ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ಯಿಯ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಸಮೀಪ ಇಂದು ಶಾಲೆಗೆ ತೆರಳುತ್ತಿದ್ದ ಮಕ್ಕಳನ್ನು ಕಿಡ್ನಾಪ್ ನಡೆಸಲು ಯತ್ನಿಸಿದ ಗಂಭೀರ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ತನಿಖೆ ನಡೆಸುತ್ತಿದ್ದಾರೆ.
ಇಬ್ಬರು ಮಕ್ಕಳು ತಮ್ಮ ಮನೆಯಿಂದ ಕುಟ್ಟಿಕಳ ಹಿ.ಪ್ರಾ.ಶಾಲೆಗೆ ಆಗಮಿಸುತ್ತಿದ್ದ ವೇಳೆ ಕಾರೊಂದಲ್ಲಿ ಬಂದ ವ್ಯಕ್ತಿ ಅಂಗಿಯನ್ನು ಎಳೆಯಲು ಯತ್ನಿಸಿದ್ದು, ಈ ವೇಳೆ ಮಕ್ಕಳ ಅಂಗಿಯ ಗುಬ್ಬಿಗಳು ಎದ್ದು ಹೋಗಿದೆ.
ಘಟನೆಯ ಕುರಿತು ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ್ದು, ಬಳಿಕ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಪೊಲೀಸರು ಘಟನೆಯ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮಕ್ಕಳ ಅಪಹರಣ ಪ್ರಕರಣ : ತನಿಖೆಗೆ ವಿಹೆಚ್‌ಪಿ-ಬಜರಂಗದಳ ಆಗ್ರಹ..
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ದ.ಕ.ಜಿ.ಪ.ಹಿ.ಪ್ರಾ ಶಾಲೆ ಕುಟ್ಟಿಕಳ ಶಾಲೆಯ ಮಕ್ಕಳನ್ನು ಅಪಹರಣ ಮಾಡಲು ವಿಫಲಯತ್ನ ಮಾಡಿದವರನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ವತಿಯಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮನವಿಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹಸಂಚಾಲಕ್ ಗುರುರಾಜ್ ಬಂಟ್ವಾಳ್, ವಿಶ್ವ ಹಿಂದೂ ಪರಿಷದ್ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಳ, ಬಜರಂಗದಳ ಪ್ರಖಂಡ ಸಹಸಂಚಾಲಕ್ ಸಂತೋಷ್ ಸರಪಾಡಿ, ಕಿರಣ್ ಕಾಪಿಕಾಡ್ ಉಪಸ್ಥಿತರಿದ್ದರು.