂಜಾಬಿಗಳಿಗೆ ಕರೆ ನೀಡಲಾಗಿದೆ.

ಶನಿವಾರ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ದೇವಸ್ಥಾನದ ಅಧ್ಯಕ್ಷ ಸತೀಂದರ್ ಶುಕ್ಲಾ ಅವರು ತಿಳಿಸಿದ್ದಾರೆ.

ಈಚೆಗೆ ಆಸ್ಟ್ರೇಲಿಯಾದ ಹಿಂದೂ ದೇವಾಲಯಗಳು ಮೇಲೆ ಭಾರತ ವಿರೋಧಿ ಘೋಷಣೆಗಳು ಮತ್ತು ಗೀಚು ಬರಹಗಳೊಂದಿಗೆ ಗೋಡೆಗಳನ್ನು ವಿರೂಪಗೊಳಿಸುತ್ತಿರುವ ಘಟನೆಗಳು ಹೆಚ್ಚಿದ್ದು, ಖಲಿಸ್ತಾನ ಬೆಂಬಲಿಗರ ದಾಳಿ ಹೆಚ್ಚಿದೆ.

ಕಳೆದ ತಿಂಗಳು, ಬ್ರಿಸ್ಬೇನ್‌ನ ಗಾಯತ್ರಿ ಮಂದಿರಕ್ಕೆ ಪಾಕಿಸ್ತಾನ ಮೂಲದ ಖಲಿಸ್ತಾನ್ ಉಗ್ರಗಾಮಿಗಳಿಂದ ಬೆದರಿಕೆ ಕರೆಗಳು ಬಂದಿತ್ತು.

ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಬೆಂಬಲಿಸುವಂತೆ ಹಿಂದೂ ಸಮುದಾಯವನ್ನು ಕೇಳಿಕೊಳ್ಳಲಾಗಿತ್ತು.

ಖಾಲಿಸ್ತಾನ್ ಬೆಂಬಲಿಗರು ಆಸ್ಟ್ರೇಲಿಯನ್ ಹಿಂದೂ ಸಮುದಾಯವನ್ನು ಭಯಭೀತಗೊಳಿಸುತ್ತಿದ್ದಾರೆ.

ನಮ್ಮ ಧರ್ಮವನ್ನು ಆಚರಿಸಲು ಮತ್ತು ದೇವಾಲಯಗಳಿಗೆ ಭೇಟಿ ನೀಡುವುದಕ್ಕೆ ಹಿಂಜರಿಯುವಂತೆ ಮಾಡುವುದು ಅವರ ಉದ್ದೇಶ ಎಂದು ಬ್ರಿಸ್ಬೇನ್ ನಿವಾಸಿಯೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics