Wednesday, October 5, 2022

ಮೀನುಗಾರಿಕೆಗೆ ದುರಂತಗಳ ಸರಮಾಲೆ – ಮಲ್ಪೆಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ 

ಉಡುಪಿ : ಕರೊನಾ ಹೊಡೆತದ ನಡುವೆ ಈ ಬಾರಿ ಕರಾವಳಿಯ ಮೀನುಗಾರರಿಗೆ ಸಮುದ್ರವೂ ಕೂಡ ಮುನಿಸಿಕೊಂಡಂತಿದೆ. ಕಳೆದ ಒಂದು ತಿಂಗಳಿಂದ ಸರಣಿ ಮೀನುಗಾರಿಕಾ ಬೋಟುಗಳ ಅಪಘಾತ ನಡೆಯುತ್ತಿದ್ದು, ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.


ಈ ನಡುವೆ ಮತ್ತೊಂದು ಮೀನುಗಾರಿ ಬೋಟ್ ಆಳ ಸಮುದ್ರದಲ್ಲಿ ಅಪಘಾತಕ್ಕೆ ಇಡಾಗಿದೆ. ಉಡುಪಿಯ ಮಲ್ಪೆ ಬಂದರಿನಿಂದ ಒಂದು ದಿನದ ಮೀನುಗಾರಿಕೆಗೆ ತೆರಳಿದ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಗೀಡಾಗಿದೆ.

ಶ್ರೀಕಾಂತ ಪುತ್ರನ್ ಎಂಬುವರಿಗೆ ಸೇರಿದ ಹನುಮಂತ ತೀರ್ಥ ಹೆಸರಿನ ಬೋಟ್ ಇದಾಗಿದ್ದು, ಮಂಗಳವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ವಾಪಸಾಗುವಾಗ ಸೈಂಟ್ ಮೇರಿಸ್ ದ್ವೀಪ ದ ಬಳಿ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ತಲುಪಿದ್ದು. ಇತರೆ ಬೋಟ್ ಗಳು ತೆರಳಿ ಅವಘಡಕ್ಕೀಡಾದ ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಮೀನುಗಾರಿಕಾ ಬೋಟ್ ಮುಳುಗಡೆಯ ಹಂತದಲ್ಲಿದ್ದು, ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

LEAVE A REPLY

Please enter your comment!
Please enter your name here

Hot Topics

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...