ಶಿವಮೊಗ್ಗ: ಇತ್ತೀಚೆಗೆ ಪೊಲೀಸರನ್ನು ಎಂಜಲು ತಿನ್ನು ನಾಯಿಗಳೆಂದು ಸಂಬೋಧಿಸಿದ ಕರ್ನಾಟಕ ಗೃಹಸಚಿವ ಅರಗ ಜ್ಞಾನೇಂದ್ರ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಅಷ್ಟೊಂದು ಕೀಳುಮಟ್ಟದಲ್ಲಿ ನಿಂದಿಸಿದ ಬಗ್ಗೆ ಅಪಸ್ವರ ಕೇಳಿಬಂದಿದ್ದವು. ಇದೀಗ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಪೊಲೀಸ್ ಅಧಿಕಾರಿಯೊಂದಿಗೆ ಬಾಲಿಷವಾಗಿ ಮಾತನಾಡಿದ್ದಾರೆ.
ಈ ಬಗ್ಗೆ ವೀಡಿಯೋ ಸಹ ವೈರಲ್ ಆಗಿದೆ.
ಶಿವಮೊಗ್ಗ ನಗರ ದೊಡ್ಡಪೇಟೆ ವ್ಯಾಪ್ತಿಯ ಅಂಗಡಿ ಹಾಗೂ ಗೂಡಂಗಡಿಗಳಲ್ಲಿ ಬಿಡಿ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ಮಾರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ.
ದೊಡ್ಡಪೇಟೆ ಪಿಐ ಹರೀಶ್ ಪಟೇಲ್‌ಗೆ ಫೋನ್ ಮಾಡಿದ ಈಶ್ವರಪ್ಪ ಬೇರೆ ಕಡೆ ಇಲ್ಲದ ಕಾನೂನು ಶಿವಮೊಗ್ಗಕ್ಕೇಕೆ..? ಪ್ರಕರಣ ದಾಖಲಿಸಬೇಡಿ ಎಂದು ಬಾಲಿಶವಾಗಿ ಮಾತಿನ ಚಕಮಕಿ ನಡೆಸಿದ್ದಾರೆ.
ಪಿಐಗೆ ಕಾಲ್ ಮಾಡಿ ನಾಲ್ಕೈದು ಅಂಗಡಿಗಳಿಂದ ತಂಬಾಕು ಉತ್ಪನ್ನಗಳನ್ನ ವಶಪಡಿಸಿಕೊಂಡು ಹೋಗಿದ್ದೀರಂತಲ್ಲ ಏಕೆ ಎಂದು ಈಶ್ವರಪ್ಪ ಕೇಳಿದರು. ಅದಕ್ಕೆ ಪಿಐ ಬಿಡಿ ಉತ್ಪನ್ನ ಮಾರಾಟ ಕಾನೂನು ಬಾಹಿರ ಸಾರ್ ಎಂದರು.
ಅದಕ್ಕೆ ಈಶ್ವರಪ್ಪ ಇದಕ್ಕೇನು ಪರಿಹಾರ ಎಂದು ಮರುಪ್ರಶ್ನೆ ಹಾಕಿದರು. ಅದಕ್ಕೆ ಪ್ರತ್ಯುತ್ತರವಾಗಿ ಪಿಐ ಸಾರ್ ಮಾರಾಟ ಮಾಡಬಾರದು ಬೇಕಿದ್ದರೆ ಪ್ಯಾಕ್ ಸಿಗರೇಟ್ ನೀಡಬಹುದು ಎಂದು ಹೇಳಿದರು.
ನಾನೊಂದು ಪ್ಯಾಕ್ ಸಿಗರೇಟ್ ತರ್ತಿನಿ ಅದನ್ನ ರಸ್ತೆ ಮೇಲೆ ಹೊಡೀತ್ತೀನಿ ಆಗ ನೀವು ಪ್ರಕರಣ ದಾಖಲಿಸಿ, ಸಿಗರೇಟ್ ಸೇದೋವನಿಗೆ ಹಿಡ್ಕೊಂಡು ಒದೀರಿ.
ಸಿಗರೇಟ್ ಮಾರೋದಕ್ಕೆ ಅನುಮತಿ ಇದೆ ತಾನೇ..? ಸಿಂಗಲ್ ಆಗಿ ಮಾರಬಾರದಾ..? ಇದು ಯಾವಾಗಿಂದ ಇರೋ ಕಾನೂನು..? ಇದ್ದಕ್ಕಿದ್ದಂತೆ ಈ ಕಾನೂನು ಯಾಕೆ ಅನುಷ್ಟಾನ ಮಾಡ್ತಾ ಇದ್ದೀರಾ..?
ರಾಜ್ಯದಲ್ಲಿ ದೇಶದಲ್ಲಿ ಇಲ್ಲದ ಕಾನೂನು ಶಿವಮೊಗ್ಗಕ್ಕೆ ತಂದಿದ್ದೀರೇನೂ..? ಯಾರು ಸಿಗರೇಟ್ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಾರೋ ಅಂಥವರನ್ನ ಒದ್ದು ಲಾಕಪ್‌ಗೆ ಹಾಕಿ.
ಅಂಗಡಿಯಲ್ಲಿ ಸಿಗರೇಟ್ ಮಾರಬೇಡಿ ಎಂಬುದು ಹುಚ್ಚು ಆದೇಶ ಅಲ್ವಾ ಎಂದು ಈಶ್ವರಪ್ಪ ಕಾನೂನನ್ನೇ ಪ್ರಶ್ನಿಸಿದರು.
ಪಿಐ ಹರೀಶ್ ಪಟೇಲ್ ಸಚಿವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು. ಸಾರ್ ಬಿಡಿ ಬಿಡಿಯಾಗಿ ಸಿಗರೇಟ್ ಮಾರುವುದೂ ಕೂಡ ಕಾನೂನಿನಲ್ಲಿ ಅಪರಾಧ. ಅದರ ಬಗ್ಗೆಯೂ ಅಂಗಡಿಗಳಿಗೆ ಅರಿವಿರಬೇಕು ಎಂದು ಹೇಳಿದರು.
ಈಶ್ವರಪ್ಪ ಮಾತ್ರ ಪೊಲೀಸ್ ಅಧಿಕಾರಿಯ ಮಾತಿನಿಂದ ತೃಪ್ತರಾಗಲಿಲ್ಲ. ಶಿವಮೊಗ್ಗ ಎಸ್‌ಪಿಗೆ ಈಗ ಎಚ್ಚರ ಆಯ್ತಾ..? ಅಂಗಡಿಯವರು ಜೀವನ ಹೇಗೆ ಮಾಡಬೇಕು.
ಹೌದಪ್ಪ ಕಾಯ್ದೆ 2009ರಿಂದಲೇ ಇದೆ ಎಂದು ಈಗ ಹೇಳ್ತಾ ಇದ್ದೀಯಾ, ಇಷ್ಟು ದಿನ ಶಿವಮೊಗ್ಗದಲ್ಲಿ ಇಲ್ಲದ ಕಾಯ್ದೆ ಈಗೇಕೆ ತರ್ತಾ ಇದ್ದೀರಾ.
ಪೊಲೀಸ್ ಅಧಿಕಾರಿಗಳು ನನ್ನನ್ನ ಸುಮ್ಮನೇ ಮೈ ಮೇಲೆ ಎಳೆದುಕೊಳ್ತೀರಾ ಎಂದು ಗದರಿದರು. ಅಂಗಡಿಯಲ್ಲಿ ಮಾರಬಾರದು ಅಂತ ಕಾನೂನಿದ್ಯಾ..? ಮೊದಲು ಜನರಿಗೆ ಅರಿವು ಮೂಡಿಸುವ ಕಾನೂನು ಮಾಡಿ.
ನಂತರ ಅಂಗಡಿ ಮೇಲೆ ಕಾನೂನು ಚಲಾಯಿಸಿ. ಶಿವಮೊಗ್ಗ ಎಸ್‌ಪಿ ಈ ಕೆಲಸಕ್ಕೆ ಮುಂದಾಗುವಂತೆ ತಿಳಿ ಹೇಳಿ ಎಂದು ಪಿಐಗೆ ಉತ್ತರವೂ ನೀಡದಂತೆ ಏರು ದನಿಯಲ್ಲಿ ಮಾತನಾಡಿದ್ದಾರೆ.
ಮಂಗಳೂರು/ರಾಯಚೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಕೋಟಿಗಟ್ಟಲೆ ಭಕ್ತರು, ಸಂತರು, ಸನ್ಯಾಸಿಗಳು ಉತ್ಸವಕ್ಕೆ ಆಗಮಿಸುತ್ತಿದ್ದಾರೆ.
ಆದರೆ, 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್. ಪೆರುಮಾಳ್ ಈಗ ಸನ್ಯಾಸಿಯಾಗಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಈ ರೀತಿ ನೋಡಿದ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ 13 ಅಖಾಡಾಗಳಿಂದ ಸಾಧುಗಳು, ಯೋಗಿಗಳು, ಬಾಬಾಗಳು ಮತ್ತು ಅಘೋರಿಗಳು ಕುಂಭಮೇಳಕ್ಕೆ ಆಗಮಿಸಿದ್ದಾರೆ. ಆದರೆ, ಒಂದು ಕಾಲದಲ್ಲಿ ರಾಯಚೂರು ಡಿಸಿಯಾಗಿದ್ದ ಐ.ಆರ್.ಪೆರುಮಾಳ್ ಕಾಣಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್ ಆಗುತ್ತಿದೆ.
ಅವರು ಡಿಸಿಯಾಗಿದ್ದಾಗ ಕಚೇರಿಯಲ್ಲಿ ಕುಳಿತ ಫೋಟೊ ಹಾಗೂ ಈಗ ಗಡ್ಡ ಜಟ ಬಿಟ್ಟಿರುವ ಫೋಟೊ ಸಖತ್ ವೈರಲ್ ಆಗಿವೆ. ಜೀವನದ ಪಾರಮಾರ್ಥ ಅರಿತು ಸನ್ಯಾಸದತ್ತ ವಾಲಿರಬಹುದು ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.
ಪ್ರಯಾಗರಾಜ್‌ನಲ್ಲಿರುವ ಮಹಾ ಕುಂಭಮೇಳ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಎಂತೆಂಥವರು ಸನ್ಯಾಸಿಗಳಾಗಿರುವುದು ಕಂಡು ಬರುತ್ತಿದೆ. ಜೀವನದ ಅಂತಿಮ ಸತ್ಯಕ್ಕೆ ಮಮನಸೋತ ಆಧ್ಯಾತ್ಮದತ್ತ ವಾಲಿದ ಎಷ್ಟೋ ಜನ ಕಂಡು ಬರುತ್ತಿದ್ದಾರೆ.
ಅವರ ಸಾಲಿನಲ್ಲಿ ರಾಯಚೂರಿನಲ್ಲಿ ಡಿಸಿಯಾಗಿದ್ದ ಪೆರುಮಾಳರು ಒಬ್ಬರು ಎಂಬುದು ಗಮನಾರ್ಹ. ಇನ್ನು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಫೆಬ್ರವರಿ 26ರವರೆಗೆ ಮುಂದುವರಿಯಲಿದೆ.
ಮಂಗಳೂರು/ಪ್ರಯಾಗರಾಜ್ : ದೇಶ ವಿದೇಶಗಳಿಂದ ಮಹಾಕುಂಭಮೇಳಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳಲು ಪ್ರತಿ ದಿನ ಕೋಟಿ ಕೋಟಿ ಭಕ್ತರು ಪ್ರಯಾಗರಾಜ್‌ಗೆ ಆಗಮಿಸುತ್ತಿದ್ದಾರೆ. ಹಿಂದೂ ಮಾತ್ರವಲ್ಲದೇ, ವಿದೇಶಗಳಿಂದ ಈಗಾಗಲೇ ಹಲವರು ಹಿಂದೂ ಆಚಾರ ಹಾಗೂ ಪದ್ಧತಿಯಂತೆ ವೃತ ಕೈಗೊಂಡು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಸ್ಟೀವ್ ಜಾಬ್ಸ್ ಪತ್ನಿಯೂ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ರಷ್ಯಾದಿಂದ ಮಹಾಕುಂಭ ಮೇಳಕ್ಕೆ ಆಗಮಿಸಿದ ಮಸ್ಕ್ಯುಲರ್ ಬಾಬಾ ಜನಪ್ರಿಯರಾಗಿದ್ದಾರೆ. 7 ಅಡಿ ಎತ್ತರ, ಕಟ್ಟು ಮಸ್ತಾದ ದೇಹ, ಖಾವಿ, ರುದ್ರಾಕ್ಷಿಗಳನ್ನು ಧರಿಸಿರುವ ಈ ಮಸ್ಕ್ಯುಲರ್ ಬಾಬ ಇದೀಗ ಆಧುನಿಕ ಪರಶುರಾಮ ಎಂದೇ ಗುರುತಿಸಿಕೊಂಡಿದ್ದಾರೆ.
ಮಸ್ಕ್ಯುಲರ್ ಬಾಬಾ ಮೂಲ ರಷ್ಯಾ. ಇವರ ಹೆಸರು ಆತ್ಮ ಪ್ರೇಮಗಿರಿ ಮಹಾರಾಜ್. 30 ವರ್ಷಗಳ ಹಿಂದೆ ಈ ಬಾಬ ಸನಾತನದ ಧರ್ಮ ಅನುಸರಿಸಲು ಆರಂಭಿಸಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಪ್ರೇಮಗಿರಿ ಮಹಾರಾಜ್, ಕಳೆದ 30 ವರ್ಷಗಳಿಂದ ಸನಾತನ ಧರ್ಮ ಅನುಸರಿಸುತ್ತಿದ್ದಾರೆ. ರಷ್ಯಾದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಈ ಬಾಬಾ, ಆಧ್ಯಾತ್ಮದ ಕಡೆ ಒಲವು ಮೂಡಿತ್ತು. ಹೀಗಾಗಿ ವೃತ್ತಿ ತೊರೆದು ಹಿಂದೂ ಧರ್ಮ ಸೇರಿಕೊಂಡ ಪ್ರೇಮ್ ಗಿರಿ ಮಹಾರಾಜ್ ಇದೀಗ ಮಹಾಕುಂಭ ಮೇಳೆದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹರ ಹರ ಮಹದೇವ್ ಘೋಷಣೆಯೊಂದಿಗೆ ಸಕ್ರಿಯವಾಗಿ ಮಹಾಕುಂಭ ಮೇಳದಲ್ಲಿ ಪೇಮ್ ಗಿರಿ ಮಹಾರಾಜ್ ಪಾಲ್ಗೊಂಡಿದ್ದಾರೆ. ಕೆವಿನ್ ಬುಬ್ರಿಸ್ಕಿ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಾಬಾ ಫೋಟೋ ಪೋಸ್ಟ್ ಮಾಡಲಾಗಿದೆ. ಪ್ರೇಮ್ ಗಿರಿ ಮಹಾರಾಜ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬೆನ್ನಲ್ಲೇ ಭಾರಿ ಜನಪ್ರಿಯರಾಗಿದ್ದಾರೆ.
ಪ್ರೇಮ್ ಗಿರಿ ಮಹಾರಾಜ್ ಪ್ರತಿ ದಿನ ಹಿಂದೂ ಧರ್ಮದ ಆಚರಣೆ, ಪದ್ಧತಿಗನ್ನು ಅನುಸರಿಸುತ್ತಾರೆ. ಜೊತಗೆ ಪ್ರತಿ ದಿನ ವ್ಯಾಯಾಮ ಮಾಡಿ ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟಿದ್ದಾರೆ. ಮಸ್ಕ್ಯುಲರ್ ಬಾಬಾರನ್ನು ಹಲವು ಭಕ್ತರು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಐತಿಹಾಸಿಕ ಮಹಾಕುಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದು ಪ್ರೇಮ್ ಗಿರಿ ಮಹಾರಾಜ್ ಹೇಳಿದ್ದಾರೆ. ಮಸ್ಕ್ಯುಲರ್ ಬಾಬಾ ಮೂಲ ರಷ್ಯ ಆದರೆ ಕಳೆದ ಕೆಲ ವರ್ಷಗಳಿಂದ ಬಾಬಾ ನೇಪಾಳದಲ್ಲಿ ನೆಲೆಸಿದ್ದಾರೆ. ನೇಪಾಳದ ತಪೋವನಗಳಲ್ಲಿ ಪ್ರತಿ ದಿನ ಆಧ್ಯಾತ್ಮ, ಧ್ಯಾನ, ಪೂಜೆಗಳ ಮೂಲಕ ಹಲವು ಅನುಯಾಯಿಗಳನ್ನು ಪಡೆದಿದ್ದಾರೆ. ಮಹಾಕುಂಭ ಮೇಳೆ ಜನವರಿ 13ರಂದು ಆರಂಭಗೊಂಡಿದೆ. 45 ದಿನಗಳ ಕಾಲ ನಡೆಯಲಿರುವ ಈ ಮಹಾಕುಂಭ ಮೇಳೆ ಫೆಬ್ರವರಿ 26ರ ವರೆಗೆ ನಡೆಯಲಿದೆ. ಕೋಟ್ಯಾಂತರ ಭಕ್ತರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಒಟ್ಟು 40 ರಿಂದ 45 ಕೋಟಿ ಮಂದಿ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮಂಗಳೂರು/ಟೆಹ್ರಾನ್ : ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಹ*ತ್ಯೆ ಮಾಡಿರುವ ಘಟನೆ ಟೆಹ್ರಾನ್‌ನಲ್ಲಿ ಇಂದು (ಶನಿವಾರ) ನಡೆದಿದೆ.
ಈ ಘಟನೆಯಲ್ಲಿ ಮತ್ತೋರ್ವ ನ್ಯಾಯಮೂರ್ತಿ ಗಾಯಗೊಂಡಿದ್ದಾರೆ ಎಂದು ನ್ಯಾಯಾಂಗದ ‘ಮಿಜಾನ್’ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ. ಆಯತುಲ್ಲಾ ಮೊಹಮ್ಮದ್ ಮೊಘಿಶೆ ಹಾಗೂ ಅಲಿ ರಝನಿ ಹ*ತ್ಯೆಗೀಡಾದ ನ್ಯಾಯಮೂರ್ತಿಗಳು.
ಸುಪ್ರೀಂ ಕೋರ್ಟ್‌ನ ಹೊರಗೆ ನ್ಯಾಯಮೂರ್ತಿಗಳ ಮೇಲೆ ಗುಂಡಿನ ದಾಳಿ ನಡೆಸಿದ ದಾಳಿಕೋರ ಬಳಿಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ನ್ಯಾಯಮೂರ್ತಿಯೊಬ್ಬರ ಅಂಗರಕ್ಷಕ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಹ*ತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.