Thursday, August 11, 2022

ವಾಹನ ಸವಾರರ ಕೈ ಸುಡುತ್ತಿರುವ ಇಂಧನ: ಸಾರ್ವಕಾಲಿಕ ದಾಖಲೆ ನಿರ್ಮಿಸಿದ ತೈಲ ಬೆಲೆ

ಮುಂಬೈ: ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಮೂಲಕ ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 24 ರಿಂದ 30 ಪೈಸೆ ಹಾಗೂ ಡೀಸೆಲ್​ ಮೇಲೆ 28 ರಿಂದ 36 ಪೈಸೆಯನ್ನು ತೈಲ ಕಂಪನಿಗಳು ಹೆಚ್ಚಿಸಿವೆ.


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 102.39 ರೂ. ಹಾಗೂ 30 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 90.77 ರೂ.ಗೆ ಏರಿಕೆಯಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 30 ಪೈಸೆ ಏರಿಕೆಯೊಂದಿಗೆ ಲೀಟರ್​ ಪೆಟ್ರೋಲ್ ಬೆಲೆ 105.95ಕ್ಕೆ ಹಾಗೂ ಬರೋಬ್ಬರಿ 36 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 96.34 ರೂ.ಗೆ ಏರಿಕೆಯಾಗಿದೆ.
ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತದೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್​ ಬೆಲೆ ಶತಕದ ಗಡಿ ದಾಟಿದ್ದು,

ಹೀಗೆ ತೈಲ ಕಂಪನಿಗಳು ಇಂಧನ ದರ ಹೆಚ್ಚಿಸುತ್ತಿದ್ದರೆ ಡೀಸೆಲ್​ ಬೆಲೆಯೂ ನೂರರ ಗಡಿ ತಲುಪಲಿದೆ.

LEAVE A REPLY

Please enter your comment!
Please enter your name here

Hot Topics

ಕಾಲು ಜಾರಿ ಹೊಳೆಗೆ ಬಿದ್ದ ಸನ್ನಿಧಿಯ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಕುಟುಂಬಸ್ಥರು-ಸ್ನೇಹಿತರ ಆಕ್ರಂದನ

ಬೈಂದೂರು: ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಬಾಲಕಿ ಸನ್ನಿಧಿ ಮೃತದೇಹ ಎರಡು ದಿನಗಳ ಬಳಿಕ ಪತ್ತೆಯಾಗಿದ್ದು, ಈಕೆ ಅಂತ್ಯ ಕ್ರಿಯೆಯನ್ನು ಮನೆ ಸಮೀಪದಲ್ಲೇ ನಿನ್ನೆ ನೆರವೇರಿಸಲಾಗಿದೆ. ಸರ್ಕಾರಿ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ...

ಕೃಷಿಕರೇ ಗಮನಿಸಿ: ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ

ಮಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕರ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾhttp://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್...

ತೊಕ್ಕೊಟ್ಟುವಿನಲ್ಲಿ ಬೈಕ್‌-ಕಾರು ಢಿಕ್ಕಿ: ಸವಾರ ಗಂಭೀರ

ಉಳ್ಳಾಲ: ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್‍ಗೆ ಕಾರು ಢಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ನಿನ್ನೆ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಾಪಿಕಾಡ್ ಬಳಿ ನಡೆದಿದ್ದು, ಕಾರು ಮತ್ತು ಬೈಕ್ ಎರಡೂ...