Thursday, February 2, 2023

ಉಡುಪಿ ಬನ್ನಂಜೆಯ ಮೂಡನಿಡಂಬೂರು ಗ್ರಾಮದಲ್ಲಿ ಹಳೇ ಅಪರೂಪದ ಉಬ್ಬುಶಿಲ್ಪದ ಶಾಸನ ಪತ್ತೆ..!

ಉಡುಪಿ: ಉಡುಪಿ ಜಿಲ್ಲೆಯ ಬನ್ನಂಜೆಯ ಮೂಡನಿಡಂಬೂರು ಗ್ರಾಮದಲ್ಲಿ ಹಳೇ ಶಾಸನವೊಂದು ಪತ್ತೆಯಾಗಿದೆ. ಗ್ರಾಮದ ಶನೇಶ್ವರ ದೇವಸ್ಥಾನದ ಹಿಂಬದಿಯ ಪೊದೆಯಲ್ಲಿ ನಿರ್ಪುಗಲ್ಲು ಎಂದು ಹೇಳುವ ಈ ಶಾಸನ ಪತ್ತೆಯಾಗಿದೆ.

ಸುಮಾರು 1.5 ಅಡಿ ಅಗಲ ನಾಲ್ಕು ಅಡಿ ಎತ್ತರ ಇರುವ ಈ ಶಾಸನದ ಬಲಭಾಗದಲ್ಲಿ ಚಂದ್ರ ಎಡ ಭಾಗದಲ್ಲಿ ಸೂರ್ಯ. ಮಧ್ಯಭಾಗದಲ್ಲಿ ಪೀಠ ಇರುವ ಶಿವಲಿಂಗದ ಕೆಳಗೆವೀರ ಪುರುಷನಂತೆ ಖಡ್ಗ ಮತ್ತು ಗುರಾಣಿ ಹಿಡಿದಿರುವಂತೆ ವಸ್ತ್ರ ಸಹಿತ ಕಂಡು ಬಂದಿದೆ.

ಓರೆಮುಖ ಎತ್ತರಕ್ಕೆ ಮಾಡಿ ಎಡಗಾಲು ಎತ್ತಿಕೊಂಡು ವೀರ ಪುರುಷನಂತೆ ನಿಂತಿರುವ ಉಬ್ಬುಶಿಲ್ಪ ಈ ಶಾಸನದಲ್ಲಿ ಕಂಡುಬಂದಿದೆ.

ಕೆಳಗಡೆ ಪೀಠ ಇದೆ ಈ ಶಾಸನ ಇರುವ ಪಕ್ಕದಲ್ಲಿ ಉತ್ತರ ಕನ್ನಡ ಕಾರ್ಮಿಕರು ಬೀಡಾರ ಕಟ್ಟಿಕೊಂಡಿದ್ದಾರೆ .

ಈ ಭಾಗದಲ್ಲಿ ಗಿಡಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿ ಈ ಉಬ್ಬು ಶಾಸನದಲ್ಲಿ ಚಿತ್ರವನ್ನು ಹನುಮನೆಂದುತಿಳಿದು ದಿನನಿತ್ಯ ಗಂಧ, ಕುಂಕುಮ ದೀಪ ಶೇಡಿಗಳನ್ನುಹಚ್ಚಿ ನಿತ್ಯ ಪೂಜೆಮಾಡುತ್ತಾರೆ..

ಸ್ಥಳೀಯರು ಹೇಳುವ ಪ್ರಕಾರ ಮೂಡನಡಂಬೂರಿಗೆ ನೆರೆಹಾವಳಿ ಸಂಭವಿಸಿದಾಗಲೂ ಇದರ ಸ್ವಲ್ಪ ತಲೆಭಾಗ ದೂರದಿಂದ ಕಾಣುತ್ತಿತ್ತು ಎನ್ನುತ್ತಾರೆ.ಪಕ್ಕದಲ್ಲಿ ಮೂಡನಿಂಡಬೂರು ಬ್ರಹ್ಮ ಬೈದರ್ಕಳ ಗರೋಡಿಇದೆ..

ಹಿಂದಿನಹಳೆ ಮಂದಿ ಯರನ್ನು ವಿಚಾರಿಸಿದಾಗ ದೈವವು ಸಂಚಾರ ಹೋಗುವಾಗ ದೊಂದಿ ಬೆಳಕನ್ನು ( ತೂಟೆ) ಅಲ್ಲಿ ಇಟ್ಟು ವಿಧಿ ವಿಧಾನಗಳನ್ನು ಮಾಡಿನಂತರ ಮುಂದಿನ ಕಡೆಗೆ ಸಂಚರಿಸುವ ಪದ್ಧತಿ ಇತ್ತು ಎಂದು ಸ್ಥಳೀಯರು ಕಣ್ಣಾರೆ ಕಂಡವರು ಹೇಳುತ್ತಾರೆ..

ಈ ಭೂ ಪ್ರದೇಶ ಗದ್ದೆಯ ಪ್ರದೇಶ ವಾಗಿತ್ತು ಅಂದಿನ ಕಾಲದಲ್ಲಿಗದ್ದೆ ಯಲ್ಲಿ ಉತ್ತಮ ಬೆಳೆಯಾದಾಗ ಈ ಶಾಸನದ ಮೇಲೆ ಬೆಳದ ಬತ್ತದ ಫಸಲನ್ನು ಇಟ್ಟು. ಕೈಮುಗಿಯುವ ಪ್ರತಿತೀ ಈ ಹಿಂದೆ ಇತ್ತು ಈಗ ನಗರೀಕರಣವಾದ್ದರಿಂದ ವಸತಿ ಸಮುಚ್ಚಾಯ ಈ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಮಣ್ಣಿನಲ್ಲಿ ಹೂತಿ ಹೋಗಿದ್ದ ಈ ಶಾಸನವು ಮತ್ತೆ ಗೋಚರಿಸುವಂತಾಗಿದೆ ಸಂಬಂಧಪಟ್ಟವರು ಹೆಚ್ಚಿನ ಅಧ್ಯಯನ ನಡೆಸಿದರೆ ಈ ಶಾಸನವು ಇಲ್ಲಿರುವುದರ ಜೊತೆಗೆ ಸ್ಥಳ ಪುರಾಣಕ್ಕೆ ಹೊಸ ಬೆಳಕು ಚೆಲ್ಲಬಹುದು.

LEAVE A REPLY

Please enter your comment!
Please enter your name here

Hot Topics

ದೇವರ ಮಾತು ಕೇಳಿ ಹೆಂಡತಿ ಬಿಟ್ಟ ಗಂಡ – ನ್ಯಾಯಾಲಯದಲ್ಲಿ ಮತ್ತೆ ಒಂದಾದರು..!

ತುಮಕೂರು: ಮೂಢನಂಬಿಕೆಗೆ ಒಳಗಾಗಿ ಬೇರೆಯಾಗಿದ್ದ ಜೋಡಿಯನ್ನು ನ್ಯಾಯಾಧೀಶರು ಒಂದು ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಮರೆನಾಡು ಗ್ರಾಮದ ಪಾರ್ವತಮ್ಮ, ಹಂದನಕೆರೆ ಹೋಬಳಿಯ ಮಂಜುನಾಥ್ ದಂಪತಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪನವರ...

ನೆತ್ತಿಲ ಪದವಿನಲ್ಲಿ ಕೊಣಾಜೆ ಪೊಲೀಸರ ಕಾರ್ಯಾಚರಣೆ : 27 ಲಕ್ಷದ ಗಾಂಜಾ ವಶ-ಮೂವರ ಬಂಧನ..!

ಮಂಗಳೂರು : ಕೊಣಾಜೆ ನೆತ್ತಿಲಪದವು ಬಳಿ ಕಾರ್ಯಾಚರಣೆ ನಡೆಸಿದ ಕೊಣಾಜೆ ಪೊಲೀಸರು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಒಂದು ಕಾರನ್ನು ವಶಪಡೆದು 27 ಲಕ್ಷ ಮೌಲ್ಯದ ಮಾದಕ ಗಾಂಜಾವನ್ನು ವಶಪಡಿಸಿದ್ದಾರೆ.ಈ ಸಂಬಂಧ ಮೂವರನ್ನು...

ಮಂಗಳೂರು ನ್ಯಾಯಾಲಯದ ಆವರಣದಲ್ಲೇ ವಕೀಲೆಗೆ ಕೊಲೆ ಬೆದರಿಕೆ ಹಾಕಿದ ಆರೋಪಿ..!

ಮಂಗಳೂರು: ಯುವ ವಕೀಲೆಯೊಬ್ಬರಿಗೆ ಮಂಗಳವಾರ ಅಪರಾಹ್ನ ನ್ಯಾಯಾಲಯದ ಆವರಣದಲ್ಲೇ ಅವಾಚ್ಯ ಶಬ್ದದಿಂದ ‌ಬೈದು ಕೊಲೆ ಬೆದರಿಕೆಯೊಡ್ಡಿದ ಘಟನೆ ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ಬಂದರು...