Wednesday, June 29, 2022

ಸಾಲ ಮರುಪಾವತಿಸದ ಹಿನ್ನೆಲೆ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ತಂಗಿ-ತಾಯಿಗೆ ಕೋರ್ಟ್‌ ಸಮನ್ಸ್‌

ಮುಂಬೈ: ಸಾಲ ಮರುಪಾವತಿ ಮಾಡದ ಹಿನ್ನೆಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಸಹೋದರಿ ಶಮಿತಾ ಶೆಟ್ಟಿ ಹಾಗೂ ತಾಯಿ ಸುನಂದಾ ಶೆಟ್ಟಿ ಅವರಿಗೆ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.


21 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಉದ್ಯಮಿ ಪರ್ಹಾದ್ ಅಮ್ರಾ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ. ಜೊತೆಗೆ ಫೆ. 28ರಂದು ಮೂವರೂ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಶೆಟ್ಟಿ ಅವರು 2015ರಲ್ಲಿ ಸಾಲ ಪಡೆದಿದ್ದರು ಮತ್ತು 2017ರ ಜನವರಿಯೊಳಗೆ ಸಾಲ ಮರುಪಾವತಿ ಮಾಡಬೇಕಾಗಿತ್ತು. 2016ರಲ್ಲಿ ಸುರೇಂದ್ರ ಶೆಟ್ಟಿ ನಿಧನರಾಗಿದ್ದು,

ಕುಟುಂಬಸ್ಥರು ಸಾಲವನ್ನು ಮರುಪಾವತಿಸಲು ನಿರಾಕರಿಸುತ್ತಿದ್ದಾರೆ ಪರ್ಹಾದ್ ಅಮ್ರಾ ಆರೋಪಿಸಿದ್ದಾರೆ. ಪರ್ಹಾದ್ ಅಮ್ರಾ ಆಟೋಮೊಬೈಲ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮುಲ್ಕಿಯಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಟೆಂಪೋ: ಚಾಲಕ ಜೀವಾಂತ್ಯ-ಇಬ್ಬರಿಗೆ ಗಂಭೀರ

ಮುಲ್ಕಿ: ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿದ್ದು ಟೆಂಪೋದಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಯಲ್ಲಿ ಸಂಭವಿಸಿದೆ.ಮೃತ ಚಾಲಕನನ್ನು...

ಉಡುಪಿ: ಹಣದಾಸೆಗೆ ಕಿಡ್ನಾಪ್ ನಾಟಕವಾಡಿ ಪೋಷಕರನ್ನೇ ಯಾಮಾರಿಸಿದಾತ ಅಂದರ್

ಉಡುಪಿ: ಹಣದ ಆಸೆಗೆ ಹೆತ್ತವರನ್ನೇ ಯಾಮಾರಿಸಿ ಅಪಹರಣದ ನಾಟಕವಾಡಿದ ಯುವಕನನ್ನು ಪೊಲೀಸರು ಗೋವಾದಲ್ಲಿ ಪತ್ತೆ ಹಚ್ಚಿದ ಘಟನೆ ಉಡುಪಿಯಲ್ಲಿ ನಡೆದಿದೆ.ವರುಣ್ ನಾಯಕ್ ಎಂಬವನು ಹೆತ್ತವರಿಗೆ ವಂಚಿಸಿದ ಯುವಕ ಎಂದು ಗುರುತಿಸಲಾಗಿದೆ.ತಾನು ಕಿಡ್ನಾಪ್ ಆಗಿದ್ದೇನೆ...

ದ.ಕ ಜಿಲ್ಲೆಯಲ್ಲಿ ಏಕಾಏಕಿ ಹೆಚ್ಚಿದ ಕೊರೋನಾ: 21ಪಾಸಿಟಿವ್ -ಒಂದು ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮತ್ತೆ ಕಾಲಿಟ್ಟಿದೆ. ನಿನ್ನೆ ಜಿಲ್ಲೆಯಲ್ಲಿ 21 ಹೊಸ ಸೋಂಕಿತರು ಪತ್ತೆಯಾಗಿದ್ದು, 40 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಹಲವು ಸಮಯಗಳ ಬಳಿಕ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ...