Sunday, November 27, 2022

ಕಾಂತಾರ’ ಯಶಸ್ಸಿನ ಬೆಳ್ಳಿತೆರೆಗೆ ಬರಲಿದೆ ತುಳುನಾಡ ಆರಾಧ್ಯ ದೈವ ‘ಕೊರಗಜ್ಜನ’ ಸಿನಿಮಾ..!

ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ದತೆಗಳು ಆರಂಭವಾಗಿದೆ.ಖ್ಯಾತ ಹಾಲಿವುಡ್- ಬಾಲಿವುಡ್ ನಟ ಕಬೀರ್ ಬೇಡಿ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಖ್ಯಾತ ನಾಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ.

ಮಂಗಳೂರು : ತುಳುನಾಡಿನ ದೈವಾಧಾರಿತ ಚಲನ ಚಿತ್ರ ಕಾಂತಾರ ಸೂಪರ್ ಹಿಟ್ ಆಗಿ ದೇಶ ವಿದೇಶಗಳಲ್ಲಿ ಸದ್ದು ಮಾಡಿದ ಬಳಿಕ ದೈವಾಧಾರಿತ ಸಿನಿಮಾ ನಿರ್ಮಾಣಗಳತ್ತ ಒಲವು ಹೆಚ್ಚಿದೆ.

ಇದಕ್ಕೆ ಪೂರಕವಾಗಿ ಇದೀಗ ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜ ಆಧಾರಿತ ಸಿನಿಮಾ ತೆರೆಗೆ ಬರಲು ಸಿದ್ದತೆಗಳು ಆರಂಭವಾಗಿದೆ.

ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ , ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಈ “ಕರಿ ಹೈದ….ಕರಿ ಅಜ್ಜ …”ಹೆಸರಿನ ಸಿನಿಮಾ ತಯಾರಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಬಳ್ಳಮಂಜದ ಇತಿಹಾಸ ಪ್ರಸಿದ್ಧ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಸ್ಥಳಿಯ ಶಾಸಕ ಹರೀಶ್ ಪೂಂಜ ರವರು ಕ್ಯಾಮೆರ ಚಾಲನೆ ಮಾಡುವುದರ ಮೂಲಕ ಅದ್ದೂರಿ ಚಾಲನೆ ನೀಡಿದರು.

ಮಾತ್ರಶ್ರೀ ಕಮಲ ಕೆ ಸಪಲ್ಯ ಆರಂಭ ಫಲಕ ತೋರಿಸಿದರು. ಇತ್ತೀಚಿನ ಹಲವಾರು ವರ್ಷಗಳಿಂದ ಕೊರಗಜ್ಜನ ಮಹಿಮೆ ಮತ್ತು ಕಾರ್ಣಿಕವನ್ನು ತೆರೆಯ ಮೇಲೆ ತರಬೇಕೆಂದು ಹಲವಾರು ನಿರ್ಮಾಪಕರು ಯತ್ನಿಸುತ್ತಿದ್ದರು.

ಇದೀಗ ಸುಧೀರ್ ಅತ್ತಾವರ್ ಕೊರಗಜ್ಜ ನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚಿಸಿ, ಸುಮಾರು 12ನೇ ಶತಮಾನದಲ್ಲಿದ್ದ ಕೊರಗಜ್ಜನ ನಿಜ ಬದುಕಿನ ಯಾರಿಗೂ ತಿಳಿದಿರದಂತಹ ಸಾಕಷ್ಟು ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮುಹೂರ್ತ ನಡೆಸುವ ಮೊದಲು ಕೊರಗಜ್ಜನ ಸಮುದಾಯದ ಪ್ರಮುಖ ವ್ಯಕ್ತಿಗಳು ಡೊಳ್ಳು -ತಮಟೆಗಳ ಸ ವಿಶೇಷ ಪೂಜೆಯನ್ನು ಶ್ರೀ ಸುಂದರ ಬೆಳುವಾಯಿ, ಶ್ರೀ ಬಾಬು ಪಾಂಗಳ, ಶ್ರೀ ಬಲ್ ರಾಜ್, ಶ್ರೀ ರಮೇಶ್ ಮೊದಲಾದ ಮಹನೀಯರು ಮತ್ತು ಗುರಿಕಾರರು ಹಳೆಯ ಶೈಲಿಯ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸಿನೆಮಾಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ಖ್ಯಾತ ನಾಟಿಯರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿದ್ದಾರೆ.

ಭರತ್ ಸೂರ್ಯ ಎನ್ನುವ ಹೊಸ ಕಲಾವಿದನನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.

ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಎಂಟುನೂರು ವರ್ಷಗಳ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ

LEAVE A REPLY

Please enter your comment!
Please enter your name here

Hot Topics

ಇನ್ಮುಂದೆ ಬಾಡಿಗೆ ಮನೆ ಪಡೆಯಲು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಅಗತ್ಯ-ಮೈಸೂರು ನಗರ ಪೊಲೀಸ್ ಕಮಿಷನರ್ ಹೊಸ ಸುತ್ತೋಲೆ

ಮಂಗಳೂರು: ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಆಗಿರುವ ಘಟನೆ ಬೆನ್ನಲ್ಲೇ ಆರೋಪಿ ವಾಸವಾಗಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಬಾಡಿಗೆ ಮನೆ ನೀಡುವ ಮಾಲಕರು ಯಾರೂ ಗುರುತು ಪರಿಚಯ...

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...

ನಂತೂರಿನಲ್ಲಿ ಜೋಡಿ ಮೇಲೆ ದಾಳಿ-ಮೂವರು ಹಿಂದೂ ಕಾರ್ಯಕರ್ತರು ಅರೆಸ್ಟ್

ಮಂಗಳೂರು:ಮಂಗಳೂರಿನ ನಂತೂರು ಸರ್ಕಲ್‌ ಬಳಿ ಗುರುವಾರ ಸಂಜೆ ಭಿನ್ನ ಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಸುರತ್ಕಲ್‌ ನಿವಾಸಿ ಮುತ್ತು(18), ಪ್ರಕಾಶ್‌(21) ಮತ್ತು ಅಸೈಗೋಳಿ...