Connect with us

DAKSHINA KANNADA

ವಿಶ್ವ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌: ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟ ‘ತುಳುವೆದಿ’

Published

on

ಕಾರ್ಕಳ: ಖಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಪ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ಲಭಿಸಿದೆ.


ಬೆಂಚ್ ಪ್ರೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಕ್ಷತಾ ಪೂಜಾರಿ ಬೆಳ್ಳಿ ಪದಕ ಪಡೆದಿದ್ದಾರೆ.

ಅಕ್ಷತಾ ಪೂಜಾರಿ ಪವರ್ ಲಿಫ್ಟಿಂಗ್‌ನಲ್ಲಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತಾರು ಪದಕಗಳನ್ನು ಬಾಚಿಕೊಂಡಿದ್ದಾರೆ.

2014 ನೇ ಸಾಲಿನ ಏಕಲವ್ಯ ಪ್ರಶಸ್ತಿ ಅಕ್ಷತಾ ಪೂಜಾರಿಗೆ ಒಲಿದಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿಯ ಪದಕ ಲಭಿಸಿರುವುದು ದೇಶ ಹೆಮ್ಮೆ ಪಡುವ ವಿಚಾರ.

DAKSHINA KANNADA

ಮಂಜನಾಡಿ ಗ್ಯಾಸ್ ಸ್ಪೋ*ಟ ಪ್ರಕರಣ : ಮತ್ತೋರ್ವ ಬಾಲಕಿ ಸಾ*ವು, ಕುಟುಂಬಕ್ಕೆ ಯು.ಟಿ.ಖಾದರ್ ಸಾಂತ್ವನ

Published

on

ಉಳ್ಳಾಲ : ಡಿಸೆಂಬರ್ 8 ರಂದು ಉಳ್ಳಾಲದ ಮಂಜನಾಡಿಯಲ್ಲಿ ನಡೆದಿದ್ದ ಗ್ಯಾಸ್ ಸ್ಫೋ*ಟ ಪ್ರಕರಣದಲ್ಲಿ ಸಾ*ವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ರಾತ್ರಿ ಮನೆಯವರು ಮಲಗಿದ್ದ ವೇಳೆ ನಡೆದಿದ್ದ ಗ್ಯಾಸ್ ಸ್ಪೋ*ಟದಿಂದ ತಾಯಿ ಹಾಗೂ ಮೂವರು ಮಕ್ಕಳು ಗಂಭೀ*ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 13 ರಂದು ತಾಯಿ ಖುಬ್ರಾ ಮೃ*ತಪಟ್ಟಿದ್ದರೆ, ಡಿಸೆಂಬರ್ 26 ರಂದು ಹಿರಿಯ ಪುತ್ರಿ ಝುಲೇಖ ಮೆಹದಿಯಾ ಇಹಲೋಕ ತ್ಯಜಿಸಿದ್ದರು.

ಇದೀಗ ಕೊನೆಯ ಪುತ್ರಿ 9 ವರ್ಷ ಪ್ರಾಯದ ಫಾತಿಮತ್ ಮಾಯಿಝ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ.  ಇನ್ನೊಂದು ಹೆಣ್ಣು ಮಗು ಮಝಿಯಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಯು.ಟಿ.ಖಾದರ್ ಸಾಂತ್ವನ:

ಗಾ*ಯಾಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ ನೀಡಿದ್ದಾರೆ. ಮನೆಯಲ್ಲಿ ಇದ್ದ ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆ ಆಗಿ ಈ ಸ್ಪೋ*ಟ ಸಂಭಿಸಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಗ್ಯಾಸ್ ಏಜನ್ಸಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಬುಮ್ರಾ !

ಘಟನೆ ನಡೆದ ಮನೆಗೆ ಸ್ಪೀಕರ್ ಖಾದರ್  ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯ ಪರಿಹಾರದ ವಿಚಾರವಾಗಿ ಯಾರೂ  ರಾಜಕೀಯ ಮಾಡಬಾರದು ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ . ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ ಎಂದು ಖಾದರ್ ಹೇಳಿದ್ದಾರೆ.

 

Continue Reading

DAKSHINA KANNADA

ಬೈಕ್‌ಗೆ ಡಿ*ಕ್ಕಿ ಹೊಡೆದು ನಿಲ್ಲಿಸದೆ ತೆರಳಿದ ಸಿಟಿ ಬಸ್; ತಡೆದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

Published

on

ಉಳ್ಳಾಲ : ದಂಪತಿ ಹಾಗೂ ಮಗುವಿದ್ದ ಬೈಕ್‌ಗೆ ಅಪಘಾ*ತ ನಡೆಸಿ ನಿಲ್ಲಿಸದೆ ತೆರಳುತ್ತಿದ್ದ  ಸಿಟಿ ಬಸ್ಸನ್ನು ಸಾರ್ವಜನಿಕರು ತಡೆದು ಸಂಚಾರಿ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ದೇರಳಕಟ್ಟೆಯಲ್ಲಿ ನಿನ್ನೆ(ಡಿ.28) ನಡೆದಿದೆ.

ನೌಷದ್(38), ಸಹಾಲಾ(26) ಹಾಗೂ ಅಲೀಮಾ (3) ಗಾಯಗೊಂಡವರು. ದೇರಳಕಟ್ಟೆಯಿಂದ ಕೊಣಾಜೆ ಕಡೆಗೆ ತೆರಳುತ್ತಿದ್ದ ಸಿಟಿ ಬಸ್ ಅದೇ ಮಾರ್ಗವಾಗಿ ತೆರಳುತ್ತಿದ್ದ ಬೈಕ್ ನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾ*ತವಾಗಿದೆ.  ಪರಿಣಾಮ ಬೈಕ್ ನೆಲಕ್ಕುರುಳಿ ದಂಪತಿ ಮತ್ತು ಮಗು ಗಾ*ಯಗೊಂಡಿದ್ದಾರೆ.

ಇದನ್ನೂ ಓದಿ : 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಬುಮ್ರಾ !

ಘಟನೆ ಬಗ್ಗೆ ಚಾಲಕನ ಗಮನಕ್ಕೆ ಬಾರದೇ ಆತ ಬಸ್ಸ್ ನಿಲ್ಲಿಸದೆ ಸಾಗಿದ್ದಾನೆ.  ಸ್ಥಳೀಯರು ಗಮನಿಸಿ ಬಸ್ಸನ್ನು ದೇರಳಕಟ್ಟೆ ಮಸೀದಿ ಸಮೀಪ ಅಡ್ಡಗಟ್ಟಿ ಚಾಲಕ ಹಾಗೂ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ವಶಕ್ಕೆ ಬಸ್ಸನ್ನು ಕೊಟ್ಟಿದ್ದಾರೆ.

 

Continue Reading

DAKSHINA KANNADA

ಸಿಲಿಂಡರ್ ಸ್ಪೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾ*ವು

Published

on

ಸುರತ್ಕಲ್: ಇಲ್ಲಿನ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಡಿ. 18ರಂದು ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು.

ಡಿಸೆಂಬರ್ 26ರಂದು ಮನೆ ಯಜಮಾನ ವಾಮನ ಅವರ ಸಹೋದರಿ ಪುಷ್ಪಾ ಮೃ*ತಪಟ್ಟರೆ, ಶುಕ್ರವಾರ ಪತ್ನಿ ವಸಂತಿ ಸಾ*ವನ್ನಪ್ಪಿದ್ದಾರೆ. ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ !

ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಹಿಳೆಯರು ಮೃ*ತಪಟ್ಟಿದ್ದಾರೆ.

 

Continue Reading

LATEST NEWS

Trending

Exit mobile version