Connect with us

LATEST NEWS

ಕುಂದಾಪುರ ತೆಕ್ಕಟ್ಟೆ ಬಳಿ ಸರಣಿ ಕಳವಿಗೆ ಯತ್ನ..!

Published

on

ಉಡುಪಿ: ಮುಸುಕುಧಾರಿ ದರೋಡೆಕೋರರ ತಂಡವೊಂದು ಶುಕ್ರವಾರ ತಡರಾತ್ರಿ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಶಾನುಭೋಗ್ ಕಾಂಪ್ಲೆಕ್ಸ್ ನಲ್ಲಿರುವ ಆಭರಣ ಮಳಿಗೆಗೆ ನುಗ್ಗಲು ವಿಫಲ ಯತ್ನಿಸಿದ ಘಟನೆ ನಡೆದಿದೆ.

ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಡಿ.21ರಂದು ತೆಕ್ಕಟ್ಟೆ ಕೆನರಾ ಬ್ಯಾಂಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿರುವ ಮೀನಾಕ್ಷಿ ಫರ್ನಿಚರ್ ಶೋರೂಮ್, ಗೋಡೌನ್ ಮತ್ತು ಟೈಲರಿಂಗ್ ಅಂಗಡಿಯಲ್ಲಿ ಇತ್ತೀಚೆಗೆ ಕಳ್ಳತನಕ್ಕೆ ಯತ್ನಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಜ್ಯುವೆಲ್ಲರಿ ಮಾಲಕರು ಪೊಲೀಸರಿಗೆ ದೂರು ದಾಖಲಿಸಿಲ್ಲ ಎನ್ನಲಾಗಿದೆ.  ಹೆದ್ದಾರಿ ಸಮೀಪವೇ ನಡೆದ ಈ ಕೃತ್ಯದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

 

LATEST NEWS

ಕರ್ನಾಟಕದ ಭಕ್ತೆಯೊಡನೆ ತಮೀಳು ಮಠಾಧೀಶನ ವಿವಾಹ; ಭಕ್ತರ ಆಕ್ಷೇಪ

Published

on

ಮಂಗಳೂರು/ತಮಿಳುನಾಡು: ಕುಂಬಕೋಣಂನ ಪ್ರಸಿದ್ಧ ಸೂರ್ಯನಾರ್‌ ದೇವಾಲಯದ ಸ್ವಾಮೀಜಿ ಇತ್ತೀಚೆಗೆ ಕರ್ನಾಟಕದ ರಾಮನಗರದ ಭಕ್ತೆಯನ್ನು ವಿವಾಹವಾಗಿದ್ದು, ಭಾರೀ ವಿವಾದ ಹುಟ್ಟು ಹಾಕಿದೆ.

ಮಹಾಲಿಂಗ ಸ್ವಾಮಿ ಅ.10 ರಂದು ರಾಮನಗರ ಜಿಲ್ಲೆಯ ಹೇಮಶ್ರೀ (47) ಎಂಬುವವರನ್ನು ಬೆಂಗಳೂರಿನಲ್ಲಿ ವಿವಾಹವಾಗಿದ್ದಾರೆ. ಸ್ವಾಮೀಜಿ ಬ್ರಹ್ಮಚರ್ಯ ತ್ಯಜಿಸಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಕ್ಕೆ ಅವರ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಕ್ತರಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸ್ವಾಮೀಜಿ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸ್ವಾಮೀಜಿ ಉತ್ತರಿಸಿದ್ದು, “ಹಲವಾರು ಅಧೀನಮ್‌ ಮಠಾಧೀಶರು ವಿವಾಹಿತರಾಗಿದ್ದು, ನಾನೇ ಮೊದಲಲ್ಲ. ಇಲ್ಲಿ ನನಗೆ ಮುಚ್ಚಿಡಲು ಏನೂ ಇಲ್ಲ. ಹೇಮಶ್ರೀ ಆಧಿನಾಮ್‌ಗೆ ಭಕ್ತೆಯಾಗಿ ಬಂದರು. ಮುಂದೆಯೂ ಭಕ್ತೆಯಾಗಿಯೇ ಇರಲಿದ್ದಾರೆ” ಎಂದು ಹೇಳಿದ್ದಾರೆ.

Continue Reading

LATEST NEWS

ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಸಂಭ್ರಮ; ರಥೋತ್ಸವಕ್ಕೆ ಹಣತೆಗಳಿಂದ ಅಲಂಕಾರಗೊಂಡ ರಥಬೀದಿ

Published

on

ಅಪರೂಪದ ಸಂಪ್ರದಾಯಗಳಿಗೆ ಹೆಸರಾಂತ ಜಾಗ ಉಡುಪಿ. ಇಲ್ಲಿನ ಕೃಷ್ಣಮಠ‌ದಲ್ಲಿ ಲಕ್ಷದೀಪಗಳಿಂದ ಸಂಭ್ರಮ. ಕಡಗೋಲು ಕೃಷ್ಣನ ಮೊದಲ ರಥೋತ್ಸವಕ್ಕೆ ಅಷ್ಟಮಠಗಳ ರಥಬೀದಿ ಅಲಂಕಾರಗೊಂಡು ಹಣತೆಯ ದೀಪಗಳಿಂದ ಕಂಗೊಳಿಸುತ್ತಿದೆ. ಮಠಾಧೀಶರ ಉಪಸ್ಥಿತಿಯಲ್ಲಿ ವೈಭವದ ನಡುವೆ ಕೃಷ್ಣನ ದೇವರ ಮೆರವಣಿಗೆಯನ್ನ ನಡೆಸಲಾಯ್ತು. ಅಲ್ಲಿನ ರಥಬೀದಿಗಳಲ್ಲಿ ಲಕ್ಷದೀಪೋತ್ಸವ ಕಂಡು ಭಕ್ತರು ಭಕ್ತಿಯ ಮಳೆಯಲ್ಲಿ ನೆನೆದರು.

ಆ ಭಗವಂತನ ಸ್ವಾಗತಕ್ಕೆ ಉಡುಪಿಯ ಅಷ್ಟಮಠಗಳ ರಥಬೀದಿ ದೀಪಗಳಿಂದ ಕಂಗೊಳಿಸುತ್ತಿದ್ದು, ಭಕ್ತರು ಕೃಷ್ಣನಿಗೆ ಹಣತೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ರು. ಕೃಷ್ಣ ದೇವರು ಯೋಗ ನಿದ್ರೆಯಲ್ಲಿರುತ್ತಾನೆ ಅನ್ನೋದು ಇಲ್ಲಿಯವರ ನಂಬಿಕೆ. ಉತ್ಥಾನ ದ್ವಾದಶಿಯ ದಿನ ಯೋಗ ನಿದ್ರೆ ಪೂರೈಸಿ ರಥಬೀದಿಗೆ ಬರುವ ದೇವರನ್ನ ಬರಮಾಡಿಕೊಳ್ಳಲು ನಡೆದಿರುವ ತಯಾರಿ ಇದು.

ಈ ಮಹೋತ್ಸವವನ್ನ ಲಕ್ಷದೀಪೋತ್ಸವ ಎನ್ನುತ್ತಾರೆ. ಇಳಿ ಹೊತ್ತಲ್ಲಿ ಭಕ್ತರೆಲ್ಲರೂ ಸೇರಿ ರಥಬೀದಿಯಲ್ಲಿ ಸಾವಿರಾರು ದೀಪಗಳನ್ನ ಬೆಳಗಿದರು. ಮಧ್ವ ಸರೋವರದಲ್ಲಿ ಕ್ಷೀರಾಬ್ದಿ ಪೂಜೆ ನೆರವೇರಿತು. ಆ ಬಳಿಕ ಮಠದಿಂದ ಹೊರ ಬರುವ ಕೃಷ್ಣ ದೇವರ ಉತ್ಸವ ಮೂರ್ತಿಯನ್ನ ಮಧ್ವ ಸರೋವರಕ್ಕೆ ಕೊಂಡೊಯ್ಯಲಾಯ್ತು. ಸಾಲು ಸಾಲು ದೀಪಗಳ ನಡುವೆ ಕೃಷ್ಣ ದೇವರ ಮೆರವಣಿಗೆ ನಡಿಯಿತು.. ರಥದ ಮುಂಭಾಗದಲ್ಲಿ ಚಂಡೆಗಳ ನಾದ ವೈಭವ ಮೇಳೈಸಿತು.

ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಸಹಿತ ಹಲವು ಮಠಗಳ ಯತಿಗಳು ಭಾಗವಹಿಸಿದ್ರು. ನೂರಾರು ಭಕ್ತರು ಸೇರಿ ಎರಡೂ ರಥಗಳನ್ನ ಎಳೆದರು. ಸಾವಿರಾರು ಸಂಖ್ಯೆಯಲ್ಲಿ ಕೃಷ್ಣ ಮಠಕ್ಕೆ ಬಂದ ಭಕ್ತರು ಲಕ್ಷದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಮೂರು ದಿನಗಳ ಕಾಲ ಸಮಾನ ವೈಭವದಿಂದ ಲಕ್ಷದೀಪೋತ್ಸವ ನಡೆಯುತ್ತೆ. ಅಷ್ಟಮಠಗಳ ರಥಬೀದಿಯಲ್ಲಿ ಸೇವಾರೂಪದಲ್ಲಿ ನಡೆಯುವ ಉತ್ಸವದಿಂದ ದಿನವೂ ಹಬ್ಬದ ವಾತಾವರಣ ಇರಲಿದೆ.

Continue Reading

LATEST NEWS

ಮಕ್ಕಳ ಜೀವಕ್ಕೆ ಕುತ್ತು ತಂದ ಇಲಿ ಪಾಷಾಣ

Published

on

ಮನೆಯಲ್ಲಿ ಇಲಿ ಕಾಟ ಹೆಚ್ಚಿದೆ ಎಂದು ಪೋಷಕರು ರೂಮಿನಲ್ಲಿ ಇಲಿ ಪಾಷಾಣವನ್ನಿಟ್ಟು ಮಲಗಿದ್ದಾರೆ, ಬೆಳಗಾಗುವಷ್ಟರಲ್ಲಿ ಇಲಿಗಳ ಬದಲು ಇಬ್ಬರು ಮಕ್ಕಳು ಕೊನೆಯು*ಸಿರೆಳೆದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಚೆನ್ನೈನಲ್ಲಿ ಈ ಘಟನೆ ನಡೆದಿದೆ,. ರಾತ್ರಿ ಇಲಿ ಪಾಷಾಣವನ್ನು ಪುಡಿ ರೂಪದಲ್ಲಿ ರೂಮಿನಲ್ಲಿರಿಸಿದ್ದರು. ಚೆನ್ನೈ ಹೊರವಲಯದಲ್ಲಿರುವ ಕುಂದ್ರತೂರಿನ ಮನಂಚೇರಿ ಪ್ರದೇಶದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

ನಾಲ್ವರು ಕುಟುಂಬ ಸದಸ್ಯರು ಕೋಣೆಯಲ್ಲಿ ಇಲಿ ವಿಷವನ್ನು ಪುಡಿಮಾಡಿಟ್ಟು ಮಲಗಿದ್ದರು. ಫ್ಯಾನ್​ನಿಂದಾಗಿ ಆ ಪುಡಿಯನ್ನು ಅವರು ಗಾಳಿಯ ಮೂಲಕ ಉಸಿರಾಡಿದ್ದ ಕಾರಣ ಇಬ್ಬರು ಸಾ*ವನ್ನಪ್ಪಿದ್ದಾರೆ.

ಮರುದಿನ ಅಕ್ಕಪಕ್ಕದ ಮನೆಯವರು ಗಿರಿಧರನ್, ಪವಿತ್ರಾ, ಅವರ ಒಂದು ವರ್ಷದ ಮಗ ಮತ್ತು ಆರು ವರ್ಷದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಎಲ್ಲರೂ ವಾಂತಿ ಮಾಡಿಕೊಂಡಿದ್ದರು. ಮಗ ಸಾಯಿ ಸುದರ್ಶನ್ ಮತ್ತು ಮಗಳು ವಿಶಾಲಿನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಗಿರಿಧರನ್ ಮತ್ತು ಪವಿತ್ರ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಘಟನೆಯ ಕುರಿತು ಕುಂದ್ರತ್ತೂರು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕೀಟ ನಿಯಂತ್ರಣ ಕಂಪನಿಯ ಇಬ್ಬರು ಸಿಬ್ಬಂದಿ ಇಲಿ ವಿಷವನ್ನು ಹಾಕಿದ್ದಾರೆ ಎಂದು ಪ್ರಾಥಮಿಕ ಸಂಶೋಧನೆಗಳು ತೋರಿಸುತ್ತವೆ.

ಈ ಇಲಿ ವಿಷವನ್ನು ಪುಡಿಯ ರೂಪದಲ್ಲಿ ಇರಿಸಿದ್ದರು. ಮುಚ್ಚಿದ ಹವಾನಿಯಂತ್ರಿತ ಕೋಣೆಯಾಗಿದ್ದ ಕಾರಣ ಆ ವಿಷ ಇಡಿ ರೂಮನ್ನು ಆಕ್ರಮಿಸಿತ್ತು. ನಾಲ್ವರೂ ರಾತ್ರಿಯಿಡೀ ತಿಳಿಯದೆ ವಿಷಗಾಳಿಯನ್ನು ಉಸಿರಾಡಿದ್ದರು. ಕೀಟ ನಿಯಂತ್ರಣ ಕಂಪನಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

LATEST NEWS

Trending

Exit mobile version