ಉಡುಪಿ : ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀಠ ಬಯಲುವಿನಲ್ಲಿ ಸೋಮವಾರ ರಾತ್ರಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಕೂಡ ಬ*ಲಿಯಾಗಿದ್ದ ಇದೀಗ ನಕ್ಸಲ್ ವಿಕ್ರಂಗೌಡನ ಶ*ವ ಸಾಗಿಸುತ್ತಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ.
ಹೌದು ಮರಣೋತ್ತರ ಪರೀಕ್ಷೆ ಬಳಿಕ ವಿಕ್ರಂ ಗೌಡನ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು ಗ್ರಾಮಕ್ಕೆ ವಿಕ್ರಂ ಗೌಡನ ಶ*ವ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಶ*ವ ಸಾಗಣೆ ವೇಳೆ ಆಂಬುಲೆನ್ಸ್ ಪಲ್ಟಿಯಾಗಿದೆ.
ಮೋಸ್ಟ ವಾಂಟೆಡ್ ವಿಕ್ರಂ ಗೌಡ ಅಂಡ್ ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕುಟುಂಬಸ್ಥರಿಗೆ ವಿಕ್ರಂ ಗೌಡನ ಮೃ*ತ ದೇಹವನ್ನು ತೆಗೆದುಕೊಂಡು ಹೆಬ್ರಿಕೋಡ್ಲು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಿಕ್ರಂ ಗೌಡನ ಅಂ*ತ್ಯಸಂ*ಸ್ಕಾರ ನೆರವಿರುವ ಸಾಧ್ಯತೆ ಇದೆ. ವಿಕ್ರಂ ಗೌಡನ ನಿವಾಸದ ಆವರಣದಲ್ಲಿಯೇ ಆತನ ಅಂತ್ಯ ಸಂ*ಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೆರವಣಿಗೆಯ ಮೂಲಕ ಪಾರ್ಥೀವ ಶರೀರವನ್ನು ಬೀಜಾಡಿಯ ಅನೂಪ್ ನಿವಾಸಕ್ಕೆ ತರಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನ ನಡೆದು ಬೀಜಾಡಿ ಪಡುಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ನೂರಾರು ಮಂದಿ ಆಗಮಿಸಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದರು. ಬಳಿಕ ಅಂತ್ಯಕ್ರಿಯೆ ನಡೆಯಿತು.
ಚಿತೆಗೆ ಸಹೋದರ ಶಿವರಾಂ ಅಗ್ನಿಸ್ಪರ್ಶ ಮಾಡಿದ್ದು, ಸಾವಿರಾರು ಜನರು ಯೋಧನ ಅಂತಿಮ ವಿದಾಯಕ್ಕೆ ಸಾಕ್ಷಿಯಾಗಿದ್ದರು. 13 ವರ್ಷಗಳಿಗೂ ಅಧಿಕ ಕಾಲ ದೇಶ ಸೇವೆ ಮಾಡಿದ್ದ ಯೋಧ ಅಕಾಲಿಕವಾಗಿ ಅಗಲಿದ್ದು, ಇಡೀ ಜಿಲ್ಲೆಯೆ ಶೋಕ ಸಾಗರದಲ್ಲಿ ಮುಳುಗಿದೆ.
ಮಂಗಳೂರು: ಕರಾವಳಿ ಉತ್ಸವದ ಹಿನ್ನಲೆಯಲ್ಲಿ ಡಿಸೆಂಬರ್ 28 ಮತ್ತು 29 ರಂದು ತಣ್ಣೀರು ಬಾವಿ ಬೀಚ್‌ನಲ್ಲಿ ಬೀಚ್ ಉತ್ಸವ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ಜನರಿಗೆ ಬರಪೂರ ಮನರಂಜನೆ ನೀಡಲಿರುವ ಈ ಬೀಚ್ ಉತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ಸಮಾಗಮವಾಗಲಿದೆ.
ಈ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು, ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿರುವ ಮಣಿಕಾಂತ್ ಕದ್ರಿ ಹಾಗೂ ತನ್ನದೇ ಶೈಲಿಯ ಸಂಗೀತದ ಮೂಲಕ ಜಗತ್ಪ್ರಸಿದ್ದಿ ಪಡೆದುಕೊಂಡಿರುವ ಗಾಯಕ ರಘು ದೀಕ್ಷೀತ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ.
ಇದರ ಜೊತೆಗೆ ಬೀಚ್ ಉತ್ಸವದಲ್ಲಿ ಡ್ಯಾನ್ಸ್ ಫೆಸ್ಟಿವಲ್ , ವಾಟರ್ ಸ್ಪೋರ್ಟ್ಸ್, ಸ್ಯಾಂಡ್ ಆರ್ಟ್ , ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವೀಕೆಂಡ್ ಎಂಜಾಯ್ ಮಾಡಲು ಇದೊಂದು ಸದಾವಕಾಶವಾಗಿದ್ದು, ಕರಾವಳಿ ಉತ್ಸವ ಸಂಭ್ರಮಕ್ಕೆ ಈ ಎರಡು ದಿನಗಳ ಬೀಚ್‌ನಲ್ಲಿ ಜನರಿಗೆ ಸಾಕಷ್ಟು ಮನರಂಜನೆ ಸಿಗಲಿದೆ. ವಾಹನ ನಿಲುಗಡೆಗೂ ಪೊಲೀಸ್ ಇಲಾಖೆಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಲ್ತಾನ್ ಬತ್ತೇರಿಯಿಂದ ಬೋಟ್ ಮೂಲಕ ತೆರಳುವವರಿಗೂ ಹೆಚ್ಚಿನ ವ್ಯವಸ್ಥೆಯನ್ನ ಮಾಡಲಾಗಿದೆ.
ಮಂಗಳೂರಿನ ಖ್ಯಾತ ಬಿಲ್ಡರ್ ರೋಹನೊ ಕಾರ್ಪೋರೇಷನ್ ಈ ಬೀಚ್ ಫೆಸ್ಟಿವಲ್‌ಗೆ ಟೈಟಲ್ ಸ್ಪಾನ್ಸರ್ ಆಗಿ ಸಹಕರಿಸಿದ್ದು, ಬೀಚ್ ಫೆಸ್ಟಿವಲ್ ಸಮಿತಿಯ ಅದ್ಯಕ್ಷತೆಯನ್ನು ನಗರ ಪೊಲೀಸ್ ಆಯುಕ್ತರು ವಹಿಸಿಕೊಂಡಿದ್ದಾರೆ.
ಮಂಗಳೂರು/ನಂದ್ಯಾಲ್ : ತಮ್ಮ 24 ವರ್ಷದ ಮಗ ತೃತೀಯ ಲಿಂಗಿಯನ್ನು ಮದುವೆಯಾಗಲು ಮುಂದಾಗಿದ್ದನ್ನು ಕೇಳಿ ತಂದೆ – ತಾಯಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಲ್ಲಿ ನಡೆದಿದೆ. ಸುಬ್ಬಾ ರಾಯುಡು(45) ಮತ್ತು ಸರಸ್ವತಿ(38) ಮೃ*ತ ದಂಪತಿ.
ಮಗ ಸುನೀಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಸ್ಥಳೀಯ ತೃತೀಯ ಲಿಂಗಿ ಸಮುದಾಯದೊಂದಿಗೆ ಒಡನಾಟ ಹೊಂದಿದ್ದನಂತೆ. ಈ ವಿಚಾರ ಗೊತ್ತಾದಾಗ ಸುಬ್ಬಾ ರಾಯುಡು, ಸರಸ್ವತಿ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗನೊಂದಿಗೆ ಜಗಳವೂ ನಡೆದಿದೆ ಎಂದು ತಿಳಿದು ಬಂದಿದೆ.
ತೃತೀಯಲಿಂಗಿಯೊಂದಿಗೆ ಮೂರು ವರ್ಷಗಳಿಂದ ಸುನೀಲ್ ಕುಮಾರ್ ಸಂಬಂಧ ಹೊಂದಿದ್ದ. ಅವರನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದ. ಈ ಬಗ್ಗೆ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ಈ ಹಿಂದೆ ಸುನೀಲ್ ಆತ್ಮಹ*ತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿರುವ ಬಗ್ಗೆ ವರದಿಯಾಗಿದೆ.
ತೃತೀಯ ಲಿಂಗಿಗಳ 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದು, ಪೋಷಕರಿಗೆ ಆ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪೋಷಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದರು. ಇದರಿಂದ ನೊಂದ ದಂಪತಿ ಸಾ*ವಿನ ದಾರಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.