ಹೊಸದಿಲ್ಲಿ: ಕರ್ನಾಟಕದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಹಿಜಾಬ್ ವಿವಾದದಲ್ಲಿ ಭಯೋತ್ಪಾದನಾ ಸಂಘಟನೆ ಅಲ್ ಕೈದಾ ಮೂಗುತೂರಿಸಿದೆ. ಅಲ್ ಖೈದಾ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಪ್ರಚೋದನೆ ನೀಡಿದ್ದಾನೆ.
ಮಂಡ್ಯದ ಸರಕಾರಿ ಕಾಲೇಜಿನಲ್ಲಿ ಬುರ್ಖಾ ಧರಿಸಿ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಎದುರು ‘ಅಲ್ಲಾಹು ಅಕ್ಬರ್’ ಎಂದು ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್‌ಳನ್ನು ಜವಾಹಿರಿ ಶ್ಲಾಘಿಸಿದ್ದಾನೆ.
ಅಲ್ ಕೈದಾದ ಅಧಿಕೃತ ಶಬಾಬ್ ಮಾಧ್ಯಮದಲ್ಲಿ ಈ ಒಂಬತ್ತು ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಒಸಾಮಾ ಬಿನ್ ಲ್ಯಾಡೆನ್ ಹತ್ಯೆ ಬಳಿಕ ಅಲ್ ಕೈದಾ ನಾಯಕತ್ವ ವಹಿಸಿಕೊಂಡಿರುವ ಜವಾಹಿರಿ, ಕರ್ನಾಟಕದ ಹಿಜಾಬ್ ವಿವಾದ ಕುರಿತು ಮಾತನಾಡಿರುವುದು, ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.
ಸ್ವಾಭಾವಿಕ ಆರೋಗ್ಯ ಸಮಸ್ಯೆಯಿಂದ ಜವಾಹಿರಿ ಮೃತಪಟ್ಟಿದ್ದಾನೆ ಎಂದು 2020ರಲ್ಲಿ ಹೇಳಲಾಗಿತ್ತು. ಆದರೆ, ಕೆಲವು ತಿಂಗಳ ನಂತರ, ಆತನ ವಿಡಿಯೋವೊಂದು ಹೊರಬಂದಿತ್ತು. ಆತ ಅಫ್ಘಾನಿಸ್ತಾನದ ಯಾವುದೇ ಭಾಗದಲ್ಲಿ ಇದ್ದಾನೆ ಎಂದು ವರದಿಯಾಗಿತ್ತು.
ಮಂಗಳೂರು/ತಿರುವನಂತಪುರ : ಗೋಪಾನ್‌ಸ್ವಾಮಿಯದು ಸಹಜ ಸಾವು ಎಂದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ.
ಸ್ವಯಂ ಘೋಷಿತ ಗುರು ಗೋಪನ್ ಸ್ವಾಮಿಯ “ಸಮಾಧಿ” ವಿಚಾರವಾಗಿ ಕೇರಳ ಹೈಕೋರ್ಟ್ ಬುಧವಾರ ಕಾಂಕ್ರಿಟ್ ಚೇಂಬರ್ ಅನ್ನು ತೆರೆಯಲು ಅನುಮತಿ ನೀಡಿತ್ತು. ಇಂದು ಬೆಳಗ್ಗೆ ವಿವಾದಕ್ಕಿಡಾಗಿದ್ದ ಗೋಪಾನ್‌ಸ್ವಾಮಿಯವರ ಗೋರಿಯನ್ನು ಕೆಡವಿ ಪಾರ್ಥಿವ ಶರೀರವನ್ನು ಹೊರ ತೆಗೆಯಲಾಯಿತು.
ಕುಳಿತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಕುತ್ತಿಗೆಯವರೆಗೂ ಪೂಜಾ ಸಾಮಾಗ್ರಿಗಳಿಂದ ಮುಚ್ಚಲಾಗಿತ್ತು. ಬೆಳಗ್ಗೆ 7 ಗಂಟೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ಸಮಾಧಿ ಕೆಡವಲು ಆರಂಭವಾಯಿತು. ಒಂದೂವರೆ ಗಂಟೆಯಲ್ಲಿ ವಿಚಾರಣೆ ಮುಗಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಮೃತದೇಹದ ಪ್ರಾಥಮಿಕ ಪರೀಕ್ಷೆಯಲ್ಲಿ ಗೋಪಾನ್ ಸ್ವಾಮಿಯದು ಸಹಜ ಸಾವು ಎಂದು ವೈದ್ಯರು ಧೃಡಪಡಿಸಿದ್ದಾರೆ. ದೇಹದ ಮೇಲೆ ಯಾವುದೇ ಮಾರಣಾಂತಿಕ ಗಾಯಗಳಿಲ್ಲ ಎಂದು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ. ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದ್ದು, ವಿಧಿ ವಿಧಾನಗಳ ಪ್ರಕಾರ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಲಿದ್ದಾರೆ.
ಏನಿದು ಪ್ರಕರಣ ?
ತಿರುವನಂತಪುರ ಜಿಲ್ಲೆಯ ನೆಯ್ಯತ್ತಿಂಕರದಲ್ಲಿನ ಗೋಪನ್ ಕಳೆದ ಶುಕ್ರವಾರ ಕಾಣೆಯಾಗಿದ್ದಾರೆ ಎನ್ನಲಾಗಿತ್ತು. ಗೋಪನ್ ಸ್ವಾಮಿಗಳ ಮಕ್ಕಳಾದ ಸನಂದನ್ ಮತ್ತು ರಾಜಸೇನನ್ ಅವರು ಸ್ಥಳೀಯ ಸಮುದಾಯ ಅಥವಾ ಸಂಬಂಧಿಕರಿಗೆ ತಿಳಿಸದೆ ತಮ್ಮ ತಂದೆಯನ್ನು ನೆಯ್ಯಟಿಂಕರಾದ ದೇವಸ್ಥಾನದ ಬಳಿ ಸಮಾಧಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿತ್ತು.
ಈ ಬಗ್ಗೆ ಗೋಪನ್ ಅವರ ಮಕ್ಕಳು, ‘ತಮ್ಮ ತಂದೆ ಕುಳಿತ ಭಂಗಿಯಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾದರು ಮತ್ತು ಅವರ ಸಾವಿಗೆ ಯಾರಿಗೂ ಅವಕಾಶ ನೀಡದಂತೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ. ನಂತರ ಅವರು ತಮ್ಮ ತಂದೆಯ ಸಮಾಧಿಯ ಕುರಿತ ಪೋಸ್ಟರ್ ಗಳನ್ನು ಕುಟುಂಬದವರು ಹಾಕಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.
ಹಾಗಾಗಿ ಕಂದಾಯ ಅಧಿಕಾರಿಯ ಆದೇಶ ಪತ್ರದೊಂದಿಗೆ ಪೊಲೀಸರು ತಪಾಸಣೆಗೆ ಮುಂದದಾಗ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿತ್ತು. ಜತೆಗೆ ಕೆಲವು ಹಿಂದೂ ಸಂಘಟನೆಗೆಳೂ ಕುಟುಂಬದ ಪರ ನಿಂತಿದ್ದವು.
ಜತೆಗೆ ಪೊಲೀಸರು ತಪಾಸಣೆಗೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಸಮಾಧಿ ತೆರೆಯಲು ಪೊಲೀಸರಿಗೆ ಅನುಮತಿ ನೀಡಿತ್ತು.
ಮಂಗಳೂರು/ಬೆಂಗಳೂರು: 25 ವರ್ಷದ ಯುವತಿಯೊಬ್ಬಳು ದೈ*ಹಿಕ ಸಂಪರ್ಕಕ್ಕೆ ಪೀಡಿಸಿದಕ್ಕೆ ಪೆಟ್ರೋಲ್ ಸುರಿದು, ಬೆಂ*ಕಿ ಹಚ್ಚಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಆರೋಪಿ ಸಂಬಂಧದಲ್ಲಿ ಯುವತಿಗೆ ಮಾವನಾಗಬೇಕು. ಮೊದಲು ಇಬ್ಬರು ಚೆನ್ನಾಗಿದ್ದು, ಟ್ರಿಪ್ ಹೋಗುತ್ತಿದ್ದರು. ಇತ್ತೀಚೆಗೆ ಆರೋಪಿ ದೈ*ಹಿಕ ಸಂಪರ್ಕಕ್ಕೆ ಪೀಡಿಸುತ್ತಿದ್ದ. ನಗರದ ಹೋಟೆಲ್ ವೊಂದರಲ್ಲಿ ರೂಮ್ ಬುಕ್ ಮಾಡಿದ್ದ ಯುವತಿಯನ್ನು ಹೋಟೆಲ್ ರೂಮ್ ಗೆ ಬರುವಂತೆ ಕರೆದಿದ್ದಾನೆ. ಬರದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಯುವತಿ ಪೆ*ಟ್ರೋಲ್ ಸುರಿ*ದುಕೊಂಡು ಬೆಂ*ಕಿ ಹಚ್ಚಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
ಮಂಗಳೂರು/ಮುಂಬೈ : ಸೈಫ್ ಅಲಿ ಖಾನ್ ಮೇಲೆ ನಡೆದ ಚೂ*ರಿ ಇ*ರಿತ ಪ್ರಕರಣ ಇಡೀ ಬಾಲಿವುಡನ್ನೇ ಬೆಚ್ಚಿ ಬೀಳಿಸಿದೆ. ಆರು ಕಡೆಗಳಿಗೆ ಚೂ*ರಿ ಇರಿ*ತಕ್ಕೊಳಗಾಗಿ ತೀ*ವ್ರ ರ*ಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾ*ಣಾಪಾಯದಿಂದ ಅವರು ಪಾರಾಗಿದ್ದಾರೆ. ಘಟನೆ ಸಂಬಂಧ ಓರ್ವನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ.
ಆಟೋದಲ್ಲಿ ಆಸ್ಪತ್ರೆಗೆ ಹೋದ್ರಾ ಸೈಫ್?
ಸದ್ಯ ಈ ಪ್ರಕರಣ ಹಲವು ಅನುಮಾನ ಹುಟ್ಟು ಹಾಕಿದೆ. ಏನೇನೋ ವದಂತಿಗಳು ಹರಿದಾಡುತ್ತಿವೆ. ಈ ನಡುವೆ ಗಮನಕ್ಕೆ ಬಂದ ಮತ್ತೊಂದು ವಿಚಾರವಂದ್ರೆ ಅದು ಸೈಫ್ ಆಸ್ಪತ್ರೆ ಸೇರಿದ್ದು ಹೇಗೆ ಎಂಬುದು.
ಹೇಳಿ ಕೇಳಿ ಸಿನಿಮಾ ನಟ. ಅದರಲ್ಲೂ ಶ್ರೀಮಂತ ಮನೆತನದ ನಟ. ಭವ್ಯವಾದ ಮನೆ, ಆಳು ಕಾಳು ಇದ್ದಾರೆ. ಸಿನಿಮಾ ಮಂದಿಗೆ ಕಾರಿನ ಕ್ರೇಜ್ ಇದ್ದೇ ಇದೆ. ಸೈಫ್ ಬಳಿಯೂ ಕೋಟಿಗಟ್ಟಲೆ ಬೆಲೆ ಬಾಳುವ ಕಾರುಗಳಿವೆ. ಆದ್ರೆ, ಹ*ಲ್ಲೆಗೊಳಗಾದ ವೇಳೆ ಅವರು ಆಟೋದಲ್ಲಿ ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.
ಸದ್ಯ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆಟೋ ಹಾಗೂ ಅದರ ಪಕ್ಕದಲ್ಲಿ ಕರೀನಾ ಕಪೂರ್ ನಿಂತಿರೋದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ದಾ*ಳಿಗೊಳಗಾದಾಗ ಕಾರು ರೆಡಿ ಇರಲಿಲ್ಲ. ತೀವ್ರ ರ*ಕ್ತಸ್ರಾವದಿಂದ ಪರದಾಡುತ್ತಿದ್ದಾಗ ಆಟೋ ಹಿಡಿದು ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.
ಸೈಫ್ ಹಿರಿಯ ಪುತ್ರ ಇಬ್ರಾಹಿಂ ಸೈಫ್ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದು, ಕಾರಿನಲ್ಲಿ ಹೋದ್ರೆ ಹೆಚ್ಚು ಸಮಯವಾಗುತ್ತೆ ಎಂಬ ಕಾರಣಕ್ಕೆ ಈ ನಿರ್ಧಾರ ತಳೆಯಲಾಗಿತ್ತು ಎಂದೂ ಹೇಳಲಾಗಿದೆ.
ಸೈಫ್ ಔಟ್ ಆಫ್ ಡೇಂ*ಜರ್ :
ಸದ್ಯ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಚೇತರಿಸಿಕೊಳ್ಳುತ್ತಿದ್ದಾರೆ. ಖಾನ್ ಅವರ ದೇಹಕ್ಕೆ 6 ಬಾರಿ ಇರಿಯಲಾಗಿದೆ. ಎರಡು ಕಡೆ ಆಳವಾದ ಗಾ*ಯಗಳಾಗಿದ್ದು, ತುರ್ತು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಜೀ*ವಕ್ಕೆ ಯಾವುದೇ ಅ*ಪಾಯವಿಲ್ಲ.
ಬೆನ್ನು ಮೂಳೆಯಿಂದ ಚಾ*ಕುವಿನ ತುದಿಯನ್ನು ಹೊರತೆಗೆಯಲಾಗಿದೆ. ಖಾನ್ ಆರೋಗ್ಯ ಸ್ಥಿರವಾಗಿದೆ. ನಾಳೆ ಬೆಳಿಗ್ಗೆ ಐಸಿಯುವಿನಿಂದ ಹೊರತರುತ್ತೇವೆ ಎಂದು ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಮಾಹಿತಿ ನೀಡಿದ್ದಾರೆ.