ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ಕಾನೂನು ಜಾರಿಗೆ ಬಂದಿದೆ. ಆ ಕಾನೂನು ಪ್ರಬಲವಾಗಿದೆ. ಇದನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿಹೆಚ್ಪಿಯ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ ಹೇಳಿದ್ದಾರೆ.
ನಗರದ ಕದ್ರಿಯ ವಿಹೆಚ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋವಧೆ ಮಾಡಿದರೆ 3 ರಿಂದ 5 ವರ್ಷ ಶಿಕ್ಷೆಯಾಗುತ್ತದೆ.
ಜೊತೆಗೆ ಗೋಸಾಗಾಟದಲ್ಲಿ ಭಾಗಿಯಾದ ವಾಹನ ಮಾಲಕ, ಚಾಲಕ ಹಾಗೂ ಗೋವಿನ ಮಾಲಕನಿಗೆ ಶಿಕ್ಷೆಯಾಗುತ್ತದೆ.
ಜೊತೆಗೆ ಗೋಸಾಟಕ್ಕೆ ಬಳಸಿದ ವಾಹನವನ್ನು ಮುಟ್ಟುಗೋಲು ಹಾಕಲಾಗುತ್ತದೆ. ಇದನ್ನು ರೈತರು ಸಹ ಪಾಲಿಸಬೇಕು.
ಅಕ್ರಮ ದನ ಸಾಗಾಟ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಗೋಪಾಲ್ ಕುತ್ತಾರ್, ಪವಿತ್ರ ಕೆರೆಬೈಲ್, ಪ್ರದೀಪ ಪಂಪ್ವೆಲ್, ಪುನೀತ್ ಅತ್ತಾವರ್ ಮೊದಲಾದವರಿದ್ದರು.