Connect with us

LATEST NEWS

ಸರ್ಕಾರದಿಂದ ಮತ್ತೊಂದು ಗ್ಯಾರೆಂಟಿ..! ದೇವರ ನೇರ ದರ್ಶನಕ್ಕೆ ಅವಕಾಶ..!

Published

on

ಇತ್ತೀಚಿನ ವರ್ಷದಲ್ಲಿ ಅದರಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ಧಾರ್ಮಿಕ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ಉಚಿತ ಬಸ್ ಸೌಲಭ್ಯ ಹಾಗೂ ಗೃಹಲಕ್ಷ್ಮಿ ಹಣದ ಪ್ರಭಾವದಿಂದ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರ ದರ್ಶನ ಮಾಡುತ್ತಿದ್ದಾರೆ.

ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಕೊಡುಗೆ ನೀಡಲಾಗಿದೆ. ಇನ್ನು ಮುಂದೆ ಸಣ್ಣ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಸರತಿ ಸಾಲಿನಲ್ಲಿ ನಿಲ್ಲುವ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ನೇರ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಇಂತಹ ಒಂದು ಆದೇಶ ನೀಡಿದೆ. ಇಲಾಖೆಯ ಅಧೀನಕ್ಕೆ ಒಳಪಡುವ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಭಕ್ತರಿಗೆ ಈ ವ್ಯವಸ್ಥೆ ಮಾಡಲಾಗಿದೆ. 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಒಂದು ವರ್ಷದ ಕೆಳಗಿನ ಮಕ್ಕಳಿರುವ ಕುಟುಂಬಕ್ಕೆ ಈ ಸೌಲಭ್ಯ ದೊರೆಯಲಿದೆ. ಇಂತಹ ಭಕ್ತರನ್ನು ಹೊಂದಿರುವ ಕುಟುಂಬದ ಯಾರಾದರೂ ಓರ್ವ ಸದಸ್ಯ ನೇರವಾಗಿ ದೇವರ ದರ್ಶನಕ್ಕೆ ಇವರ ಜೊತೆ ಹೋಗಲು ಅವಕಾಶ ನೀಡಲಾಗಿದೆ. ಮಗು ಹಾಗೂ ತಾಯಿ ಮತ್ತು ಹಿರಿಯ ನಾಗರಿಕರ ಜೊತೆ ಯಾರಾದರೊಬ್ಬರು ಈ ಅವಕಾಶ ಪಡೆಯಲಿದ್ದಾರೆ.

LATEST NEWS

ರೋಹಿತ್ ಶರ್ಮಾ ಅವರ ಹೆಂಡತಿಗೆ ಕಳುಹಿಸಲಾದ ಸಂದೇಶವನ್ನು ಅಳಿಸಿ ಹಾಕಿದ ಆರ್.ಅಶ್ವಿನ್ !

Published

on

ಮಂಗಳೂರು/ಮುಂಬೈ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಖಾತೆಯೊಂದಿಗೆ ಆರ್ ಅಶ್ವಿನ್ ವಿಚಿತ್ರವಾದ ಸಂವಹನ ನಡೆಸಿದ್ದರು.

ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಈ ಬಗ್ಗೆ ಹಿರಿಯ ಕ್ರಿಕೆಟಿಗರು ಅಪಸ್ವರಗಳನ್ನು ತೆಗೆದಿದ್ದರು. ಆದರೆ ಅಶ್ವಿನ್ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಖಾತೆಯೊಂದಿಗೆ ವಿಚಿತ್ರವಾದ ಸಂವಹನ ನಡೆಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನಿನ್ನೆ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈ ಸರಣಿಯನ್ನು 1-3 ರಿಂದ ಸೋತಿದರಿಂದ್ದ, @Nishitha018 ಎಂಬ ಎಕ್ಸ್ ನಲ್ಲಿನ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರ್ಮ್ ಬಳಸಿ ಪ್ರೋಫೈಲ್ ನಲ್ಲಿ ರಿತಿಕಾ ಅವರ ಹೆಸರು ಮತ್ತು ಫೋಟೋ ಎಡಿಟ್ ಮಾಡಿ ಹಾಕಿದ್ದರು. ಇದರಲ್ಲಿ, “ಆಸ್ಟ್ರೇಲಿಯಾದವರು ನಮ್ಮನ್ನು ಸ್ವಚ್ಛಗೊಳಿಸಬಹುದು ಎಂದು ಭಾವಿಸಿದ್ದಾರೆ” ಎಂದು ಕಾಮೆಂಟ್ ಹಾಕಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೊಂದು ಆಘಾತ; ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್

ಇದು ರಿತಿಕಾ ಅವರ ಅಧಿಕೃತ ಖಾತೆ ಎಂದು ತಿಳಿದು, “ಹಾಯ್ ರಿತಿಕಾ, ಹೇಗಿದ್ದೀರಿ? ನಿಮ್ಮ ಚಿಕ್ಕ ಮಗುವಿಗೆ ಮತ್ತು ಕುಟುಂಬಕ್ಕೆ ನಮಸ್ಕಾರಗಳು”, ಎಂದು ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ರಿತಿಕಾ ಅವರ ಹೆಸರಿನ ಬಳಕೆದಾರ, “ನಾನು ಚೆನ್ನಾಗಿದ್ದೇನೆ ಆಶ್ವಿನ್ ಅಣ್ಣ” ಎಂದು ಬಳಕೆದಾರರು ಉತ್ತರಿಸಿದರು.

ಇದರಿಂದ ಅನುಮಾನಗೊಂಡ ಅಶ್ವಿನ್ ತನ್ನ ಸಂದೇಶವನ್ನು ತಕ್ಷಣ ಅಳಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಅಶ್ವಿನ್ ಅವರು ಮಾಡಿದ ಕಾಮೆಂಟ್ ಈಗ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಖತ್ ಟಾಂಗ್ ಕೊಡುತ್ತಿದ್ದಾರೆ.

ಇತ್ತೀಚೆಗೆ ರೋಹಿತ್ ಶರ್ಮಾ ದಂಪತಿಗಳು ನವೆಂಬರ್ ನಲ್ಲಿ ‘ಅಹಾನ್’ ಎಂಬ ಗಂಡು ಮಗುವನ್ನು ಬರಮಾಡಿಕೊಂಡರು. ಇದರಿಂದ ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಯ ಆರಂಭಿಕ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಅವರ ಅಲಭ್ಯತೆಯಿಂದಲೂ ಭಾರತ ತಂಡ ಪರ್ತ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು.

ಕೊನೆಯ ನಿರ್ಣಾಯಕ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅವರು ತಮ್ಮ ಕಳಪೆ ಫಾರ್ಮ್ ನಿಂದಾಗಿ ತಂಡದಿಂದ ಹೊರಗುಳಿಯಲು ನಿರ್ಧರಿಸಿದರು. ಆದಾಗ್ಯೂ ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಸೋತಿದ್ದು, ಸರಣಿಯನ್ನು 1-3 ಅಂತರದಿಂದ ಕಳೆದುಕೊಂಡಿತು.

Continue Reading

LATEST NEWS

ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿ*ದ್ದು ಮೂರನೇ ತರಗತಿ ವಿದ್ಯಾರ್ಥಿನಿ ಸಾ*ವು

Published

on

ಮಂಗಳೂರು/ಚಾಮರಾಜನಗರ : ಇತ್ತೀಚೆಗೆ ಹೃದಯಾ*ಘಾತ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರೂ ಹೃದಯಾ*ಘಾತಕ್ಕೆ ಬ*ಲಿಯಾಗುತ್ತಿದ್ದಾರೆ. ಇದೀಗ ಮತ್ತೊಂದು ಪ್ರಕರಣ ನಡೆದಿದೆ.

ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿ*ದ್ದು ಮೂರನೇ ತರಗತಿ ವಿದ್ಯಾರ್ಥಿನಿ ಇಹಲೋಕ ತ್ಯಜಿಸಿರುವ ಘಟನೆ ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಮೃ*ತ ಬಾಲಕಿ.

ಇದನ್ನೂ ಓದಿ : ಇಬ್ಬರು ಮಕ್ಕಳನ್ನು ಕೊಂ*ದು ನೇ*ಣಿಗೆ ಶರಣಾದ ದಂಪತಿ

ತೇಜಸ್ವಿನಿ ಎಂದಿನಂತೆ ಶಾಲೆಗೆ ಹೋಗಿದ್ದು, ತರಗತಿಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸಲು ನಿಂತಿದ್ದಳು. ಈ ವೇಳೆ ಕುಸಿದುಬಿದ್ದಿದ್ದಾಳೆ. ಅಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ತೇಜಸ್ವಿನಿ ಕೊ*ನೆಯುಸಿರೆಳೆದಿದ್ದಳು ಎಂದು ತಿಳಿದುಬಂದಿದೆ. ಇದ್ದೊಬ್ಬ ಮಗಳನ್ನು ಕಳೆದುಕೊಂಡ ತಂದೆ – ತಾಯಿ ಶೋಕಸಾಗರದಲ್ಲಿ ಮುಳುಗಿದ್ದಾರೆ.

Continue Reading

DAKSHINA KANNADA

ಮಂಗಳೂರು : ಹಿರಿಯ ವಿದ್ಯಾರ್ಥಿಗಳ ಸಂಘದ ‘ದಶಮ ಸಂಭ್ರಮ’

Published

on

ಮಂಗಳೂರು : ಹಿರಿಯ ವಿದ್ಯಾರ್ಥಿಗಳ ಸಂಘದ ‘ದಶಮ ಸಂಭ್ರಮ’ ಕಾರ್ಯಕ್ರಮವು ಡಾ. ಪಿ. ದಯಾನಂದ ಪೈ -ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿಯಲ್ಲಿ ಜನವರಿ 3 ರಂದು ನಡೆದಿದೆ.

ಹಿರಿಯ ವಿದ್ಯಾರ್ಥಿಗಳ ಸಂಘದ ದಶಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದಿದ್ದು, ಲೋಗೋ ಅನಾವರಣ ಹಾಗೂ ಸ್ತಾತಕೋತ್ತರ ವಿದ್ಯಾರ್ಥಿಗಳಿಗೆ ನೆಟ್/ಕೆ.ಸೆಟ್ ಪರೀಕ್ಷೆಯ ಪೂರ್ವ ತಯಾರಿಯನ್ನು ಏರ್ಪಡಿಸಲಾಗಿತ್ತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿನ ಸಮಾಜ ಶಾಸ್ತ್ರ ವಿಭಾಗದ ಸಹ ಪ್ರಾದ್ಯಪಕ, ಮಂಗಳೂರು ವಿಶ್ವವಿದ್ಯಾನಿಲದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾಗಿರುವ ಡಾ. ಶೇಷಪ್ಪ ಕೆ. ಲೋಗೋ ಅನವಾರಣಗೊಳಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಗಾಂದಿನಗರ ಮಂಗಳೂರು ಇಲ್ಲಿನ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಕರಾಗಿರುವ ಶ್ರೀ. ಯತೀನ್ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದರು. ದಯಾನಂದ ಕಾಲೇಜಿನ ಪ್ರಾಂಶುಪಾಲರಾದ ಫ್ರೊ. ಜಯಕರ ಭಂಡಾರಿ ಎಂ. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.

 

ಕಾಲೇಜಿನ ಐಕ್ಯೂಎಸಿಯ ಸಂಯೋಜಕ ದೇವಿಪ್ರಸಾದ್, ಸ್ತಾತಕೋತ್ತರ ವಿಭಾಗದ ಸಂಯೋಜಕ ಡಾ. ಲೋಕೇಶನಾಥ್, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯೋಜಕರಾಗಿರುವ ನಾಗರಾಜ್ ಎಂ. , ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧೀರಜ್ ಕುಮಾರ್ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ತುಷಾರ್ ಕೆ. ವೇದಿಯಲ್ಲಿ ಉಪಸ್ಥಿತರಿದ್ದರು.

Continue Reading

LATEST NEWS

Trending

Exit mobile version