Connect with us

    LATEST NEWS

    ಭಿಕ್ಷುಕನ ಕೈಯಲ್ಲಿ ಐಫೋನ್​ 16 ಪ್ರೋ ಮ್ಯಾಕ್ಸ್! ಬೆಚ್ಚಿ ಬಿದ್ದ ಜನರು..!

    Published

    on

    ಐಫೋನ್ 16 ಖರೀದಿ ಮಾಡಲು ಏನೆಲ್ಲಾ ಕಷ್ಟ ಪಡಬೇಕು. ಎಷ್ಟೆಲ್ಲಾ ದುಡಿಯಬೇಕು ಎಂದು ಚಿಂತಿಸುವ ಹೊತ್ತಿನಲ್ಲಿಯೇ ಅಜ್ಮಿರ್​ನಲ್ಲಿ ಒಬ್ಬ ಭಿಕ್ಷಕ ಎಲ್ಲರನ್ನು ಕಕ್ಕಾಬಿಕ್ಕಿಯಾಗಿ ಮಾಡುವಂತೆ ಮಾಡಿದ್ದಾನೆ. ಕೈಯಲ್ಲಿ ಐಫೋನ್ 16 ಮ್ಯಾಕ್ಸ್ ಪ್ರೋ ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿದ್ದಾನೆ. ಇದನ್ನು ಕಂಡ ಇಂಟರ್​ನೆಟ್ ಜಗತ್ತು ಅಕ್ಷರಶಃ ಬೆಚ್ಚಿ ಬಿದ್ದಿದೆ. ಅಲ್ರಯ್ಯಾ. ಒಂದು ಐಫೋನ್16 ಪ್ರೋ ಮ್ಯಾಕ್ಸ್​ ಪಡೆಯಲು ನಾವು ಹಲವಾರು ತಿಂಗಳು ದುಡಿಯಬೇಕು. ಈ ಭಿಕ್ಷುಕ ಇಷ್ಟೊಂದು ಸಲೀಸಾಗಿ ಖರೀದಿ ಮಾಡಿ ಅದನ್ನು ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿದ್ದಾನಲ್ಲ ಎಂದು ಬೆಕ್ಕಸ ಬೆರಗಾಗಿದ್ದಾರೆ.

    ಹೀಗೆ ಐಫೋನ್ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದವನ ಹೆಸರು ಶೇಖ್ ಎಂದು ಗುರುತಿಸಲಾಗಿದೆ. ಈತ ಐಫೋನ್ 16 ಪ್ರೋ ಮ್ಯಾಕ್ಸ್ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶೇಷ ಚೇತನ ಆಗಿರುವ ಈ ಭಿಕ್ಷುಕನನ್ನು ಅನೇಕರ ಸಂದರ್ಶನ ಮಾಡಿದ್ದಾರೆ ತನ್ನ ಸಂದರ್ಶನದಲ್ಲಿ ನಾನು 1.70 ಲಕ್ಷ ರೂಪಾಯಿ ಕ್ಯಾಶ್ ಕೊಟ್ಟು ಐಫೋನ್ ಸ್ಟೋರ್​ನಲ್ಲಿ ಈ ಐಫೋನ್​ 16 ಮ್ಯಾಕ್ಸ್ ಪ್ರೋ ಖರೀದಿಸಿದ್ದೀನಿ ಎಂದು ಹೇಳಿದ್ದಾನೆ.

    ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಸಂದರ್ಶಕ ಕೇಳಿದಕ್ಕೆ, ಭಿಕ್ಷೆ ಬೇಡಿದ್ದರಿಂದಲೇ ಬಂದಿದ್ದು ಎಂದು ಹೇಳಿದ್ದಾನೆ. ಇಂಟರ್​ನೆಟ್​ನಲ್ಲಿ ಇದನ್ನು ನೋಡಿದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಲಕ್ಷಾಂತರ ಜನರು ಈ ಒಂದು ಫೋನ್ ಖರೀದಿ ಮಾಡಲು ಅನೇಕ ರೀತಿಯ ಶ್ರಮ ಪಡುತ್ತಾರೆ. ಸಿಕ್ಕಾಪಟ್ಟೆ ಓದಿ ಒಳ್ಳೆ ಜಾಬ್​ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಒಳ್ಳೆಯ ಸ್ಯಾಲರಿಗಾಗಿ ಕಂಪನಿಯಿಂದ ಕಂಪನಿ ಚೆಂಜ್ ಮಾಡುತ್ತಾರೆ. ಕಾರಣ ಈ ಒಂದು ಕನಸಿಗಾಗಿ. ಆದ್ರೆ ಈ ಬೆಗ್ಗರ್ ಇದ್ಯಾವುದನ್ನು ಮಾಡದೇ ಲಕ್ಷಾಂತರ ಜನರ ಕನಸನ್ನು ಕೈಯಲ್ಲಿ ಹಿಡಿದುಕೊಂಡು ಅಲೆದಾಡುತ್ತಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಇನ್ನು ಕೆಲವರು ಇದರಂತಹ ಅದ್ಭುತ ಬ್ಯುಸಿನೆಸ್ ಇನ್ನೊಂದು ಇಲ್ಲ. ಹೂಡಿಕೆ ಇಲ್ಲಾ, ಕೆಲಸ ಮಾಡಬೇಕು ಎಂಬ ಧಾವಂತವಿಲ್ಲ, ಸೆಕ್ಯೂರಿಟಿಯ ಬಗ್ಗೆ ಚಿಂತೆಯಿಲ್ಲ.ಒತ್ತಡವಿಲ್ಲ. ಜೀವನ ಪೂರ್ತಿ ಮಜವೋ ಮಜ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮಧ್ಯವರ್ಗದ ಜನರ ಬದುಕಿಗಿಂತ ಭಿಕ್ಷಕರ ಬದುಕೇ ಸಾವಿರ ಪಾಲು ಮೇಲು ಎಂದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಆಟೋ ಚಾಲಕನ ಮಗ ಇಂದು ಟೀಂ ಇಂಡಿಯಾ ಸ್ಟಾರ್; 13 ಕೋಟಿ ರೂಪಾಯಿ ಮನೆಯ ಒಡೆಯ

    Published

    on

    ಮಂಗಳೂರು/ಹೈದರಾಬಾದ್ : ಸಾಮಾನ್ಯವಾಗಿ ಶಾಲೆ ಬಿಟ್ಟ ನಂತರ ಮಕ್ಕಳು ಕ್ರಿಕೆಟ್ ಆಡಲು ಹೋಗುವಂತೆ ಆತನೂ ಸಹ ಶಾಲೆಯಿಂದ ಬಂದು ತಕ್ಷಣವೇ ಕ್ರಿಕೆಟ್ ಆಡಲು ಹೋಗುತ್ತಿದ್ದ.

    ತನ್ನ ಹಿರಿಯ ಮಗನಂತೆ ಇವನೂ ಸಹ ಓದಿನಲ್ಲಿ ಮುಂದಿರಬೇಕು ಎಂದು ಇಚ್ಛಿಸುತ್ತಿದ್ದ ತಾಯಿಯ ಕೋಪಕ್ಕೆ ಗುರಿಯಾದ ಘಟನೆಗಳು ಹಲವು. ಹೇಗೆ ತಾಯಿಯ ಕೋಪಕ್ಕೆ ಗುರಿಯಾದ ಹುಡುಗ ಈಗ ಪೋಷಕರ ಕನಸನ್ನು ನನಸು ಮಾಡಿದ್ದಾನೆ.

    ಆತನ ಹೆಸರೇ ಮೊಹಮ್ಮದ್ ಸಿರಾಜ್. ಟೀಂ ಇಂಡಿಯಾದ ಸ್ಟಾರ್ ವೇಗಿ ಸಿರಾಜ್ ಬಡತನದಿಂದಲೇ ಬೆಳೆದು ಬಂದವರು. ಇವರ ತಂದೆ ಆಟೋ ಓಡಿಸುತ್ತಿದ್ದರು. ಟೆನ್ನಿಸ್ ಬಾಲ್‌ನಲ್ಲಿಯೇ ಕ್ರಿಕೆಟ್ ಆಡುತ್ತಿದ್ದ ಸಿರಾಜ್ ಇನ್ನಷ್ಟೇ ಸರಿಯಾದ ಕ್ರಿಕೆಟ್‌ಗೆ ಹೊಂದಿಕೊಳ್ಳಬೇಕಿತ್ತು. ಅಷ್ಟರಲ್ಲೇ ಆತನಿಗೆ 2 ದಿನಗಳ ಕಾಲ ನಡೆಯುವ ಪಂದ್ಯದಲ್ಲಿ ಚಾರ್ಮಿನರ್ ಕ್ರಿಕೆಟ್ ಕ್ಲಬ್‌ಗೆ ಆಡುವ ಅವಕಾಶ ಒದಗಿ ಬಂದಿತ್ತು. ಆದರೆ ಟೂರ್ನಮೆಂಟ್‌ನಲ್ಲಿ ಆಡಲು ಸಿರಾಜ್ ಬಳಿ ಸರಿಯಾದ ಶೂ ಸಹ ಇರಲಿಲ್ಲ. ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಚಾರ್ಮಿನಾರ್ ಕ್ರಿಕೆಟ್ ಕ್ಲಬ್‌ನಲ್ಲಿ ಆಡಿದ ನಂತರ ಸಿರಾಜ್ ಹಿಂತಿರುಗಿ ನೋಡಲಿಲ್ಲ.

    ರಣಜಿಯಲ್ಲಿ ಆಡಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಿರಾಜ್, 41 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 3ನೇ ಆಟಗಾರನಾಗಿ ಗುರುತಿಸಿಕೊಂಡರು.
    ನಂತರ ಇರಾನಿ ಟ್ರೋಫಿಯಲ್ಲೂ ಆಯ್ಕೆಯಾದ ಸಿರಾಜ್ ಸಿರಾಜ್‌ 2017ರಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತನ್ನ ತವರು ರಾಜ್ಯ ಆಂಧ್ರಪ್ರದೇಶದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 2.6 ಕೋಟಿ ರೂ ಗೆ ಮಾರಾಟವಾದರು.

    ಐಪಿಎಲ್‌ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದ ನಂತರ ಸಿರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ, “ಐಪಿಎಲ್ ಹರಾಜಿನಿಂದ ಪಡೆದ ಹಣದಿಂದ ಒಂದಷ್ಟು ಸಾಲ ತೀರಿಸಬೇಕಿದೆ. ನಂತರ ಪೋಷಕರಿಗೆ ಮನೆ ಖರೀದಿಸಲು ಹಣ ನೀಡುತ್ತೇನೆ, ಬಹುಶಃ ಇನ್ನು ಮುಂದೆ ನನ್ನ ತಂದೆ ಆಟೋ ರಿಕ್ಷಾ ಚಾಲಕರಾಗಿರುವ ಅಗತ್ಯವಿಲ್ಲ” ಎಂದು ಹೇಳಿದ್ದರು.

    ಇದನ್ನೂ ಓದಿ: ಚಾಹಲ್ ದಾಖಲೆ ಮುರಿದು ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್

    ನಂತರ ಟೀಮ್ ಇಂಡಿಯಾಗೆ ಆಯ್ಕೆಯಾದ ಸಿರಾಜ್, ಸ್ಟಾರ್ ವೇಗಿಯಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಐಸಿಸಿ ಟ್ರೋಫಿ ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ.
    ಸಿರಾಜ್ 36 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 100 ವಿಕೆಟ್ ಪಡೆದಿದ್ದಾರೆ. 44 ಏಕದಿನ ಪಂದ್ಯಗಳನ್ನು ಆಡಿದ್ದು, 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 16 ಟಿ20 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

    ಸಿರಾಜ್ ಅವರ13 ಕೋಟಿ ರೂಪಾಯಿ ಮನೆ
    2023 ರಲ್ಲಿ ನಿರ್ಮಿಸಲಾದ ಸಿರಾಜ್ ಅವರ ಐಷಾರಾಮಿ ಮನೆಯ ಮೌಲ್ಯ ಸುಮಾರು 13 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸಿರಾಜ್ ಅವರ ಐಷಾರಾಮಿ ಮನೆ ಹೈದರಾಬಾದ್‌ನ ಫಿಲಂ ಸಿಟಿಯ ಜೂಬಿಲಿ ಹಿಲ್ಸ್‌ನಲ್ಲಿದೆ. ಸಿರಾಜ್ ತಮ್ಮ ಕನಸಿನ ಮನೆಯಲ್ಲಿ ತಾವು ಗೆದ್ದ ಟ್ರೋಫಿಗಳನ್ನು ಪ್ರದರ್ಶಿಸಲು ಪ್ರತ್ಯೇಕ ಗೋಡೆಯನ್ನು ಹೊಂದಿದ್ದಾರೆ.

    ಸಿರಾಜ್ ಆದಾಯದ ಮೂಲಗಳು
    ಮೊಹಮ್ಮದ್ ಸಿರಾಜ್‌ರವರ ಪ್ರಮುಖ ಆದಾಯದ ಮೂಲಗಳಲ್ಲಿ ಬಿಸಿಸಿಐ ಒಪ್ಪಂದಗಳು, ಐಪಿಎಲ್ ಸಂಬಳ, ಪಂದ್ಯ ಶುಲ್ಕ ಮತ್ತು ಜಾಹೀರಾತು ಒಪ್ಪಂದಗಳು ಸೇರಿವೆ.

     

    Continue Reading

    DAKSHINA KANNADA

    ಮಂಗಳೂರು: ಮಸಾಜ್ ಸೆಂಟರ್‌ನಲ್ಲಿ ದಾಂಧಲೆ ಪ್ರಕರಣ: ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರ ಬಂಧನ

    Published

    on

    ಮಂಗಳೂರು: ನಗರದ ಬಿಜೈಯ ಮಸಾಜ್ ಸೆಂಟರ್‌ನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿ ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.

    ನಗರ ಹೊರವಲಯದ ಕುಡುಪು ಬಳಿಯ ಮನೆಯಿಂದ ಪ್ರಸಾದ್ ಅತ್ತಾವರನನ್ನು ಬಂಧಿಸಲಾಗಿದೆ.

    ನಗರದ ಮಸಾಜ್ ಸೆಂಟರ್ ಮೇಲೆ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪ್ರಸಾದ್ ಅತ್ತವಾರ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ನುಗ್ಗಿರುವುದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿರುವುದು ವರದಿಯಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    Continue Reading

    DAKSHINA KANNADA

    ಮಸಾಜ್ ಸೆಂಟರ್‌ಗೆ ಹಿಂದೂ ಕಾರ್ಯಕರ್ತರ ಅನಿರೀಕ್ಷಿತ ದಾಳಿ; ಪೀಠೋಪಕರಣ ಧ್ವಂಸ ಮಾಡಿ ಅಟ್ಟಹಾಸ

    Published

    on

    ಮಂಗಳೂರು : ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಆರೋಪದಲ್ಲಿ ದಾಳಿ ನಡೆಸಿ ಪಿಠೋಪಕರಣ ಧ್ವಂಸಗೊಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಹಲವು ಸಮಯದಿಂದ ಸೈಲೆಂಟ್ ಆಗಿದ್ದ ಪ್ರಸಾದ್ ಅತ್ತಾವರ ನೇತೃತ್ವದ ರಾಮ ಸೇನೆಯ ಕಾರ್ಯಕರ್ತರು ಈ ಪುಂಡಾಟಿಕೆ ನಡೆಸಿದ್ದಾರೆ. ನಗರದ ಬಿಜೈ ಬಳಿ ಕಾರ್ಯಾಚರಿಸ್ತಾ ಇದ್ದ ಕಲರ್ಸ್ ಎಂಬ ಯುನಿಸೆಕ್ಸ್ ಸೆಲೂನ್ಗೆ ಈ ದಾಳಿ ನಡೆಸಲಾಗಿದೆ. ಪಾರ್ಲರ್ ನಲ್ಲಿ ನಾಲ್ವರು ಯುವತಿಯರಿದ್ದು ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಯುವತಿಯರು ಅಳುತ್ತಾ ಕೈ ಮುಗಿದರೂ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ. ಪಾರ್ಲರ್ ದಾಳಿಯ ವೇಳೆ ಕಾಂಡೋಮ್ ಸಿಕ್ಕಿದ್ದು ಹಾಗಾಗಿ ಇಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

    ಹಲವು ವರ್ಷಗಳ ಹಿಂದೆ ಶ್ರೀರಾಮ ಸೇನೆಯ ಪಬ್ ದಾಳಿ , ಜಾಗರಣ ವೇದಿಕೆಯ ಹೋಂ ಸ್ಟೇ ದಾಳಿಯ ಮಾದರಿಯಲ್ಲೇ ಈ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದು ಅಲ್ಲದೆ ಪಾರ್ಲರ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೀಠೋಪಕರಣಗಳನ್ನು ಹಾನಿ ಮಾಡಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉಡುಪಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಗೃಹ ಸಚಿವರು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವ್ಯಾಪಾರ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಇದ್ದು, ಅನೈತಿಕ ಚಟುವಟಿಕೆಯ ಅನುಮಾನ ಇದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು . ಯಾರೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    Continue Reading

    LATEST NEWS

    Trending