ತಿರುಪತಿ ಲಡ್ಡು ವಿವಾದ ಪರೋಕ್ಷವಾಗಿ ಕರ್ನಾಟಕದ ಕೆಎಂಎಫ್ನ ನಂದಿನಿ ಬ್ರ್ಯಾಂಡ್ಗೆ ನೆರವಾಯಿತಾ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಇದೆ. ತಿರುಪತಿ ಲಡ್ಡು ವಿವಾದದ ಬಳಿಕ ನಂದಿನಿ ಹಾಲು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕರ್ನಾಟಕದ ಎಲ್ಲ ಮುಜರಾಯಿ ದೇಗುಲಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಜತೆಗೆ, ಎಲ್ಲ ದೇಗುಲಗಳ ಪ್ರಸಾದವನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲೂ ಸೂಚನೆ ನೀಡಿತ್ತು. ಇದರಿಂದಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಳವಾಗಿದೆ.
ಮತ್ತೊಂದೆಡೆ, ಕಲಬೆರಕೆ ತುಪ್ಪ ಮತ್ತು ಹಾಲಿನ ಉತ್ಪನ್ನಗಳ ಆತಂಕದಿಂದಾಗಿ ಜನರಲ್ಲಿಯೂ ನಂದಿನಿ ಹಾಲು ಮತ್ತು ನಂದಿನಿ ಉತ್ಪನ್ನಗಳ ಮೇಲೆ ಒಲವು ಹೆಚ್ಚಾಗಿದೆ ಎಂದು ನಂದಿನಿ ಮೂಲಗಳು ತಿಳಿಸಿವೆ. ಸದ್ಯ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿ ಕೂಡ ಲಡ್ಡು ತಯಾರಿಕೆಗಾಗಿ ನಂದಿನಿ ತುಪ್ಪವನ್ನೇ ಬಳಸುತ್ತಿದೆ.
ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ ಬಾಲಿವುಡ್ನ ಸ್ಟಾರ್ ಆಗಿರೋ ಕಥೆಯೇ ರೋಚಕ.
ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.
‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.
ಮಂಗಳೂರು/ಬಿಜ್ನೋರ್ : ಭೀಕರ ಅಪಘಾ*ತ ಸಂಭವಿಸಿ ನವವಿವಾಹಿತರು ಸೇರಿದಂತೆ ಏಳು ಮಂದಿ ಮೃ*ತಪಟ್ಟಿರುವ ದು*ರಂತ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ಡೆಹ್ರಾಡೂನ್-ನೈನಿತಾಲ್ ಹೆದ್ದಾರಿಯಲ್ಲಿ ಧಮ್‌ಪುರದ ಅ*ಗ್ನಿಶಾಮಕ ಠಾಣೆ ಬಳಿ ಇಂದು(ನ.16) ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ನವವಿವಾಹಿತ ಜೋಡಿ ಹಾಗೂ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಟೆಂಪೋಗೆ ಹಿಂದಿನಿಂದ ಕಾರೊಂದು ಡಿ*ಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿ*ಕ್ಕಿ ಹೊಡೆದಿದೆ. ಡಿ*ಕ್ಕಿಯ ರಭಸಕ್ಕೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಏಳು ಜನರು ತೀ*ವ್ರವಾಗಿ ಗಾ*ಯಗೊಂಡು ಸ್ಥಳದಲ್ಲೇ ಸಾ*ವನ್ನಪ್ಪಿದರೆ, ಅದರ ಚಾಲಕ ಅಜಬ್ ಸಿಂಗ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾ*ವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾ*ಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜಿನಿಂದಾಗಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಈ ಅಪಘಾ*ತ ಸಂಭವಿಸಿದೆ ಎಂದು ಹೇಳಲಾಗಿದೆ
ಮಂಗಳುರು/ಜಾರ್ಖಾಂಡ: ತನ್ನ ಸ್ವಂತ ಅಂಬೆಗಾಲಿಡುವ ಒಂದೂವರೆ ವರ್ಷದ ಮಗಳನ್ನು ತಾಯಿಯೊಬ್ಬಳು ಕ್ರೂ*ರವಾಗಿ ಹ*ತ್ಯೆ ಮಾಡಿ ಮಗುವಿನ ಲಿ*ವರನ್ನು ಸೇವಿಸಿದ ಭ*ಯಾನಕ ಘಟನೆ ಜಾರ್ಖಾಂಡ್‌ನ ಪಲಾಮು ಎಂಬಲ್ಲಿ ನಡೆದಿದೆ.
ಮೂಢನಂಬಿಕೆಗಳು ಸಮಾಜದ ಒಂದು ಭಾಗವಾಗಿ ಇನ್ನೂ ಉಳಿದುಕೊಂಡಿದೆ. ಮಾ*ಟಮಂತ್ರ ಸೇರಿದಂತೆ ಅತ್ಯಂತ ಅಪಾಯಕಾರಿ ರೂಪದಲ್ಲಿಯೂ ಚಾಲ್ತಿಯಲ್ಲಿವೆ. ಜಾರ್ಖಂಡ್ ಭಯಾನಕ ನ*ರಬ*ಲಿಯೊಂದು ನಡೆದಿದ್ದು, ಪಲಾಮುದ ಮಹಿಳೆ ಗೀತಾದೇವಿ ತನ್ನ ಒಂದೂವರೆ ವರ್ಷದ ಮಗಳನ್ನು ‘ಬ*ಲಿ’ ನೀಡಿ, ಆಕೆಯ ದೇಹವನ್ನು ತುಂ*ಡುಗಳಾಗಿ ಕತ್ತರಿಸಿ ನಂತರ ಆಕೆಯ ಯ*ಕೃತ್ತು ತಿಂದಿದ್ದಾಳೆ.
ಆರೋಪಿ ಮಹಿಳೆ ಪೊಲೀಸರ ವಿಚಾರಣೆಯಲ್ಲಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತಾನು ಮೊದಲು ಹತ್ತಿರದ ಮಾರುಕಟ್ಟೆಗೆ ಹೋಗಿ ಅಲ್ಲಿಂದ ಬಳೆಗಳು, ಬಟ್ಟೆಗಳು ಮತ್ತು ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದು, ಅದೇ ದಿನ ಸಂಜೆ, ಅವಳು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ತನ್ನ ಮನೆಯಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಸಿಕ್ನಿ ಬರ್ವಧೋರಾ ಕಾಡಿಗೆ ಹೋಗಿದ್ದಾಳೆ.
ಕೃತ್ಯದ ವಿವರ :
ಕಾಡಿನಲ್ಲಿ ಮಹಿಳೆ ತನ್ನ ಮತ್ತು ಮಗಳ ಬಟ್ಟೆಗಳನ್ನು ತೆಗೆದು ‘ಪೂಜೆ’ ಮಾಡಿ ನಂತರ ಬೆ*ತ್ತಲೆ ಸ್ಥಿತಿಯಲ್ಲಿ ಸ್ವಲ್ಪ ಕಾಲ ನೃತ್ಯ ಮಾಡಿದ್ದಾಳೆ. ಬಳಿಕ, ಆಕೆ ತನ್ನ ಒಂದೂವರೆ ವರ್ಷದ ಮಗಳನ್ನು ಚಾ*ಕುವಿನಿಂದ ಕತ್ತು ಸೀ*ಳಿ ಕೊಂ*ದಿದ್ದಾಳೆ. ನಂತರ ಅದೇ ಚಾ*ಕುವಿನಿಂದ ತನ್ನ ಮಗಳ ದೇ*ಹವನ್ನು ತುಂ*ಡುಗಳಾಗಿ ಕ*ತ್ತರಿಸಿ ದೇ*ಹದ ಭಾಗಗಳ ಮೇಲೆ ಕುಳಿತು ತನ್ನ ಮಗಳ ಯ*ಕೃತ್ತನ್ನು ಕಚ್ಚಿ ತಿಂದಿದ್ದಾಳೆ. ಅದಾದ ಮೇಲೆ, ಮಗಳ ದೇ*ಹದ ಭಾ*ಗಗಳನ್ನು ನೆಲದಲ್ಲಿ ಹೂತು ಬೆ*ತ್ತಲೆಯಾಗಿ ಮನೆಗೆ ಹೋಗಿದ್ದಾಳೆ.
ಮಹಿಳೆಯ ಈ ದುರ್ವರ್ತನೆಯನ್ನು ನೋಡಿದ ಸುತ್ತಮುತ್ತಲಿನವರು ಸಂಬಂಧಿಕರಿಗೆ ಮಾಹಿತಿ ನೀಡಿದರು. ಗೀತಾಳ ಈ ವಿಚಿತ್ರ ವರ್ತನೆಯಿಂದ ಅನುಮಾನಗೊಂಡು ಅತ್ತೆ ಅತ್ತೆ ತನ್ನ ಮೊಮ್ಮಗಳ ಬಗ್ಗೆ ಕೇಳಿದಾಗ, ಅವಳು ತಾನೇ ತನ್ನ ಮಗಳನ್ನು ಕೊಂ*ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅವಳ ಪತಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಗೀತಾ ತನ್ನ ಮಗುವನ್ನು ನ*ರಬ*ಲಿ ನೀಡಿದ್ದು, ಬ್ಲ್ಯಾ*ಕ್ ಮ್ಯಾ*ಜಿಕ್ ಕಲಿತಿರುವುದಾಗಿ ಅತ್ತೆ ಬಳಿ ಹೇಳಿದ್ದಾಳೆ. ಅತ್ತೆ ಕೂಡಲೇ ಪೊಲೀಸರಿಗೆ ಮತ್ತು ಮಗನಿಗೆ ಈ ವಿಷಯ ತಿಳಿಸಿದ್ದಳು. ಅಕೆ ಮಾ*ಟ-ಮಂ*ತ್ರವನ್ನು ಕಲಿತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅದಕ್ಕಾಗಿ ತನ್ನ ಮಗಳು ಅಥವಾ ಗಂಡನ ಪ್ರಾ*ಣ ಬ*ಲಿ ಪಡೆದು ಮಂ*ತ್ರವನ್ನು ಸಾಧಿಸುವ ಕನಸುಗಳನ್ನು ಹೊಂದಿದ್ದಳು ಎಂದು ಹೇಳಿದ್ದಾಳೆ. ಹೀಗಾಗಿ, ಮಗಳನ್ನು ಬ*ಲಿ ಕೊಡಲು ಆಕೆ ನಿರ್ಧರಿಸಿದ್ದಳು ಎನ್ನಲಾಗಿದೆ.
ಅಪರಾಧದ ಸ್ಥಳಕ್ಕೆ ಗೀತಾ ಸಮೇತ ಪೊಲೀಸರು ಹಾಗೂ ಕುಟುಂಬಸ್ಥರು ಹೋಗಿದ್ದು,ಅಲ್ಲಿ ಚಿಕ್ಕ ಮಗುವಿನ ವಿ*ರೂಪಗೊಂಡ ದೇ*ಹವನ್ನು ಬೆ*ತ್ತಲೆ ಸ್ಥಿತಿಯಲ್ಲಿ ಹೂತುಹಾಕಿರುವುದು ಪ*ತ್ತೆಯಾಗಿದ್ದು ಒಂದು ರೀತಿಯ ಭಯಾನಕ ವಾತವರಣವನ್ನೇ ಸೃಷ್ಠಿಸಿತು. ಒಂದೊಮ್ಮೆ ಭಯಭೀತರಾದ ಪೊಲೀಸರು ಬಳಿಕ ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.