Connect with us

LATEST NEWS

ಪ್ರಾಣಿ – ಮಾನವ ಜಟಾಪಟಿ; ಜೀವನ ಅಸ್ತವ್ಯಸ್ಥ

Published

on

ಮಂಗಳೂರು/ಹಾಸನ: ಅಕ್ಟೋಬರ್ 7 ರಂದು ಅರಸೀಕೆರೆ ತಾಲೂಕಿನಲ್ಲಿ ವಿದ್ಯುತ್ ಶಾಕ್​ನಿಂದ ಮೂರು ಕರಡಿಗಳು ಮೃತಪಟ್ಟಿದ್ದವು.


ಗುರುವಾರ (ಅ.17) ರಂದು ಸಕಲೇಶಫುರ ತಾಲೂಕಿನ ಬಾಳ್ಳುಪೇಟೆ ಬಳಿ ಕರೆಂಟ್ ಶಾಕ್​ಗೆ ಒಂಟಿ ಸಲಗ ಬಲಿಯಾಗಿದೆ. ಕಾಡು ಪ್ರಾಣಿಗಳ ಚಲನವಲನದ ಬಗ್ಗೆ ಮಾಹಿತಿ ಇದ್ದರೂ ಸೆಸ್ಕಾಂನ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ.

15 ದಿನಗಳ ಹಿಂದೆ ಚಿಕ್ಕಮಗಳೂರು ಭಾಗದಿಂದ ಬಂದ ಕಾಡಾನೆಯೊಂದು ಆಹಾರ ಅರಸಿ ಹಾಸನ ಜಿಲ್ಲೆ ಪ್ರವೇಶಿಸಿದೆ. ಬನವಾಸೆ ಗ್ರಾಮದ ಬಳಿ ವಿದ್ಯುತ್​ ತಂತಿಗೆ ಸೊಂಡಿಲು ತಾಗಿಸಿ ಧಾರುಣವಾಗಿ ಮೃತಪಟ್ಟಿದೆ. 25 ವರ್ಷ ಪ್ರಾಯದ ಬೃಹತ್ ಒಂಟಿ ಸಲಗದ ಸಾವಿನ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಜನ ಸ್ಥಳದಲ್ಲಿ ಸೇರಿದರು. ಕಾಡಾನೆ ಕಳೇಬರಕ್ಕೆ ನಮಿಸಿ ಕಂಬನಿ ಮಿಡಿದರು.

30 ಅಡಿ ಎತ್ತರದಲ್ಲಿ ವಿದ್ಯುತ್ ಲೈನ್ ಕೊಂಡೊಯ್ಯಬೇಕು ಎಂಬ ನಿಯಮ ಇದ್ದರೂ ಅದನ್ನು ಪಾಲಿಸಿದ ಕಾರಣ ಕಾಡಾನೆ ಬಲಿಯಾಗಿದೆ. ಕೂಡಲೆ ಸೆಸ್ಕಾಂ ಅದಿಕಾರಿಗಳ ವಿರುದ್ಧ ಕೇಸ್ ದಾಖಲು ಮಾಡಬೇಕು, ಅವರನ್ನು ಬಂದಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ಕಾಡಾನೆ ದಾಳಿ, ಸಾವು:

ಹಾಸನ ಜಿಲ್ಲೆಯ ಮಲೆನಾಡು ಭಾಗಗಳಾದ ಸಕಲೇಶಫುರ, ಆಲೂರು, ಬೇಲೂರು ತಾಲೂಕಿನಲ್ಲಿ ದಶಕಗಳಿಂದ ಕಾಡಾನೆಗಳ ಉಪಟಳ ನಿರಂತರವಾಗಿ ಹೆಚ್ಚಾಗುತ್ತಿದೆ. 80ಕ್ಕೂ ಹೆಚ್ಚು ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ವಿದ್ಯುತ್​ ಶಾಕ್, ಅನಾರೋಗ್ಯ ಸೇರಿ ಹಲವು ಕಾರಣಗಳಿಂದ 100ಕ್ಕೂ ಅದಿಕ ಕಾಡಾನೆಗಳು ಪ್ರಾಣಬಿಟ್ಟಿವೆ. ಕೇವಲ ಎಂಟು ದಿನಗಳ ಹಿಂದಷ್ಟೇ ಅರಸೀಕೆರೆ ತಾಲೂಕಿನಲ್ಲಿ ವಿದ್ಯುತ್​ ಶಾಕ್​ನಿಂದ ಮೂರು ಕರಡಿಗಳು ಮೃತಪಟ್ಟಿದ್ದವು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಿದ್ಯುತ್ ದುರಂತಕ್ಕೆ ಕಾಡಾನೆ ಬಲಿಯಾಗಿದೆ. ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ 12 ಕಾಡಾನೆಗಳು ಬಲಿಯಾಗಿವೆ. ಕಳೆದ 15 ದಿನಗಳ ಅಂತರದಲ್ಲಿ ಎರಡು ಆನೆಗಳು ಸಾವಿಗೀಡಾಗಿವೆ.

ಒಟ್ಟಿನಲ್ಲಿ ಕಾಡಾನೆ ಹಾವಳಿಯಿಂದ ಕಂಗೆಟ್ಟಿರೊ ಜನರು ಜೀವ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ. ಇದರ ನಡುವೆ ಆಗಾಗ ಬಲಿಯಾಗುತ್ತಿರುವ ಕಾಡಾನೆಗಳ ಕಳೆಬರಹ ಕಂಡು ಕಣ್ಣೀರು ಹಾಕಿದ್ದಾರೆ.

LATEST NEWS

ಹೆಸರಿನಿಂದಾದ ಎಡವಟ್ಟು; ‘ಸ*ತ್ತಿದ್ದು ನಾನಲ್ಲ’ ಎಂದ ನಿತಿನ್ !!

Published

on

ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಪ್ರಸಿದ್ಧಿ ಪಡೆದ ನಿತಿನ್ ಚೌಹಾಣ್‌ ಶ*ವವಾಗಿ ಪತ್ತೆಯಾಗಿದ್ದು, ಅವರು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ಧಿಯಾಗಿತ್ತು. 35 ವರ್ಷದ ನಿತಿನ್ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ಮತ್ತು ‘ಕ್ರೈ ಪ್ಯಾಟ್ರೋಲ್‌’ನಂಥ ರಿಯಾಲಿಟಿ ಶೋ ಗಳಿಂದ ಚಿರಪರಿಚಿತರಾಗಿದ್ದಾರೆ ನಿತಿನ್.

 

‘ಮುಂಬೈನಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇವರ ಶವ ಪತ್ತೆಯಾಗಿತ್ತು. 2009 ರಲ್ಲಿ ಪ್ರಸಾರವಾದ ‘ದಾದಾಗಿರಿ 2’ ಮೂಲಕ ಎಂಟ್ರಿ ಕೊಟ್ಟಿದ್ದ ಇವರು, ‘ಸ್ಪ್ಲಿಟ್ಸ್‌ ವಿಲ್ಲಾ ಸೀಸನ್‌ 5′ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಇಲ್ಲಿ ಅಭಿಮಾನಿಗಳ ಸಂಖ್ಯೆ ಏರಿಸಿಕೊಂಡಿದ್ದ ಅವರಿಗೆ ಜಿಂದಗಿ ಡಾಟ್‌ ಕಾಮ್‌, ಕ್ರೈಮ್ ಪ್ಯಾಟ್ರೋಲ್, ತೇರಾ ಯಾರ್ ಹೂ ಮೇ ಮುಂತಾದ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೂ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಹಿಂದಿನ ಕಾರಣ ಮಾತ್ರ ತಿಳಿದಿಲ್ಲ’ ಎಂದು ಬಹುತೇಕ ಮಾಧ್ಯಮಗಳು ವರದಿಯನ್ನು ಬಿತ್ತರಿಸಿದವು.

ಅಲ್ಲೇ ಆದದ್ದು ಎಡವಟ್ಟು. ಅದೇನೆಂದರೆ, ನಿಜವಾಗಿ ಸಾ*ವನ್ನಪ್ಪಿದ ನಟ ನಿತಿನ್ ಚೌಹಾಣ್‌ ಬದಲಿಗೆ ಇನ್ನೋರ್ವ ಅದೇ ಹೆಸರಿನ ನಟ ನಿತಿನ್ ಚೌಹಾಣ್‌ ಫೋಟೋ ಬಳಸಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಬದುಕಿರುವ ನಿತಿನ್ ಫೋಟೋ ಶೇರ್ ಆಗುತ್ತಿದ್ದು, ಸಂತಾಪಗಳ ಸುರಿಮಳೆಯಾಗುತ್ತಿದೆ. ಇದನ್ನು ನೋಡಿ ನಟ ನಿತಿನ್ ಆಶ್ಚರ್ಯಚಕಿತರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಅವರು, ‘ನಾನಿನ್ನೂ ಸ*ತ್ತಿಲ್ಲ ಕಣ್ರಿ, ಬದುಕಿದ್ದೇನೆ. ರಿಪ್ ಹಾಕಿ ನನ್ನನ್ನು ಸಾಯಿಸ್ಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

 

ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಹಠಾತ್ ಸಾ*ವು

 

‘ವರದಿ ಬಿತ್ತರಿಸುವಾಗ ಹೀಗೆ ಯಾರದ್ದೋ ಫೋಟೋ ಹಾಕುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಮಾಹಿತಿಯ ಪೋಸ್ಟ್ ಮತ್ತು ಪ್ರಸರಣಕ್ಕೆ ಸಾಮಾಜಿಕ ಮಾಧ್ಯಮ, ಸುದ್ದಿ ಮೂಲಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಒಂದೇ ವ್ಯಕ್ತಿ ಎಂದು ಗುರುತಿಸುವುದು ಅತ್ಯಂತ ಬೇಜವಾಬ್ದಾರಿ. ಇದು ಎರಡು ಕುಟುಂಬಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಎಂದು ನಿತಿನ್ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಈ ಸತ್ಯ ಸುದ್ದಿ ತಿಳಿಯದೆ, ಇದುವರೆಗೆ ಬದುಕಿರುವ ನಿತಿನ್‌ಗೆ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವರು ಕರೆ ಮಾಡಿ ಸುದ್ದಿಯನ್ನು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಎಲ್ಲರ ಕರೆ ಸ್ವೀಕರಿಸಿ ಅವರಿಗೆ ಸ್ಪಷ್ಟನೆ ನೀಡುವಲ್ಲಿ ನಿತಿನ್ ಸುಸ್ತಾಗಿದ್ದರು. ಒಟ್ಟಾಗಿ ಫೋಟೋ ಹಂಚಿಕೊಂಡವನ ಪತ್ತೆ ಹಚ್ಚಿ, ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿತಿನ್ ಪೊಲೀಸರಿಗೆ ಒತ್ತಾಯಿಸಿದ್ದಾರೆ.

 

Continue Reading

LATEST NEWS

‘ಅಮರನ್’ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್ ಮೇಲೆ ಪೆಟ್ರೋಲ್ ಬಾಂ*ಬ್ ಎಸೆತ

Published

on

ಮಂಗಳೂರು/ ತಿರುನೆಲ್ವೇಲಿ : ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ  ನಟಿಸಿರುವ ‘ಅಮರನ್’ ಸಿನಿಮಾ  ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರದ ಮೇಲೆ ಅಪರಿಚಿತ ದುರ್ಷರ್ಮಿಗಳು ಪೆಟ್ರೋಲ್ ಬಾಂ*ಬ್ ಎಸೆದಿದ್ದಾರೆ.

ಇಂದು(ನ.16) ಬೆಳಗಿನ ಜಾವ 3 ಗಂಟೆಗೆ  ಇಬ್ಬರು ದುಷ್ಕರ್ಮಿಗಳು ಮೇಳಪಾಳ್ಯಂನ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದಾರೆ. ಅವು ಸ್ಫೋ*ಟಗೊಂಡಿವೆ. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

‘ಅಮರನ್’ ಗೆ ಉತ್ತಮ ರೆಸ್ಪಾನ್ಸ್ :

ಯೋಧನೊಬ್ಬನ ಜೀವನಾಧಾರಿತ ಸಿನಿಮಾವಾಗಿರುವ ಅಮರನ್ ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಂಡಿದ್ದು, ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಅಕ್ಟೋಬರ್ 31 ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತ ಚಿತ್ರವನ್ನು ರಾಜ್ ಕುಮಾರ್ ಪೆರಿಯಸ್ವಾಮಿ ನಿರ್ದೇಶಿಸಿದ್ದು, ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ ನಟ ಕಮಲ್ ಹಾಸನ್ ಅವರ ರಾಜಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸಿದೆ.

ಇದನ್ನೂ ಓದಿ : ಮಗಳ ದೇ*ಹವನ್ನೇ ತುಂ*ಡರಿಸಿ, ಲಿ*ವರ್ ತಿಂದ ಕ್ರೂ*ರಿ ತಾಯಿ ..!

ಚಿತ್ರದಲ್ಲಿ ಶಿವಕಾರ್ತಿಕೇಯನ್ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ.

Continue Reading

LATEST NEWS

ಸಂಜು ಸ್ಯಾಮ್ಸನ್-ತಿಲಕ್ ವರ್ಮಾ ಜೊತೆಯಾಟ: ಭಾರತಕ್ಕೆ ಜಯ

Published

on

ಮಂಗಳೂರು/ಜೋಹಾನ್ಸ್ ಬರ್ಗ್: ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ-ದಕ್ಷಿಣ ಆಫ್ರೀಕಾ ನಡುವಿನ ಟಿ-20 ಸರಣಿಯ 4ನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು 135 ರನ್ ಗಳ ಭರ್ಜರಿ ಜಯ ದಾಖಲಿಸಿದೆ.ಈ ಮೂಲಕ 3-1ರ ಅಂತರದಿಂದ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ 109 ರನ್ ಸಿಡಿಸಿದರು. ಇದರಲ್ಲಿ 9 ಸಿಕ್ಸರ್,6 ಬೌಂಡರಿ ಸೇರಿದೆ. ತಿಲಕ್ ವರ್ಮಾ 47 ಎಸೆತಗಳಲ್ಲಿ 120 ರನ್ ಗಳ ಶತಕ ಆಟ ಆಡಿದರು.ಇದರಲ್ಲಿ 10 ಸಿಕ್ಸರ್,9 ಬೌಂಡರಿ ಇದ್ದವು. ಇವರಿಬ್ಬರ ಶತಕದಾಟದ ನೆರವಿನಿಂದ 20 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳ ಬೃಹತ್ ಮೊತ್ತ ಪ್ರೇರಿಸಿತು. ಈ ಮೂಲಕ ದಕ್ಷಿಣ ಆಫ್ರೀಕಾದ ಬೌಲರ್ ಗಳು ದುಬಾರಿಯಾದರು.

ನಂತರ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರೀಕಾ ತಂಡದ ಬ್ಯಾಟರ್ ಗಳನ್ನು,ಭಾರತದ ಬೌಲರ್ ಗಳು ಇನ್ನಿಲ್ಲದಂತೆ ಕಾಡಿದರು. ಭಾರತ ತಂಡ ದಕ್ಷಿಣ ಆಫ್ರೀಕಾವನ್ನು 148 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 135 ರನ್ ಗಳ ಭರ್ಜರಿ ಜಯ ತಂದುಕೊಟ್ಟರು. ಭಾರತದ ಪರ 3 ಓವರ್ ಬೌಲಿಂಗ್ ಮಾಡಿದ ವೇಗಿ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು 20 ರನ್ ಬಿಟ್ಟುಕೊಟ್ಟರು,4 ಓವರ್ ಬೌಲಿಂಗ್ ಮಾಡಿದ ಸ್ಪೀನ್ನರ್ ವರುಣ್ ಚಕ್ರವರ್ತಿ 2 ವಿಕೆಟ್ ಪಡೆದು 42 ರನ್ ಕೊಟ್ಟರು ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ 2 ಓವರ್ ಬೌಲಿಂಗ್ ಮಾಡಿ,ಕೇವಲ 6 ರನ್ ಕೊಟ್ಟು 2 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳು

ಅಂತರಾಷ್ಟ್ರೀಯ ಟಿ-20 ಮಾದರಿಯ ಈ ಪಂದ್ಯದಲ್ಲಿ ಭಾರತ 283 ರನ್ ಕಲೆ ಹಾಕುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಮೊತ್ತ ಪ್ರೇರಿಸುವ ಮುಲಕ ದಾಖಲೆ ಬರೆದಿದೆ.ಸಂಜು ಸ್ಯಾಮ್ಸನ್ ಒಂದು ವರ್ಷದಲ್ಲಿ ಮೂರು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು.ಒಂದೇ ಸರಣಿಯಲ್ಲಿ 2 ಶತಕ ಸಿಡಿಸಿದ ದಾಖಲೆಗೂ ಸಂಜು ಭಾಜನರಾದರು.ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸುವ ಮೂಲಕ ಭರ್ಜರಿ ಜೊತೆಯಾಟವಾಡಿ ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಬ್ಯಾಟ್ಸ್ ಮ್ಯಾನ್ ಗಳು ಶತಕ ಸಿಡಿಸಿದ್ದು ಇದೇ ಮೊದಲು.ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶತಕ ಸಿಡಿಸಿದಲ್ಲದೆ, 210 ರನ್ ಗಳ ದಾಖಲೆಯ ಜೊತೆಯಾಟವನ್ನು ಆಡಿದರು.ಈಗಾಗೀ ಅತೀ ದೊಡ್ಡ ಜೊತೆಯಾಟವಾಡಿದ ದಾಖಲೆ ಈ ಇಬ್ಬರು ಆಟಗಾರರ ಪಾಲಾಯಿತು.

Continue Reading

LATEST NEWS

Trending

Exit mobile version