Thursday, September 29, 2022

“ಬೆಳ್ತಂಗಡಿಯಲ್ಲಿ ಪೂಂಜಾ ಬಂದ್ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ”

ಬೆಳ್ತಂಗಡಿ: ‘ನಮ್ಮ ತಾಲೂಕಿನಲ್ಲಿ ಹರೀಶ್ ಪೂಂಜಾನ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಪೂಂಜಾ ಬಂದ ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ. ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವೇಳೆ ಬಾರ್‌ಗಳು ಬಂದ್ ಇದ್ರೂ ಬೆಳ್ತಂಗಡಿಯಲ್ಲಿ ಮಾತ್ರ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರು’ ಎಂದು ಬೆಳ್ತಂಗಡಿ ಹಾಲಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಮಾಜಿ ಶಾಸಕ ವಸಂತ ಬಂಗೇರ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಬೆಳ್ತಂಗಡಿಯ ಸಂಗಾತಿ ಗುಂಪು ಯೋಜನೆ ಆಶ್ರಯದಲ್ಲಿ ನಡೆದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಾಧ್ಯಮದವರು ಇಲ್ಲಿ ಇದ್ದೀರಿ. ನಿಮಗೆ ನಾನು ಹೇಳುವ ಪ್ರತೀ ಮಾತುಗಳು ಕೇಳುತ್ತೆ, ರೆಕಾರ್ಡ್ ಕೂಡಾ ಆಗುತ್ತೆ.

ಅದನ್ನು ಬರೆಯುವ ಧೈರ್ಯ ಇದ್ದರೆ ಮಾತ್ರ ರಿಪೋರ್ಟ್ ಮಾಡಿ, ಆಗುವುದಿಲ್ಲ ಆದ್ರೆ ಏನನ್ನೂ ಬರೀಬೇಡಿ.

ಪ್ರಸ್ತಾಪ ಮಾಡೋನು ನಾನು, ನನ್ನನ್ನು ಜೈಲಿಗೆ ಹಾಕೋದಾದ್ರೆ ಹಾಕ್ಲಿ, ಆದರೆ ನಿಮಗೆ ಯಾಕೆ ಭಯ ಬರಿಲಿಕ್ಕೆ? ಎಂದು ಹೇಳಿ ತುಳುವಿನಲ್ಲಿ ಮಾತು ಪ್ರಾರಂಭಿಸಿದ ಅವರು

‘ನಾಲ್ಕು ವರ್ಷದ ಮೊದಲು ಹರೀಶ್‌ ಪೂಂಜಾ ಎಂಬಾತ ಈ ತಾಲ್ಲೂಕಿಗೆ ಒಬ್ಬ ಹುಟ್ಟಿದ. ಅಂದಿನಿಂದ ತಾಲೂಕಿನಲ್ಲಿ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಸರ್ಕಾರದಿಂದ 100 ರೂ. ಬಂದ್ರೆ 40 ರೂ ಇವರ ಕಿಸೆಗೆ ಉಳಿದ 60 ರೂ. ಅಧಿಕಾರಿಗಳು, ಕಾಂಟ್ರಾಕ್ಟರ್‌ ನುಂಗಿ ಉಳಿದದ್ದರಲ್ಲಿ ಕೆಲಸ ಮಾಡಿಸ್ತಾರೆ.

ಇತ್ತೀಚೆಗೆ ತಾಲ್ಲೂಕಿನ ಕೆಲವೆಡೆ ಮಳೆಗಾಲ ವೇಳೆ ರಸ್ತೆಗಳಿಗೆ ಪ್ಯಾಚ್ ವರ್ಕ್ ಮಾಡಿದ್ರು. ಅದು ಎರಡು ದಿನದಲ್ಲೇ ಎದ್ದು ಹೋಗಿದೆ. ಈಗ ಅದೇ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬಿದ್ದಿವೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಪೂಂಜಾ ಶಾಸಕನಾದ ನಂತರ ಮರಳು, ಮಣ್ಣು, ಮರ ತೆಗೆಯಲು ಲೈಸೆನ್ಸೇ ಬೇಡ. ಪೊಲೀಸರು ಸುಮ್ಮನೆ ಕೂತು ನೋಡ್ತಾರೆ ಯಾಕಂದ್ರೆ ಈ ಪರ್ಸೆಂಟ್‌ನಲ್ಲಿ ಅವರಿಗೂ ಹೋಗುತ್ತಲ್ವಾ.

ಜೊತೆಗೆ ಕಂದಾಯ ಅಧಿಕಾರಿ, ತಹಶೀಲ್ದಾರ್ ಅವರು ಆಫೀಸ್‌ನಲ್ಲೇ ಹಾಯಾಗಿ ಕೂತು ಹೋಗೋದು ಹೋಗ್ಲಿ ಅಂತ ನೋಡ್ತಾ ಇರ್ತಾರೆ. ಬೆಳ್ತಂಗಡಿಯ ಕಾಡಿನಲ್ಲಿ ಈಗ ಮರ ಕೂಡಾ ಇಲ್ಲ. ಇಲ್ಲಿನ ಅರಣ್ಯಾಧಿಕಾರಿಗಳು ಕೂಡಾ ಕಳ್ಳರೇ. ಒಂದಿಬ್ಬರು ಒಳ್ಳೆಯವರಿದ್ದಾರೆ ಅಷ್ಟೆ. ಇದಕ್ಕೆಲ್ಲಾ ಯಾವುದೇ ಕೇಸ್‌ ಇಲ್ಲಾ ಅಷ್ಟೇ.

ಇತ್ತೀಚೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಸಂದರ್ಭದಲ್ಲಿ ಬೆಳ್ತಂಗಡಿಯ ಬಸ್‌ ನಿಲ್ದಾಣ, ಗುರುವಾಯನ ಕೆರೆಯಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ.

ಇವತ್ತು ಹರೀಶ್‌ ಪೂಂಜಾ ಕಾನೂನು ಪ್ರಕಾರ ಏನು ಮಾಡಬಾರದೋ ಅದನ್ನೆಲ್ಲವನ್ನು ಇವತ್ತು ಇಲ್ಲಿ ಪೂಂಜಾರವರು ಮಾಡುತ್ತಿದ್ದಾರೆ. ಈ ರೀತಿ ಜನರನ್ನು ವಂಚಿಸಿ ಅವರ ನೆತ್ತರು ಹೀರುವ ಕೆಲಸ ನಮ್ಮ ಹರೀಶ್ ಪೂಂಜಾರವರಿಂದ ಆಗುತ್ತಿದೆ. ಇದನ್ನು ನಿಲ್ಲಿಸುವ ಕಾರ್ಯ ಆಗಬೇಕಿದೆ.

ಈ ರೀತಿ ಭ್ರಷ್ಟಾಚಾರ ಆದ್ರೆ ಹೇಗೆ ಬದುಕೋದು. ನಮ್ಮ ಮುಂದಿನ ಮಕ್ಕಳಿಗೆ ಏನು ಕಲಿಸೋದು, ಹೀಗೆ ತಲೆ ಒಡೆಯಿರಿ, ಹಣ ಮಾಡಿ ಅಂತಾನಾ?

ತುಳು ಸಂಸ್ಕೃತಿ, ಮಹತ್ವದ ಬಗ್ಗೆ ತಿಳಿ ಹೇಳ್ಬೇಕಾ? ಅಥವಾ ಕದ್ದು ಮಾರಿ , ದೇಶವನ್ನು, ರಾಜ್ಯ, ಜಿಲ್ಲೆ, ತಾಲ್ಲೂಕನ್ನು ಗುಂಡಾಂತರ ತೆಗೀರಿ ಅಂತ ಹೇಳ್ಬೇಕಾ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here

Hot Topics

ಎಸ್‌ಡಿಪಿಐ, ಒವೈಸಿಯ ಪಕ್ಷಗಳೊಂದಿಗೆ ವಕ್ಫ್ ಬೋರ್ಡನ್ನೂ ನಿಷೇಧಿಸಿ : ಹಿಂದೂ ಮಹಾಸಭಾ

ಮಂಗಳೂರು : ಆಡಳಿತದಲ್ಲಿರುವ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಇದು ಹಿಂದುತ್ವಕ್ಕೆ ಸಿಕ್ಕ ಗೆಲುವು ಎಂದು ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್...

ಕಡಬ: ಕಾನ್ವೆಂಟ್‌ಗೆ ನುಗ್ಗಿ ಹಲ್ಲೆಗೆ ಯತ್ನ-ಇಬ್ಬರು ಯುವಕರು ಅರೆಸ್ಟ್

ಕಡಬ: ಕಾನ್ವೆಂಟ್‌ವೊಂದಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಕಡಬದ ನೆಲ್ಯಾಡಿಯಲ್ಲಿ ನಡೆದಿದೆ.ಕಡಬ ತಾಲೂಕಿನ ಪೇರಡ್ಕ ನಿವಾಸಿಗಳಾದ ಸದಾಂ...

ಬೆಳ್ತಂಗಡಿ: ವಿಷ ಸೇವಿಸಿ ವೀಡಿಯೋ ಮಾಡಿ ಮನೆಯವರಿಗೆ ಕಳುಹಿಸಿದ ವಿವಾಹಿತ-ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಬೆಳ್ತಂಗಡಿ: ಹಾಸನ ಜಿಲ್ಲೆಯ ಅರಕಲಗೂಡಿನ ವಿವಾಹಿತ ವ್ಯಕ್ತಿಯೋರ್ವ ಧರ್ಮಸ್ಥಳ ಸಮೀಪದ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ್ದಲ್ಲದೆ ಅದನ್ನು ಕುಟುಂಬದವರಿಗೆ ಕಳುಹಿಸಿದ್ದು, ಘಟನೆ ಕುರಿತು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ...