Tuesday, October 19, 2021

ಟಾಟಾ ತೆಕ್ಕೆಗೆ ಬಿದ್ದದ್ದೇ ತಡ ಪ್ರತಿಭಟನೆಯ ಎಚ್ಚರಿಕೆ ನೀಡಿದ ಏರ್‌ಇಂಡಿಯಾ ಸಿಬ್ಬಂದಿ

ಹೊಸದಿಲ್ಲಿ: ನಷ್ಟದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಟಾಟಾ ಸಮೂಹದ ತೆಕ್ಕೆಗೆ ಸೇರ್ಪಡೆಯಾದ ಬಳಿಕ,

ಏರ್ ಇಂಡಿಯಾ ನಿರ್ವಹಣೆಯ ಸಂಪೂರ್ಣ ರಚನೆಯನ್ನು ಬದಲಿಸಲು ಟಾಟಾ ಮುಂದಾಗಿದೆ.

ಹೂಡಿಕೆ ಹಿಂತೆಗೆತ ಒಪ್ಪಂದದ ವ್ಯವಹಾರದ ಅಂತಿಮ ದಿನಾಂಕದ ಆರು ತಿಂಗಳ ಒಳಗೆ ಮುಂಬಯಿಯ ಕಾಲಿನಾದಲ್ಲಿನ ಸಂಸ್ಥೆಯ ವಸತಿ ಗೃಹಗಳಿಂದ ಸ್ಥಳಾಂತರ ಹೊಂದುವಂತೆ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಸೂಚನೆ ನೀಡಿದೆ.

ಇದರಿಂದ ಕೆರಳಿರುವ ಏರ್ ಇಂಡಿಯಾ ಒಕ್ಕೂಟ ಮುಷ್ಕರದ ಎಚ್ಚರಿಕೆ ನೀಡಿದೆ.


ಏರ್ ಇಂಡಿಯಾ ಒಕ್ಕೂಟದ ಜಂಟಿ ಕ್ರಿಯಾ ಸಮಿತಿಯು ಮುಂಬಯಿ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ.

ಈ ವಿಚಾರವಾಗಿ ನವೆಂಬರ್ 2ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗಬಹುದು ಎಂದು ಹೇಳಿದೆ. ನಿಯಮದ ಪ್ರಕಾರ ಒಕ್ಕೂಟವೊಂದು ಪ್ರತಿಭಟನೆ ನಡೆಸಬೇಕೆಂದರೆ ಅದರ ಬಗ್ಗೆ ಎರಡು ವಾರಗಳ ಮುಂಚೆಯೇ ನೋಟಿಸ್ ನೀಡಬೇಕು.
ಅಕ್ಟೋಬರ್ 5ರಂದು ವಿಮಾನಯಾನ ಸಂಸ್ಥೆ ನೀಡಿರುವ ಪತ್ರದಲ್ಲಿ ವಿಮಾನಯಾನವು ಖಾಸಗೀಕರಣಗೊಳ್ಳುವ ಆರು ತಿಂಗಳ ಒಳಗೆ ಮನೆಗಳನ್ನು ಖಾಲಿ ಮಾಡುವುದಾಗಿ ಅಕ್ಟೋಬರ್ 20ರ ಒಳಗೆ ಒಪ್ಪಿಗೆ ನೀಡುವಂತೆ ಏರ್ ಇಂಡಿಯಾ ತನ್ನ ಕಾಲೋನಿಗಳಲ್ಲಿ ನೆಲೆಸಿರುವ ಜನರಿಗೆ ಸೂಚಿಸಿದೆ.

ಏರ್ ಇಂಡಿಯಾ ಮುಂಬಯಿಯ ಕಾಲಿನಾ ಮತ್ತು ದಿಲ್ಲಿಯ ವಸಂತ್ ವಿಹಾರ್ ಪ್ರದೇಶಗಳಲ್ಲಿ ಕಾಲೋನಿಗಳನ್ನು ಹೊಂದಿದೆ. ಈ ಎರಡೂ ಕಡೆಯಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಸೂಚನೆ ನೀಡಲಾಗಿದೆ.

ದಿಲ್ಲಿ ಮತ್ತು ಮುಂಬಯಿಗಳಲ್ಲಿನ ಪರಿಸ್ಥಿತಿ ಬಗ್ಗೆ ಏರ್ ಇಂಡಿಯಾ ಒಕ್ಕೂಟಗಳು ನಿರಂತರ ಸಮಾಲೋಚನೆ ನಡೆಸುತ್ತಿದ್ದು, ಜತೆಯಾಗಿ ಮುಷ್ಕರಕ್ಕೆ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಒಕ್ಕೂಟದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...