Home ಸಿನೆಮಾ ಮನರಂಜನಾ ಕ್ಷೇತ್ರಕ್ಕೂ ತನ್ನ ಕದಂಬಬಾಹು ಚಾಚಿದ ಕೊರೊನಾ ವೈರಸ್

ಮನರಂಜನಾ ಕ್ಷೇತ್ರಕ್ಕೂ ತನ್ನ ಕದಂಬಬಾಹು ಚಾಚಿದ ಕೊರೊನಾ ವೈರಸ್

ಮನರಂಜನಾ ಕ್ಷೇತ್ರಕ್ಕೂ ತನ್ನ ಕದಂಬಬಾಹು ಚಾಚಿದ ಕೊರೊನಾ ವೈರಸ್

ಡೆಡ್ಲಿ ಕೊರೊನಾ ವೈರಸ್ ಭೀತಿ ಮನುಷ್ಯನ ಮೇಲೆ ಪರಿಣಾಮ ಬೀರಿದ್ದಲ್ಲದೇ ವಿಶ್ವದ ಆರ್ಥಿಕತೆಯನ್ನು ಮಖಾಡೆ ಮಗಿಸಿಬಿಟ್ಟಿದೆ.

ದಿನದಿಂದ ದಿನಕ್ಕೆ ಷೇರು ಮಾರುಕಟ್ಟೆ ಪಾತಾಳದತ್ತ ಕುಸಿಯುತ್ತಿದೆ. ಇದೀಗ ಕೊರೊನಾ ವೈರಸ್ ನಿಂದ ಮನೊರಂಜನಾ ಉದ್ಯಮಕ್ಕೂ ಭಾರಿ ಪೆಟ್ಟು ಬೀಳುತ್ತಿದೆ.

ಕೊರೊನಾ ಭೀತಿಯಿಂದಾಗಿ ಮಾರ್ಚ್ 19 ರಿಂದ ಮಾರ್ಚ್‌ 31 ರ ವರೆಗೂ ಎಲ್ಲಾ ಟಿವಿ ಧಾರವಾಹಿಗಳು, ಸಿನಿಮಾ, ಡಾಕ್ಯುಮೆಂಟರಿಗಳ ಚಿತ್ರೀಕರಣವನ್ನು ರದ್ದು ಮಾಡಲಾಗಿದೆ.

ಐಎಂಪಿಪಿಎ, ಎಫ್‌ಡಬ್ಲುಐಸಿಇ, ಐಎಫ್‌ಟಿಡಿಎ, ಐಎಫ್‌ಟಿಪಿಸಿ, ಡಬ್ಲುಐಎಫ್‌ಪಿಎ (IMPPA, FWICE, IFTDA, IFTPC, WIFPA) ಸಂಘಗಳು ಮಾರ್ಚ್ 15ರಂದು ಒಟ್ಟಿಗೆ ಸಭೆ ನಡೆಸಿ ಈ ನಿರ್ಣಯಕ್ಕೆ ಬಂದಿವೆ ಎನ್ನಲಾಗಿದೆ.

ಸದ್ಯ ಚಿತ್ರತಂಡಗಳು ಚಿತ್ರೀಕರಣವನ್ನು ಬಂದ್ ಮಾಡಲು ಮೂರು ದಿನಗಳ ಅವಕಾಶವನ್ನು ಈ ಸಂಘಟನೆಗಳ ಒಕ್ಕೂಟ ನೀಡಿದ್ದು, ಎಲ್ಲಾ ನಿರ್ಮಾಪಕರು ಇನ್ನು ಮೂರು ದಿನಗಳ ಒಳಗಾಗಿ ಭಾರತ ಮತ್ತು ವಿದೇಶದಲ್ಲಿ ನಡೆಯುತ್ತಿರುವ ಚಿತ್ರೀಕರಣವನ್ನು ಬಂದ್ ಮಾಡಬೇಕು ಎಂದು ಸೂಚನೆ ನೀಡಿದೆ.

ಇನ್ನು ಸಿನಿಮಾ ಧಾರವಾಹಿಗಳಲ್ಲಿ ದಿನಗೂಲಿ ಲೆಕ್ಕದಲ್ಲಿ ಲಕ್ಷಾಂತರ ನೌಕರರು ಕೆಲಸ ಮಾಡುತ್ತಾರೆ.

ಜ್ಯೂನಿಯರ್ ಆರ್ಟಿಸ್ಟ್, ಸೆಟ್ ಕ್ಲೀನರ್, ಲೈಟ್ ಬಾಯ್, ಸಾಹಸ ಕಲಾವಿದರು, ಸ್ಟಂಟ್ ಕಲಾವಿದರು, ಡಾನ್ಸರ್ಸ್, ಮೇಕಪ್ ಆರ್ಟಿಸ್ಟ್, ವಾಹನ ಚಾಲಕರು, ಅಡುಗೆಯವರು ಹೀಗೆ ಹಲವು ಮಂದಿ ಸಿನಿಮಾ ಹಾಗೂ ಧಾರವಾಹಿಗಳಿಗೆ ಕೆಲಸ ಮಾಡುತ್ತಿರುತ್ತಾರೆ.

ಸದ್ಯ ಡೆಡ್ಲಿ ಕಿಲ್ಲರ್ ಕೊರೊನಾ ಇವರೆಲ್ಲರ ದಿನವಹಿ ನೌಕರಿಯನ್ನು ಕಿತ್ತುಕೊಂಡಿದೆ.

ಈಗಾಗಲೇ ಹಲವು ಸ್ಟಾರ್ ನಾಯಕರು ವಿದೇಶಗಳಲ್ಲಿದ್ದ ತಮ್ಮ ಚಿತ್ರೀಕರಣವನ್ನು ರದ್ದು ಮಾಡಿದ್ದಾರೆ.

ಆದರೆ ಹಲವರು ಸ್ವದೇಶದಲ್ಲಿ ಶೂಟಿಂಗ್‌ ನಲ್ಲಿ ತೊಡಗಿಕೊಂಡಿದ್ದಾರೆ.

ಆದರೆ ಮಾರ್ಚ್ 19 ರಿಂದ ಆ ಚಿತ್ರೀಕರಣಗಳೂ ಕೂಡ ಬಂದ್ ಆಗಲಿದೆ. ಈ ನಡುವೆ ಧಾರವಾಹಿ ಚಿತ್ರೀಕರಣ ಬಂದ್ ಆಗಲಿರುವುದು ಟಿವಿಗಳ ಮೇಲೂ ಭಾರಿ ಪ್ರಭಾವ ಬೀರಲಿದೆ.

- Advertisment -

RECENT NEWS

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ

ಕೇರಳ-ಕರ್ನಾಟಕ ಬಾರ್ಡರ್ ಸಮಸ್ಯೆ ಪರಿಹಾರಕ್ಕೆ ಪತ್ರದ ಮೂಲಕ ದೇವೇಗೌಡ ಮನವಿ ಮಂಗಳೂರು: ಸದ್ಯ ಕೊರೊನಾ ವೈರಸ್ ಹಿನ್ನಲೆ ಕೇರಳ ಹಾಗೂ ಕರ್ನಾಟಕ ಗಡಿ ಸಮಸ್ಯೆ ತಾರಕಕ್ಕೇರಿದ್ದು, ಇದೀಗ ಈ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ...

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ

ಎಂಅರ್ ಜಿ ಗ್ರೂಪ್ ನ‌ ಕೆ.ಪ್ರಕಾಶ್ ಶೆಟ್ಟಿಯರಿಂದ 1 ಕೋಟಿ.ರೂ.ವೆಚ್ಚದ ದಿನಸಿ ಕಿಟ್ ವಿತರಣೆ ಮಂಗಳೂರು: ಎಮ್ ರ್ ಜಿ ಗ್ರೂಪ್ ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರ ಉದಾರ ದಾನವಾಗಿ...

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..!

ಕೊರೊನಾ ವಿರುದ್ದದ ಸಮರಕ್ಕೆ ತನ್ನ ಪಾಕೆಟ್‌ ಮನಿಯನ್ನೇ ದೇಣಿಗೆ ನೀಡಿದ 5 ವರ್ಷದ ಬಾಲಕ..! ಮಂಗಳೂರು : ಇಂದು ಐದು ವರ್ಷದ ಬಾಲಕನೊಬ್ಬ ಸಿಎಂ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿ...

ದೆಹಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್

ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ಬೀದರ್: ಬೀದರ್‌ನಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ 11 ಮಂದಿಯೂ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಾಗಿದ್ದಾರೆ. ಬೀದರ್‌ನಿಂದ ದೆಹಲಿಗೆ ತೆರಳಿದ್ದ...