LATEST NEWS
ಬೋರ್ ವೆಲ್ ಗೆ ಬಿದ್ದ 18 ವರ್ಷದ ಯುವತಿ !
Published
1 day agoon
By
NEWS DESK3ಮಂಗಳೂರು/ಅಹಮದಾಬಾದ್: ಯವತಿಯೊಬ್ಬಳು ಕೊಳವೆಬಾವಿಗೆ ಬಿದ್ದಿರುವ ಘಟನೆ ಗುಜರಾತ್ ನ ಕಛ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಭುಜ್ ತಾಲೂಕಿನ ಕಂಡೇರೈ ಗ್ರಾಮದಲ್ಲಿ ಸೋಮವಾರ (ಜ.6 ರಂದು) ಮುಂಜಾನೆ 6:30ರ ಹೊತ್ತಿಗೆ ಈ ಘಟನೆ ನಡೆದಿದೆ.
ರಾಜಸ್ಥಾನದ ವಲಸೆ ಕಾರ್ಮಿಕನ ಕುಟುಂಬಕ್ಕೆ ಸೇರಿರುವ ಇಂದ್ರಾ ಮೀನಾ (18) ಎಂಬ ಯುವತಿ 540 ಅಡಿ ಆಳದ ಕೊಳವೆಬಾವಿಯಲ್ಲಿ 490 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಭುಜ್ ಜಿಲ್ಲಾಧಿಕಾರಿ ಎಬಿ ಜಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಶಾಕ್ಗೆ ಒಂದೂವರೆ ವರ್ಷದ ಮಗು ಬಲಿ
ಯುವತಿ ಬೋರ್ ವೆಲ್ ಗೆ ಬಿದ್ದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದೆ. ಎನ್ ಡಿಆರ್ ಎಫ್, ಬಿಎಸ್ ಎಫ್ ಸೇರಿದಂತೆ ಹಲವು ರಕ್ಷಣಾ ತಂಡಗಳು ಯುವತಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸುತ್ತಿದೆ. ಆಮ್ಲಜನಕ ಒದಗಿಸುತ್ತಿದ್ದು, ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ವರದಿಯಾಗಿದೆ.
ಆದರೆ ಯುವತಿ ಬೋರ್ ವೆಲ್ ಗೆ ಹೇಗೆ ಬಿದ್ದಿದ್ದಾಳೆ ಎನ್ನುವ ಬಗ್ಗೆ ಅನುಮಾನ ಶುರುವಾಗಿದೆ. ಇತ್ತೀಚೆಗೆ ಯುವತಿಗೆ ನಿಶ್ಚಿತಾರ್ಥ ನಡೆದಿದ್ದು, ಭಾನುವಾರ (ಜ. 5)ರಂದು ರಾತ್ರಿ ಜೋಡಿಗಳ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿತ್ತು ಎಂದು ಯುವತಿ ಜೊತೆ ಕೆಲಸ ಮಾಡುತ್ತಿದ್ದ ಫಾತಿಮಾಬಾಯಿ ತಿಳಿಸಿದ್ದಾರೆ. ಹೀಗಾಗಿ ಯುವತಿ ಬೆಳಗ್ಗೆ ಬೋರ್ ವೆಲ್ ಗೆ ಹಾರಿದ್ದಾಳೆ ಎಂಬ ಅನುಮಾನವೂ ಮೂಡಿದೆ.
ಈ ಬಗ್ಗೆ ಯುವತಿಯ ಸಹೋದರ, ‘ನನ್ನ ಸಹೋದರಿ ಮತ್ತು ಮಗಳು ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದರು. ವಾಪಸ್ ಬರುವಾಗ ನನ್ನ ಮಗಳು ಮಾತ್ರ ಬಂದಿದ್ದಳು. ನನ್ನ ಸಹೋದರಿ ಬಂದಿರಲಿಲ್ಲ. ಹೀಗಾಗಿ ಹೊರಗೆ ಹೋಗಿ ನೋಡಿದಾಗ ನನ್ನ ಸಹೋದರಿ ಬೋರ್ ವೇಲ್ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿದ್ದಳು’ ಎಂದು ಹೇಳಿದ್ದಾರೆ.
DAKSHINA KANNADA
ಶರಣಾಗತಿಯಾದ ನಕ್ಸಲರು ಯಾರು ? ಇವರ ಹಿನ್ನಲೆ ಏನು ?
Published
56 minutes agoon
08/01/2025By
NEWS DESK2ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಆದಿವಾಸಿಗಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಆರಂಭವಾದ ಹೋರಾಟ 3 ದಶಕಗಳ ಬಳಿಕ ಅಂತ್ಯ ಕಂಡಿದೆ. ಅನೇಕ ರಕ್ತಸಿಕ್ತ ಅಧ್ಯಾಯ ಬರೆದಿರುವ ಈ ಹೋರಾಟ ಇಂದು ಆರು ನಕ್ಸಲರ ಶರಣಾಗತಿಯೊಂದಿಗೆ ಮುಕ್ತಾಯವಾಗಿದೆ. ಇದರಿಂದಾಗಿ ಹಲವಾರು ಭಾರೀ ಗುಂಡಿನ ಮೊರೆತ ಕೇಳಿಸಿದ್ದ ಪಶ್ಚಿಮ ಘಟ್ಟದಲ್ಲಿ ಇನ್ನು ಮುಂದೆ ನೀರವ ಮೌನ ಕಾಡಲಿದೆ.
ಶರಣಾಗತಿಯಾದ ನಕ್ಸಲರು ಯಾರು ? ಇವರ ಹಿನ್ನಲೆ ಏನು ?
ಲತಾ ಮುಂಡಗಾರು:
ಶೃಂಗೇರಿ ತಾಲೂಕಿನ ಲತಾ ಮುಂಡಗಾರು ಬಡ ಆದಿವಾಸಿ ದಂಪತಿಯ ದೊಡ್ಡ ಕುಟುಂಬದ ಹೆಣ್ಣುಮಗಳು. ಬಡತನ ಹಾಗೂ ಶಾಲೆಯ ಶಿಕ್ಷಕರ ಕಿರುಕುಳಗಳಿಂದಾಗಿ 6ನೇ ತರಗತಿಗೆ ಓದು ನಿಲ್ಲಿಸಿದರು. ಈಕೆ 2000 ಇಸವಿಯಲ್ಲಿ ತನ್ನ 18ನೇ ವಯಸ್ಸಿಗೇ ಕಾಡಿನ ದಾರಿ ಹಿಡಿದು ಕೈನಲ್ಲಿ ಬಂದೂಕು ಹಿಡಿದು ಆಧಿವಾಸಿಗಳ ಹಕ್ಕಿನ ಪರವಾಗಿ ಹೋರಾಟ ಮಾಡಿದ ನಕ್ಸಲ್ ನಾಯಕಿ ಲತಾ ಮುಂಡಗಾರು. ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಲ್ಲಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಹೋರಾಟಕ್ಕೆ ದುಮುಕಿದವರು. ಆದ್ರೆ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಲೆ ಸಿಗಲಿಲ್ಲ ಎಂಬ ಕಾರಣದಿಂದ ಸಶಸ್ತ್ರ ಹೋರಾಟಕ್ಕಾಗಿ ನಕ್ಸಲರಾಗಿ ಜೊತೆ ಸೇರಿ 25 ವರ್ಷಗಳಿಂದ ಕರ್ನಾಟಕ ಕೇರಳದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಎಂಬ ಹಣೆ ಪಟ್ಟಿಕೊಟ್ಟಿಕೊಂಡಿದ್ದರು. ನೇತ್ರಾವತಿ ತಂಡದ ನಾಯಕತ್ವ ವಿಕ್ರಂ ಗೌಡ ವಹಿಸಿದ್ದರೆ ಭದ್ರಾ ತಂಡದ ನಾಯಕಿಯಾಗಿ ಮುಂಡಗಾರು ಲತಾ ಗುರುತಿಸಿಕೊಂಡಿದ್ದರು. ನವೆಂಬರ್ ತಿಂಗಳಲ್ಲಿ ವಿಕ್ರಂ ಗೌಡನ ಹತ್ಯೆಯ ಬಳಿಕ ನಡೆದ ಬೆಳವಣಿಗೆಗಳಲ್ಲಿ ಶರಣಾಗತಿ ಬಯಸಿದ ನಕ್ಸಲರಲ್ಲಿ ಇವರು ಪ್ರಮುಖ ನಕ್ಸಲ್ ನಾಯಕಿ.
ಸುಂದರಿ ಕುತ್ಲೂರು:
ಸುಂದರಿಯೂ ಸಹ ಲತಾ ರೀತಿಯಲ್ಲಿ ಆದಿವಾಸಿ ಮಹಿಳೆ. ಬಡತನ ಹಾಗೂ ಶಾಲೆ ದೂರವಿದ್ದುದರಿಂದ ಮೂರನೆಯ ತರಗತಿಯ ನಂತರ ಶಾಲೆ ತೊರೆದರು. ಇವರ ಕುಟುಂಬವೂ ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತನ್ನ ಎಲ್ಲವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದರು. ಪ್ರಜಾಸತ್ತಾತ್ಮಕ ಚಳುವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವರು ಯುವಜನರಂತೆ ಸುಂದರಿಯೂ ಸಹ ಆಯುಧವನ್ನು ಕೈಗೆತ್ತಿಕೊಂಡರು. ತನ್ನ 19ನೇ ವಯಸ್ಸಿನಲ್ಲಿ 2004 ರಲ್ಲಿ ನಕ್ಸಲ್ ಹೋರಾಟಕ್ಕೆ ದುಮುಕಿದ್ದು, 20 ವರ್ಷಗಳಿಂದ ನಕ್ಸಲ್ ತಂಡದಲ್ಲಿದ್ದು ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದಾರೆ. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು ದೌರ್ಜನ್ಯಗಳನ್ನು ಇಂದಿಗೂ ನೋವಿನಿಂದ ನೆನಪಿಸಿಕೊಳ್ಳುವ ಸುಂದರಿ ತನ್ನ ಹೋರಾಟದ ಕೆಚ್ಚನ್ನು ಉಳಿಸಿಕೊಂಡಿದ್ದು ಇನ್ನು ಮುಂದೆ ಪ್ರಜಾತಾಂತ್ರಿಕ ಚಳುವಳಿಗಳ ಭಾಗವಾಗಲು ಮುಖ್ಯ ವಾಹಿನಿಯನ್ನು ಸೇರಬಯಸಿದ್ದಾರೆ.
ವನಜಾಕ್ಷಿ:
ಎಸ್ ಎಸ್ ಎಲ್ ಸಿ ವರೆಗೂ ಓದಿರುವ ವನಜಾಕ್ಷಿ ಈ ತಂಡದ ಅತಿ ಹಿರಿಯ ಸದಸ್ಯೆ. 1985 ರಲ್ಲಿ ಓದು ನಿಲ್ಲಿಸಿದ ಈ ಆದಿವಾಸಿ ಮಹಿಳೆ ತನ್ನ ಗ್ರಾಮದಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಂಟು ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಟೈಪ್ ರೈಟಿಂಗ್ ಕಲಿತು, ಹೊಲಿಗೆಯನ್ನು ಜೀವ ಜೀವನಾಧಾರವಾಗಿಸಿಕೊಂಡರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ ಸಹ ಇವರಿಗೆ ಮತ್ತು ಇವರ ಕುಟುಂಬಕ್ಕೆ ಬಲಾಢ್ಯರಿಂದ ತಮ್ಮ ತುಂಡುಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಪರಿಣಾಮವಾಗಿ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೆ ಒಬ್ಬ ತಮ್ಮ ಆತ್ಮಹತ್ಯೆಗೆ ಶರಣಾದ. ಅಲ್ಲದೆ ಸುತ್ತಮುತ್ತ ಇದ್ದ ಹಲವು ಕುಟುಂಬಗಳು ಸಹ ತಮ್ಮಂತೆ ಬಡತನ ಶೋಷಣೆಗಳಿಗೆ ಬಲಿಯಾಗುತ್ತಿದ್ದುದ್ದನ್ನು ಕಂಡ ವನಜಾಕ್ಷಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡರು. ಸಶಸ್ತ್ರ ಹೋರಾಟವೇ ದಾರಿ ಎಂಬ ನಿರ್ಧಾರಕ್ಕೂ ಆ ಕಾಲದಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಳುವಳಿಯ ಪ್ರಭಾವದಿಂದಾಗಿ ಬಂದರು. 2000 ನೇ ಇಸವಿಯಿಂದ ಮಾವೋವಾದಿ ಪಕ್ಷದ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು. ತನ್ನ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಯೂ ಮುಂದುವರಿಸಬಹುದಾದ ಅವಕಾಶಗಳನ್ನು ಅರ್ಥ ಮಾಡಿಕೊಂಡು ಈಗ ಮುಖ್ಯವಾಹಿನಿಯ ಭಾಗವಾಗಲು ಸಿದ್ಧರಾಗಿದ್ದಾರೆ.
ಜಯಣ್ಣ ಅರೋಲಿ:
ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದವರು. ಎರಡನೇಯ ಬಿಎ ವರೆಗೂ ಓದಿರುವ ದಲಿತ ಯುವಕ. ಕಾಲೇಜಿನಲ್ಲಿ ಇರುವಾಗಲೇ ಆ ಸಮಯದಲ್ಲಿ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳುವಳಿಯ ಕಡೆ ಆಕರ್ಷಿತರಾದರು. ಇದರ ಆಸಕ್ತಿಯಿಂದ ಚಳುವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್ಕೌಂಟರ್ ಹತ್ಯೆ ಆಘಾತವನ್ನುಂಟು ಮಾಡಿತು. 2000ನೇ ಇಸವಿಯಲ್ಲಿ ತನ್ನ 24ನೇ ವಯಸ್ಸಿನಲ್ಲಿ ದಳದ ಭಾಗವಾದರು. ಅಂದಿನಿಂದ ಕೇರಳ ಕರ್ನಾಟಕಗಳಲ್ಲಿ ಇವರ ಹೋರಾಟದ ಚಟುವಟಿಕೆಗಳು ನಡೆದಿದೆ. 2018 ರಲ್ಲಿ ಪುನಃ ಸಶಸ್ತ್ರ ಚಳುವಳಿಗೆ ಮರಳಿದರು. ಜನರ ಜೊತೆ ಸೇರಿ ಜನಪರ ಹೋರಾಟಗಳನ್ನು ನಡೆಸಲು ಮುಖ್ಯ ವಾಹಿನಿಯ ಭಾಗವಾಗಿ ಬಯಸಿದ್ದಾರೆ. ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಸಂದಾಯವಾಗಬಹುದಾದ ಹಣದ ಅರ್ಧ ಭಾಗವನ್ನು ತನ್ನ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಬೇಕೆಂದು ತೀರ್ಮಾನಿಸಿದ್ದಾರೆ.
ವಸಂತ್ ಆರ್ಕಾಟ್:
ತಮಿಳುನಾಡಿನ ವೆಲ್ಲೂರಿನ ವಸಂತ್ ಬಿ ಟೆಕ್ ಪದವೀಧರ. ವೆಲ್ಲೂರು ಜಿಲ್ಲೆಯ ಆರ್ಕಾಟ್ ಅವರ ಊರು. ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಾ ಬೆಳೆದವರು. 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಶಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆಯಾಗಿರುವ ವಸಂತ್ ತನ್ನ ಆದರ್ಶಗಳನ್ನು ಬಿಟ್ಟುಕೊಡದೆ ಹೋರಾಟದ ಮಾರ್ಗವನ್ನು ಬದಲಿಸಿ ಮುಖ್ಯವಾಹಿನಿಯನ್ನು ಸೇರಬಯಸಿದ್ದಾರೆ.
ಜಿಶ:
ಜಿಶ ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಕೇರಳದ ಜೀಶ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ. ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದರು. 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು.
ಇದೀಗ ಆರು ಜನ ನಕ್ಸಲರು ಚಿಕ್ಕಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಿದ್ದಾರೆ. ಈ ಮೂಲಕ ಪಶ್ಚಿಮ ಘಟ್ಟದ ಕಾಡಿನಲ್ಲಿ ನಡಿತಾ ಇದ್ದ ಗುಂಡಿನ ಕಾಳಗಕ್ಕೆ ತಿಲಾಂಜಲಿ ಹಾಕಿದ್ದಾರೆ. ಜೊತೆಗೆ ನಕ್ಸಲರಿಂದಾಗಿ ನಿದ್ದೆಗೆಟ್ಟಿದ್ದ ಕರ್ನಾಟಕ ತಮಿಳುನಾಡು ಹಾಗೂ ಕೇರಳ ಸರ್ಕಾರಕ್ಕೂ ನೆಮ್ಮದಿಯನ್ನು ನೀಡಿದ್ದಾರೆ. ಮುಖ್ಯವಾಹಿನಿಗೆ ಬಂದು ಮತ್ತೆ ಜನಪರ ಹೋರಾಟ ನಡೆಸುವ ಸಂಕಲ್ಪದೊಂದಿಗೆ ಎಲ್ಲರೂ ಶರಣಾಗಿದ್ದಾರೆ.
ಮಂಗಳೂರು/ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಮಗ ಆರ್ಯನ್ ಖಾನ್ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಅದರಲ್ಲಿ ಜ. 1ರಂದು ಹೊಸ ವರ್ಷಕ್ಕೆ ಶಾರುಖ್, ಪತ್ನಿ ಗೌರಿ ಖಾನ್, ಮಗ ಆರ್ಯನ್ ಖಾನ್ ಇಸ್ಲಾಂನ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾಗೆ ತೆರಳಿದ್ದಾರೆ. ಗೌರಿ ಅವರು ಇಸ್ಲಾಂಗೆ ಮತಾಂತರ ಆಗಿದ್ದಾರೆ ಎನ್ನುವಂತೆ ಫೋಟೋ ವೈರಲ್ ಆಗಿತ್ತು.
ಆದರೆ ಬಳಿಕ ಇದು ಫೇಕ್ ಎಂದು ತಿಳಿದು ಬಂದಿದೆ. ಈ ಫೋಟೋವನ್ನು ಡೀಪ್ ಫೇಕ್ ಬಳಸಿ ಎಡಿಟ್ ಮಾಡಲಾಗಿದೆ.
“ಡೀಪ್ ಫೇಕ್” ಜಾಲಕ್ಕೆ ಖ್ಯಾತ ಸಿನಿ ತಾರೆಯರೆ ಸಿಲುಕುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಕಾಜಾಲ್, ಕತ್ರಿನಾ ಕೈಫ್, ಆಲಿಯಾ ಭಟ್ ಈಗಾಗಲೇ ಇದರ ಜಾಲಕ್ಕೆ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: ಮೊಮ್ಮಗುವಿನ ಪಾಲನೆಗೆ ಟೆಕ್ಕಿ ಅತುಲ್ ತಾಯಿ ಮೊರೆ; ಸುಪ್ರೀಂ ನಕಾರ
ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಡೀಪ್ ಫೇಕ್ ಗಳನ್ನು ಸೃಷ್ಟಿಸಿ ವೈರಲ್ ಮಾಡಿದರೆ 1 ಲಕ್ಷ ರೂ. ದಂಡ ಮತ್ತು 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ವೈರಲ್ ಆಗುತ್ತವೆ. ರಾತ್ರಿ ಕಳೆದು ಬೆಳಕಾಗುವಷ್ಟರಲ್ಲಿ ಒಬ್ಬರ ಜೀವನವನ್ನೇ ಅಳಿಸುವಂತ ಶಕ್ತಿ ಈ ಇಂಟರ್ ನೆಟ್ ಗಿದೆ.
LATEST NEWS
ಮೊಮ್ಮಗುವಿನ ಪಾಲನೆಗೆ ಟೆಕ್ಕಿ ಅತುಲ್ ತಾಯಿ ಮೊರೆ; ಸುಪ್ರೀಂ ನಕಾರ
Published
2 hours agoon
08/01/2025By
NEWS DESK3ಮಂಗಳೂರು/ನವದೆಹಲಿ : ಪತ್ನಿಯ ವಿರುದ್ದ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ 4 ವರ್ಷದ ಮಗನನ್ನು ಅತುಲ್ ತಾಯಿಯ ಸುಪರ್ದಿಗೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮೊಮ್ಮಗನನ್ನು ತಮ್ಮ ಜೊತೆಗೆ ಕಳುಹಿಸಬೇಕು ಎಂದು ಅತುಲ್ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, “ಮಗುವಿಗೆ ಅರ್ಜಿದಾರರ ಪರಿಚಯವೇ ಇಲ್ಲ. ಹೀಗಾಗಿ, ಮಗುವನ್ನು ನಿಮ್ಮ ಸುಪರ್ದಿಗೆ ವಹಿಸಲು ಆಗುವುದಿಲ್ಲ. ನೀವು ಇಚ್ಛಿಸಿದರೆ ಮಗುವನ್ನು ಭೇಟಿಯಾಗಬಹುದು’ ಎಂದು ಹೇಳಿದೆ.
ಅಲ್ಲದೆ, ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಅವರು ಆರೋಪಿಯೇ ಹೊರತು, ಅವರ ವಿರುದ್ದದ ಆರೋಪ ಇನ್ನೂ ಸಾಬೀತಾಗಿಲ್ಲ. ಮಾಧ್ಯಮಗಳ ತೀರ್ಪನ್ನು ಆಧರಿಸಿ ನಾವು ತೀರ್ಪು ನೀಡಲು ಬರುವುದಿಲ್ಲ ಎಂದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ಅಂದರೆ ಜ. 20ರಂದು ಮಗುವನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಸೂಚಿಸಿತು.
ಇದನ್ನೂ ಓದಿ: ತಂದೆಯನ್ನು ಸುಟ್ಟು ಹಾಕಿ ಕೊಂದ ಪುತ್ರಿಯರು! ಕಾರಣ ಏನು ಗೊತ್ತಾ?
ಇದೇ ವೇಳೆ, 4 ವರ್ಷದ ಮಗು ಸದ್ಯಕ್ಕೆ ಹರ್ಯಾಣದ ಫರೀದಾಬಾದ್ ನ ಬೋರ್ಡಿಂಗ್ ಸ್ಕೂಲ್ ನಲ್ಲಿದೆ. ನಿಖಿತಾ ಅವರಿಗೆ ಜಾಮೀನು ಸಿಕ್ಕಿರುವ ಕಾರಣ, ಮಗುವನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ನಿಖೀತಾ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
34 ವರ್ಷದ ಅತುಲ್ ಸುಭಾಷ್ ಡಿಸೆಂಬರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಕಿತಾ ಮತ್ತು ಅವರ ಕುಟುಂಬದ ಸದಸ್ಯರು ತನಗೆ ಮತ್ತು ತನ್ನ ಹೆತ್ತವರ ವಿರುದ್ದ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿಕಿತಾ, ಆಕೆಯ ತಾಯಿ ನಿಶಾ ಮತ್ತು ಆಕೆಯ ಸಹೋದರ ಅನುರಾಗ್ ಆತ್ಮಹತ್ಯೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿರುವ ಆರೋಪ ಎದುರಿಸುತ್ತಿದ್ದು, ಬಂಧನದ ಬಳಿಕ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
LATEST NEWS
ಉಡುಪಿ: ರಸ್ತೆ ಅಪಘಾತದಲ್ಲಿ 28 ವರ್ಷದ ಯುವಕ ಮೃ*ತ್ಯು
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
ಸರಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಬೈಕ್; ಸವಾರರಿಬ್ಬರಿಗೆ ಗಂಭೀರ ಗಾಯ
ತಂದೆಯನ್ನು ಸುಟ್ಟು ಹಾಕಿ ಕೊಂದ ಪುತ್ರಿಯರು! ಕಾರಣ ಏನು ಗೊತ್ತಾ?
ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಮಹಿಳೆ ಸಾವು
ಕರ್ನಾಟಕದಲ್ಲಿ ಎಚ್ಎಂಪಿವಿ ವೈರಸ್ ಟೆಸ್ಟ್ ಕಡ್ಡಾಯವಲ್ಲ: ಆರೋಗ್ಯ ಇಲಾಖೆ
Trending
- DAKSHINA KANNADA7 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- DAKSHINA KANNADA5 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- BIG BOSS4 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?
- BIG BOSS5 days ago
BBKS11: ಬಿಗ್ ಬಾಸ್ ವೀಕ್ಷಕರ ಮನಗೆದ್ದ ಮೋಕ್ಷಿತಾ ಮಾತು.. ಫ್ಯಾನ್ಸ್ಗಳಿಂದ ಫುಲ್ ಮಾರ್ಕ್ಸ್!