Saturday, July 2, 2022

ಧ್ವಜಾರೋಹಣ ನಂತರ  ನೇಣಿಗೆ ಮುಂದಾದ ಪೌರಕಾರ್ಮಿಕ..!

 ಧ್ವಜಾರೋಹಣ ನಂತರ  ನೇಣಿಗೆ ಮುಂದಾದ ಪೌರಕಾರ್ಮಿಕ..!

After the flag hoist civic duty.try to hang on Staircase at Bidar 

ಬೀದರ್: ಚಿಟಗುಪ್ಪ  ಪುರಸಭೆ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ತಕ್ಷಣ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ ರಾಘವೇಂದ್ರ ರೇವಣಸಿದ್ದಪ್ಪ ಅವರು ಕಟ್ಟಡದ ಚಾವಣಿ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಂಗಳವಾರ ಸಂಭವಿಸಿದೆ.‘ಎರಡು ತಿಂಗಳಿಂದ ಪೌರಕಾರ್ಮಿಕರ ಸಂಬಳ ಆಗದೇ ಇರುವುದರಿಂದ ಕುಟುಂಬದ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ’ ಎಂದು ರಾಘವೇಂದ್ರ ತಿಳಿಸಿದ್ದಾರೆ.

‘ಧ್ವಜಾರೋಹಣ ನೆರವೇರಿಸಿದ ತಕ್ಷಣ ಎಲ್ಲರೂ ನಿಲ್ಲಿ ಎಂಬ ಜೋರಾದ ಶಬ್ದ ಕಟ್ಟಡದ ಮೇಲಿ ನಿಂದ ಕೇಳಿಬಂತು. ಆಗ ಎಲ್ಲರೂ ಮೇಲೆ ನೋಡಿದೆವು.

ರಾಘವೇಂದ್ರ ಅವರು ಕೊರಳಿಗೆ ಹಗ್ಗದ ಕುಣಿಕೆ ಹಾಕಿಕೊಂಡು ಕಟ್ಟಡದಿಂದ ಕೆಳಗೆ ಜಿಗಿಯಲು ಯತ್ನಿಸಿದರು. ತಕ್ಷಣ ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಚಾವಣಿ ಮೇಲೆ ಹೋಗಿ ಅವರನ್ನು ಕಾಪಾಡಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಮುಖ್ಯಾಧಿಕಾರಿ ಶ್ರೀಪಾದ್ ರಾಜಪುರೋಹಿತ, ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

3ನೇ ಸೌತ್ ಇಂಡಿಯಾ ಪ್ರಾಜೆಕ್ಟ್ ಎಕ್ಸಿಬಿಷನ್‌ನಲ್ಲಿ ಉಜಿರೆ SDM ಇಂಜಿನಿಯರಿಂಗ್ ವಿಭಾಗಕ್ಕೆ ಪ್ರಶಸ್ತಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ, ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿಪಟೂರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ದಕ್ಷಿಣ ಭಾರತದ ಸುಮಾರು ಹದಿಮೂರು ಎಂಜಿನಿಯರಿಂಗ್ ವಿಭಾಗಗಳಲ್ಲಿ 3ನೇ ಸೌತ್...

ಬಾಕ್ರಬೈಲಿನ ಗತ್ತಿನ ಗುತ್ತುಮನೆಗಿದೆ 987 ವರ್ಷದ ಇತಿಹಾಸ…

ಮಂಗಳೂರು: ಹಿಂದಿನ ಕಾಲದಲ್ಲಿ 'ಗುತ್ತು ಮನೆ' ಎಂದರೆ ವಿಶೇಷ ತೆರನಾದ ಗೌರವ. ಆ ಮನೆಯವರಿಗೆ ಒಂದು ತೆರನಾದ ಸ್ಥಾನಮಾನ. ಕಾಲ ಅದೆಷ್ಟೇ ಗತಿಸಿ ಹೋದರೂ ಆ ಮನೆಯ ಮೇಲಿನ ಅಭಿಮಾನ, ಮಾನ್ಯತೆ ಒಂದು...

ಉಡುಪಿಯಲ್ಲಿ ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ ತೆಂಗಿನಮರ, ಬಂಡೆ

ಉಡುಪಿ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾಗಿದ್ದು, ಕಡಲ್ಕೊರೆತ ಉಂಟಾಗಿದೆ.ಜಿಲ್ಲೆಯ ಪಡುಬಿದ್ರಿ, ಕಾಪು,ಪಡುಕೆರೆ, ಕುಂದಾಪುರದ ಕೋಡಿ ಪರಿಸರದಲ್ಲಿ ಸಮುದ್ರ ಕೊರೆತ ಹೆಚ್ಚಾಗಿ ಸಮುದ್ರದ ತೀರದಲ್ಲಿ ಇದ್ದಂತಹ ತೆಂಗಿನ ಮರಗಳು...