LATEST NEWS
ಅಮೆಜಾನ್ ಸಂಸ್ಥಾಪಕನ ಮದುವೆ ಅಂಬಾನಿ ಮದುವೆಗಿಂತನೂ ಗ್ರ್ಯಾಂಡ್…
Published
4 hours agoon
ಮಂಗಳೂರು/ವಾಷಿಂಗ್ಟನ್: ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಜ್, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರೂ. ದಾಟಲಿದೆ ಎನ್ನಲಾಗಿದೆ.
ಲಾರೆನ್ ಸ್ಯಾಂಚೆಝ್ ಸಂದರ್ಶನಗಳ ಸಮಯದಲ್ಲಿ ತನ್ನ ಮದುವೆಯ ಯೋಜನೆಗಳ ಬಗ್ಗೆ ಸುಳಿವು ನೀಡಿದ್ದಾರೆ ಆದರೆ ದಿನಾಂಕವನ್ನು ದೃಢಪಡಿಸಿಲ್ಲ. ದಿ ಟುಡೇ ಶೋ ಜೊತೆಗಿನ ಚಾಟ್‌ನಲ್ಲಿ, ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಮದುವೆಯ ಯೋಜನೆಯನ್ನು ಕುಶಲತೆಯಿಂದ ಮಾಡುವ ಬಗ್ಗೆ ತಮಾಷೆ ಮಾಡಿದರು, “ನನ್ನ ಬಳಿ Pinterest ಇದೆ. ನಾನು ಎಲ್ಲ ವಧುವಿನಂತೆಯೇ ಇದ್ದೇನೆ.
ಇದನ್ನೂ ಓದಿ : ಭಾರತವಿಲ್ಲದೆ ಜಗತ್ತೇ ಶೂನ್ಯ ; ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
ಅಮೆರಿಕದ ಕೊಲರಾಡೋದ ಆ್ಯಸ್ಪೆನ್ಸ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಮೊದಲ ಪತ್ನಿ ಮೆಕೆನ್ಜಿಗೆ 2019ರಲ್ಲಿ ಡೈವೋರ್ಸ್ ನೀಡಿದ್ದ ಬೆಜೋಸ್, ಮಾಜಿ ಪತ್ನಿಗೆ 3 ಲಕ್ಷ ಕೋಟಿ ರು.ಪರಿಹಾರ ನೀಡಿದ್ದರು. ಬಳಿಕ ಸ್ಯಾಂಜೆಜ್ ಜೊತೆ ನಂಟು ಹೊಂದಿದ್ದರು. ಸದ್ಯ, ಬೆಜೋಸ್ ಅವರ ಆಸ್ತಿ 20 ಲಕ್ಷ ಕೋಟಿ ರು.ನಷ್ಟಿದೆ. ಕೆಲ ತಿಂಗಳ ಹಿಂದೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಖರ್ಚು ಬರೋಬ್ಬರಿ 5000 ಕೋಟಿ ರು. ದಾಟಿತ್ತು.
BIG BOSS
ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಟೀ ಚೆಲ್ಲಿದ ಭವ್ಯಗೌಡ
Published
35 minutes agoon
23/12/2024By
NEWS DESK2ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಕನ್ನಡದ ಬಿಗ್ಬಾಸ್ ಸೀಸನ್ 11 ಯಶಸ್ವಿಯಾಗಿ ಸಾಗುತ್ತಿದ್ದು 14ನೇ ವಾರಕ್ಕೆ ಎಂಟ್ರಿಕೊಟ್ಟಿದೆ. ಬಿಗ್ಬಾಸ್ ಕೊನೆ ಹಂತಕ್ಕೆ ಬರುವುದರಿಂದ ಸ್ಪರ್ಧಿಗಳಲ್ಲಿ ಪೈಪೋಟಿ ಹೆಚ್ಚಾಗಿ ನಡೆದಿದೆ. ಒಬ್ಬರ ಮೇಲೆ ಒಬ್ಬರು ಕುದಿಯುತ್ತಿದ್ದು ತಮ್ಮನ್ನು ತಾವು ಎಚ್ಚರಿಸಿಕೊಳ್ಳಬೇಕಿದೆ. ಸೂಪರ್ ಸಂಡೇಯಲ್ಲಿ ಕಿಚ್ಚನಿಂದ ಭವ್ಯಗೌಡ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಶ್ವರ್ಯ ಮುಖಕ್ಕೆ ಭವ್ಯ ಟೀ ಚೆಲ್ಲಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.
ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದ್ದು ಕಿಚ್ಚು ಬಿದ್ದಂತೆ ಆಗಿದೆ. ನೀನು ಯಾವಳೇ ಎ.. ಅನ್ನೋಕೆ ಎಂದು ಚೈತ್ರಾ ಏಕವಚನದಲ್ಲೇ ಮಾತನಾಡಿದ್ದಾರೆ. ಬಾಯಿ ಮುಚ್ಚೆ ಸಾಕು ಎಂದು ಐಶ್ವರ್ಯ ತಿರುಗೇಟು ಕೊಟ್ಟಿದ್ದಾರೆ.
LATEST NEWS
ಏಕಾಏಕಿ ಗ್ಯಾ*ಸ್ ಸಿ*ಲಿಂಡರ್ ಸ್ಫೋ*ಟ; 9 ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂ*ಭೀರ
Published
1 hour agoon
23/12/2024ಮಂಗಳೂರು/ಹುಬ್ಬಳಿ: ಏಕಾಏಕಿ ಗ್ಯಾ*ಸ್ ಸಿಲಿಂಡರ್ ಸ್ಫೋ*ಟಗೊಂಡ ಪರಿಣಾಮ 9 ಅಯ್ಯಪ್ಪ ಮಾಲಾಧಾರಿಗಳು ಗಂ*ಭೀರ ಗಾ*ಯಗೊಂಡಿರುವ ಘಟನೆ ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ 9 ಮಾಲಾಧಾರಿಗಳ ಸ್ಥಿತಿ ಚಿಂ*ತಾಜನಕವಾಗಿದೆ. ನಿನ್ನೆ (ಡಿ.22) ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಅಯ್ಯಪ್ಪ ಸ್ವಾಮಿಗಳು ಮಲಗಿದ್ದ ವೇಳೆ ಸಿಲಿಂಡರ್ ಸ್ಫೋ*ಟಗೊಂಡಿದೆ. ಗ್ಯಾ*ಸ್ ಲೀ*ಕ್ ಆಗಿ ದೀಪದ ಬೆಂ*ಕಿ ತಗುಲಿ ಬ್ಲಾ*ಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ : ಗ್ಯಾಸ್ ಸ್ಪೋಟ; ತಾಯಿ, ಮೂವರು ಮಕ್ಕಳಿಗೆ ಗಂಭೀರ ಗಾಯ !
ಈ ಅ*ವಘಡದಲ್ಲಿ ರಾಜು ಹರ್ಲಾಪುರ, ಬಾಲಕ ವಿನಾಯಕ ಬಾರಕೇರ, ಪ್ರಕಾಶ ಬಾರಕೇರ, ಶಂಕರ ರಾಯನಗುಂಡಿ, ಮಂಜು ತೋರದ, ಸಂಜಯ ಸವದತ್ತಿ, ಅಂಜು ಸ್ವಾಮಿ, ಪ್ರವೀಣ, ತೇಜಸ್ ರೆಡ್ಡಿ ಗಾ*ಯಾಳುಗಳು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಗಾ*ಯಾಳುಗಳನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ -ಧಾರವಾಡ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
LATEST NEWS
ಫ್ಲೋರಿಡಾ ಕ್ರಿಸ್ಮಸ್ ಶೋನಲ್ಲಿ ಜನಸಂದಣಿಗೆ ಡ್ರೋನ್ ಡಿಕ್ಕಿ: ಹಲವರಿಗೆ ಗಾಯ
Published
1 hour agoon
23/12/2024By
NEWS DESK2ಫ್ಲೋರಿಡಾ: ಕ್ರಿಸ್ಮಸ್ ಪ್ರದರ್ಶನದಲ್ಲಿ ಡ್ರೋನ್ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದ ನಂತರ ಮತ್ತು ಹೆಚ್ಚಿನ ವೇಗದಲ್ಲಿ ಕೆಳಗಿರುವ ಜನಸಮೂಹಕ್ಕೆ ಡಿಕ್ಕಿ ಹೊಡೆದ ನಂತರ ಎವೆರಾಲ್ ಜನರು ಗಾಯಗೊಂಡಿದ್ದಾರೆ.
ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಒರ್ಲ್ಯಾಂಡೊ ಅಗ್ನಿಶಾಮಕ ಇಲಾಖೆ ನ್ಯೂಸ್ 6 ಗೆ ತಿಳಿಸಿದೆ. ಆದಾಗ್ಯೂ, ಇಬ್ಬರು ತಾಯಂದಿರು ತಮ್ಮ ಮಗ ರಾಕ್ಷಸ ಡ್ರೋನ್ನಿಂದ ಎದೆಗೆ ಹೊಡೆದ ನಂತರ “ಇಆರ್ನಲ್ಲಿ ತನ್ನ ಜೀವನಕ್ಕಾಗಿ ಹೋರಾಡುತ್ತಿದ್ದಾನೆ” ಎಂದು ಹೇಳಿದ್ದಾರೆ.
ಘಟನೆಯ ವೀಡಿಯೊವು ಅಪಘಾತವನ್ನು ತೋರಿಸುತ್ತದೆ, ಪ್ರೇಕ್ಷಕರು ಉಸಿರುಗಟ್ಟುತ್ತಾರೆ ಮತ್ತು ಭಯಭೀತರಾದ ಮಕ್ಕಳು ಕಿರುಚುತ್ತಾರೆ. ಒರ್ಲ್ಯಾಂಡೊ ನಗರದ ಸಹಭಾಗಿತ್ವದಲ್ಲಿ ಸ್ಕೈ ಎಲಿಮೆಂಟ್ಸ್ ಡ್ರೋನ್ಗಳು ನಡೆಸುತ್ತಿರುವ ಸಂಜೆ 6:30 ರ ಪ್ರದರ್ಶನದ ಸಮಯದಲ್ಲಿ ನೂರಾರು ಕೆಂಪು ಮತ್ತು ಹಸಿರು ಡ್ರೋನ್ಗಳು ರಾತ್ರಿ ಆಕಾಶವನ್ನು ಬೆಳಗಿಸಿದವು. ಆದಾಗ್ಯೂ, ಮಾನವರಹಿತ ವಿಮಾನಗಳ ಸಮೂಹಗಳು ಇದ್ದಕ್ಕಿದ್ದಂತೆ ಶ್ರೇಣಿಗಳನ್ನು ಮುರಿಯಲು ಪ್ರಾರಂಭಿಸಿದವು, ಯಾವುದೇ ಮುನ್ಸೂಚನೆಯಿಲ್ಲದೆ ಭೂಮಿಗೆ ಇಳಿಯಲು ಪ್ರಾರಂಭಿಸಿದವು.
ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಲಾದ ಒಂದು ವೀಡಿಯೊದಲ್ಲಿ ಡ್ರೋನ್ಗಳು ನೆಲದ ಕಡೆಗೆ ಚಲಿಸುತ್ತಿರುವುದನ್ನು ತೋರಿಸುತ್ತದೆ, ಏಕೆಂದರೆ ನೆಲದಿಂದ “ಓಹ್” ಎಂಬ ಕೋರಸ್ ಕೇಳಬಹುದು. “ಏನಾಗುತ್ತಿದೆ?” ಎಂದು ಮಗು ಕೇಳುತ್ತಿರುವುದು ಕೇಳಿಸುತ್ತದೆ.
ಅಪಘಾತದ ಹೊರತಾಗಿಯೂ ಪ್ರದರ್ಶನವು ಮುಂದುವರಿಯಿತು ಎಂದು ವರದಿಯಾಗಿದೆ. ಆದಾಗ್ಯೂ, ರಾತ್ರಿ 8 ಗಂಟೆಯ ಪ್ರದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಒರ್ಲ್ಯಾಂಡೊ ನಗರವು ಎಕ್ಸ್ ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದೆ.
LATEST NEWS
ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ಮನೆ ಬಿಟ್ಟು ತೆರಳಿದ ಕುಟುಂಬ
18ರ ಯುವಕನ ಜೊತೆ 51ರ ಮಹಿಳೆಯ ಲವ್; 4 ಮಕ್ಕಳನ್ನು ತೊರೆದು ಆಂಟಿ ಪರಾರಿ
ಬಂಟ್ವಾಳ: ಶಾಲಾ ವಾರ್ಷಿಕೋತ್ಸವಕ್ಕೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ; ಆರೋಪಿ ಅರೆಸ್ಟ್
ಚೆನ್ನೈನಲ್ಲಿ ರೋವರ್ಸ್ ರಾಷ್ಟ್ರೀಯ ಅಥ್ಲೇಟಿಕ್ಸ್ ಕೂಟ ; ಸಾಧನೆ ಮೆರೆದ ಮಾಸ್ಟರ್ ಅನ್ಶ್ ಕಿರಣ್
ತಿರುಪತಿ: 27 ಲಕ್ಷದ ಚಿನ್ನದ ಕಿರೀಟ ದೇಣಿಗೆ ನೀಡಿದವರು ಯಾರು ಗೊತ್ತಾ ?
ಅಧ್ಯಕ್ಷರಾಗುವ ಮನ್ನವೇ ಯೂರೋಪಿಯನ್ ಒಕ್ಕೂಟಕ್ಕೆ ಎಚ್ಚರಿಕೆ ನೀಡಿದ ಟ್ರಂಪ್
Trending
- LATEST NEWS5 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- BIG BOSS3 days ago
ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
- DAKSHINA KANNADA6 days ago
ಸಾವಿರ ಕಂಬದ ಬಸದಿಗೆ ಜಪಾನ್ನಿಂದ ಬಂದ ಅತಿಥಿಗಳು
- BIG BOSS7 days ago
ಅಂದುಕೊಂಡ ದಿನವೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಶಿಶಿರ್