Wednesday, October 5, 2022

ಅಮಿತ್‌ ಶಾ ಭಯಂಕರ ಕ್ಲೀನ್‌ ಮನುಷ್ಯ: ಕಾಂಗ್ರೆಸ್‌ MLC ಹರೀಶ್‌ ಕುಮಾರ್‌

ಮಂಗಳೂರು: ಅಮಿತ್‌ ಶಾ ಭಯಂಕರ ಕ್ಲೀನ್‌ ಮನುಷ್ಯ. ಅವರಷ್ಟು ಕ್ಲೀನ್‌ ಈ ರಾಜ್ಯ ದೇಶದಲ್ಲಿ ಮತ್ತೊಬ್ಬರಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಎಂಎಲ್‌ಸಿ ಹರೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.


ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ದಿನಕ್ಕೊಂದು ಹಗರಣ,

ದಿನಕ್ಕೊಂದು ಭ್ರಷ್ಟಾಚಾರ ಇದು ಬಿಜೆಪಿ ಸರಕಾರದ ಸಾಧನೆಯಾಗಿದೆ. ಪಿಎಸ್‌ಐ ಹಗರಣದಲ್ಲಿ ಬಿಜೆಪಿ ನಾಯಕ ಹಾಗರಗಿ ಸೇರಿದಂತೆ ಪ್ರಮುಖ ಕುಳಗಳೇ ಇದ್ದಾರೆ. ಆದರೆ ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ತಲೆಗೆ ಕಟ್ಟಲು ಮುಂದಾಗಿದೆ.

ತನಿಖೆಯ ಹಾದಿಯೂ ದಿಕ್ಕು ತಪ್ಪಿದ್ದು, ಕಾಟಾಚಾರಕ್ಕೆ ಎಂಬಂತೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.


ಕಾಂಗ್ರೆಸ್ ಸರಕಾರವಿದ್ದಾಗ ಯಾವುದೇ ಚಿಕ್ಕಪುಟ್ಟ ಸಮಸ್ಯೆ ಬಂದಾಗಲೂ ಅದನ್ನು ಪಾರದರ್ಶಕವಾಗಿ ತನಿಖೆ ಮಾಡಲಾಗಿದೆ.

ಇವತ್ತು ಬಿಜೆಪಿಯ ತನಿಖೆ ಹಾದಿ ತಪ್ಪುತ್ತಿದೆ. ಅನೇಕ ಕಡೆ ಕೇಂದ್ರಗಳಿದ್ದವು. ಆದರೆ ಕೇವಲ ಗುಲ್ಬರ್ಗದಲ್ಲಿ ಮಾತ್ರ ತನಿಖೆ ಮಾಡಲಾಗುತ್ತಿದೆ.

ಯಾಕೆ…? ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ತನಿಖೆ ಆಗಲೇಬೇಕು. 545 ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿಯ ವಿಚಾರವನ್ನೂ ಸೂಕ್ತ ತನಿಖೆಗೆ ಒಳಪಡಿಸಬೇಕು.

ಇಂದು ಪ್ರತಿಯೊಬ್ಬರೂ ಸರಕಾರವನ್ನು ಸಂಶಯದಿಂದ ನೋಡುತ್ತಿದ್ದು,

ಕಮಿಷನರ್ ಎಲ್ಲಾ ಕ್ಷೇತ್ರದಲ್ಲೂ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರಕಾರದ ವೈಫಲ್ಯ ತಳಮಟ್ಟದಲ್ಲಿರುವ ಜನಸಾಮಾನ್ಯರಿಗೂ ಅರ್ಥವಾಗಿದೆ. ಅವರ ವೈಫಲ್ಯವನ್ನು ಕಾಂಗ್ರೆಸ್‌ ಜನರಿಗೆ ಮುಟ್ಟಿಸಬೇಕಾಗಿಲ್ಲ ಎಂದು ಹೇಳಿದರು.

ಶುಭೋದಯ ಆಳ್ವ, ಪ್ರಕಾಶ್‌ ಸಾಲಿಯಾನ್‌, ಟಿ.ಕೆ ಸುಧೀರ್‌, ಚಂದ್ರಕಲಾ, ಮಂಜುಳಾ ನಾಯ್ಕ್‌, ಯೋಗೀಶ್‌ ಕುಮಾರ್‌, ನೀರಜ್‌ ಪಾಲ್‌ ಮತ್ತಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...