ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕಾಡಿದ ಕೊರೊನಾ: ಬಚ್ಚನ್ ಕುಟುಂಬ ಆಸ್ಪತ್ರೆಗೆ ದಾಖಲು
ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಕಾಡಿದ ಕೊರೊನಾ: ಬಚ್ಚನ್ ಕುಟುಂಬ ಆಸ್ಪತ್ರೆಗೆ ದಾಖಲು..!
ಮುಂಬೈ : ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಭ್ ಬಚ್ಚನ್ ಕುಟುಂಬವೇ ಕೊರೊನಾ ಸೋಂಕಿಗೆ ಒಳಗಾಗಿದೆ. ಅಮಿತಾಬ್ ಬಚ್ಚನ್ , ಮಗ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೂ ಮಗಳು ಆರಾಧ್ಯಗೂ ಕೊರೋನಾ ಪಾಸಿಟಿವ್ ಸೋಂಕು ಇರುವುದು ದೃಢಪಟ್ಟಿದೆ.
ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಅರಾಧ್ಯರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರ ಸ್ವಾಬ್ ಟೆಸ್ಟ್ನಲ್ಲಿ ಕೊರೋನಾ ಪಾಸಿಟಿವ್ ಬಂದಿದೆ.
ಅಮಿತಾಭ್ ಬಚ್ಚನ್ ಅವರು ಈ ವಿಚಾರವನ್ನು ಟ್ವೀಟ್ ಮಾಡಿ ಖಚಿತಪಡಿಸಿದ್ಧಾರೆ. ಹಾಗೆಯೇ, ತನ್ನ ಸಂಪರ್ಕಕ್ಕೆ ಬಂದಿದ್ದ ಯಾವುದೇ ವ್ಯಕ್ತಿಯಾದರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಬಿಗ್ ಬಿ ಮನವಿ ಮಾಡಿದ್ದಾರೆ.
“ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸದಸ್ಯರು ಮತ್ತು ಸಿಬ್ಬಂದಿವರ್ಗದವರ ಪರೀಕ್ಷೆ ನಡೆಯುತ್ತಿದೆ.
ಅದರ ಫಲಿತಾಂಶ ಬರಬೇಕಿದೆ. ಕಳೆದ 10 ದಿನಗಳಿಂದ ನನ್ನ ಸಮೀಪ ಬಂದಿದ್ದ ಯಾರೇ ಆದರೂ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅಭಿಷೇಕ್ ಬಚ್ಚನ್ ಕೂಡ ಟ್ವೀಟ್ ಮಾಡಿದ್ದಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ನಮ್ಮ ಕುಟುಂಬದವರು ಮತ್ತು ಮನೆಯಲ್ಲಿರುವ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಟ್ವೀಟ್ನನಲ್ಲಿ ಬರೆದುಕೊಂಡಿದ್ದಾರೆ.
ಇಬ್ಬರ ಶೀಘ್ರದಲ್ಲೇ ಗುಣಮುಖರಾಗಲು ಹಾರೈಕೆಗಳ ಮಹಪೂರವೇ ಹರಿದು ಬಂದಿದೆ, ಬಚ್ಚನ್ ಕುಟುಂಬಕ್ಕೆ ಕೊರೋನಾ ಕಂಟಕವಾಗಿರುವುದು ಅವರ ಅಭಿಮಾನಿ ಬಳಗಕ್ಕೆ ಆತಂಕ ತಂದೊಡ್ಡಿದೆ.
ಕೊರೋನಾದಿಂದ ಬಚ್ಚನ್ ಕುಟುಂಬ ಮುಕ್ತಿ ಪಡೆಯಲಿ ಎಂದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.
DAKSHINA KANNADA
ಟಿಕೆಟ್ ಕೈ ತಪ್ಪಿದ್ರೂ ಕೈ ಬಿಡದ ಹೈಕಮಾಂಡ್..! ಕೇರಳದ ಸಹ ಉಸ್ತುವಾರಿಯಾದ ನಳಿನ್ ಕುಮಾರ್ ಕಟೀಲ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಾಲಿಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿ ವಹಿಸಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳದ ಚುನಾವಣಾ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕದ್ದು ಬಾರಿ ನಿರಾಸೆ ತಂದಿತ್ತು. ಕ್ಯಾಪ್ಟನ್ ಬ್ರಿಜೇಶ್ ಚೌಟರ ಮೂಲಕ ಹೊಸ ಮುಖವನ್ನು ಪಕ್ಷ ಕಣಕ್ಕೆ ಇಳಿಸಿದೆ. ಇದು ನಳಿನ್ ಕುಮಾರ್ ಕಟೀಲ್ ಅವರಿಗೆ ಬೇಸರ ತಂದಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಹಳಷ್ಟು ಭಾವುಕರಾಗಿದ್ದ ನಳಿನ್ ಕುಮಾರ್ ಕಟೀಲ್ ಪಕ್ಷ ನಿಂತ ನೀರಾಗಬಾರದು, ಹೊಸ ಮುಖಗಳು ಬರುತ್ತಿರಬೇಕು, ನಾನು ಪಕ್ಷ ಗುಡಿಸಿ ಒರೆಸು ಅಂತ ಹೇಳಿದ್ರೂ ಮಾಡ್ತೇನೆ ಅಂತ ಹೇಳಿದ್ದರು. ಆದ್ರೆ ಇದೀಗ ಪಕ್ಷ ಅವರಿಗೆ ಕೇರಳದ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಪಕ್ಷದಲ್ಲಿ ದೊಡ್ಡ ಜವಾಬ್ದಾರಿಯನ್ನೇ ನೀಡಿದೆ.
LATEST NEWS
ಪ್ರತಾಪ್ ಸಿಂಹ ಬದಲು ಒಡೆಯರ್ ಯಾಕೆ..!? ರಾಜ್ಯಾಧ್ಯಕ್ಷರು ಹೇಳಿದ್ದೇನು?
ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರಿನಿಂದ ಯದುವೀರ್ ಕೃಷ್ಣದತ್ತ ಒಡೆಯರ್ಗೆ ಟಿಕಿಟ್ ನೀಡಿ, ಪ್ರತಾಪ್ ಸಿಂಹರಿಗೆ ಕೋಕ್ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಠಿಮಾಡಿತ್ತು ಎಂದರೆ ತಪ್ಪಾಗಲ್ಲ.
ಈ ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆಯ ಅಂತರದಿಂದ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿಯಾಗಿರುವ ಯದುವೀರ್ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಜನರಿಗಾಗಿ ಕೆಲಸ ಮಾಡುತ್ತಾ ಹಿಂದಿನ ಹತ್ತು ವರ್ಷಗಳ ಕಾಲ ಈ ಭಾಗದ ಕ್ರಿಯಾಶೀಲ ಸಂಸದರಾಗಿ ಪ್ರತಾಪ್ ಸಿಂಹ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗದೆ ಯದುವೀರ್ ಅವರಿಗೆ ಟಿಕೆಟ್ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ನಾಯಕರು ಪ್ರತಾಪ್ ಸಿಂಹ ಅವರ ಬಗ್ಗೆ ಬೇರೆ ಏನಾದರೂ ಯೋಚನೆ ಮಾಡಿರುತ್ತಾರೆ. ಪ್ರತಾಪ್ ಸಿಂಹ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ವಿಜಯೇಂದ್ರ ಹೇಳಿದರು.
FILM
ಕೊನೆಗೂ ಸಿಕ್ಕೇ ಬಿಡ್ತು “ಸಮಂತಾ-ನಾಗಚೈತನ್ಯ” ಡಿವೋರ್ಸ್ ಗುಟ್ಟು..!! ಇದೇ ಕಾರಣನಾ?
ಟಾಲಿವುಡ್ ಟಾಪ್ ನಟಿ ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ ದೇಶದೆಲ್ಲೆಡೆ ಸದ್ದುಮಾಡಿತ್ತು. ಇದೀಗ ಇವರಿಬ್ಬರ ವಿಚ್ಚೇದನಕ್ಕೆ ಸ್ಪಷ್ಟ ಕಾರಣವೊಂದು ಹೊರಬಿದ್ದಿದೆ. ಹೌದು, ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ.. “ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ” ಎಂದ ನಟಿ ಅದಿತಿ ಪ್ರಭುದೇವ; ಏನದು ಗೊತ್ತಾ!?
ಹಲವು ವರ್ಷಗಳ ಹಿಂದೆ ಬಹಳ ಅದ್ಧೂರಿಯಾಗಿ ಕುಟುಂಬ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸಿನಿ ಇಂಡಸ್ಟ್ರಿಯಲ್ಲಿ ಇರುವ ಅನೇಕರ ಫೇವರೆಟ್ ಕಪಲ್ಗಳಲ್ಲಿ ಇವರೂ ಕೂಡಾ ಆಗಿದ್ದರು. ಆದರೆ ವರ್ಷ ಕಳೆದರೂ ಅವರಿಬ್ಬರು ಪ್ರತ್ಯೇಕಗೊಳ್ಳಲು ಕಾರಣ ತಿಳಿದು ಬಂದಿರಲಿಲ್ಲ. ಸಮಂತಾ – ನಾಗಚೈತನ್ಯ ಸ್ಟಾರ್ ನಟರಾಗಿದ್ದು, ಇವರಿಬ್ಬರ ವಿಚ್ಚೇದನಕ್ಕೆ ಹಲವು ಊಹಾಪೋಹಗಳು ಹರಿದಾಡುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಂತೂ ಈ ಮುದ್ದಾದ ಜೋಡಿ ಮತ್ತೆ ಒಂದಾಗಬೇಕು ಎಂದು ಬೇಡಿಕೊಂಡವರೆಷ್ಟೋ.
ಫೋನ್ ಟ್ಯಾಪಿಂಗ್ ಇವರಿಬ್ಬರಿಗೆ ಮುಳುವಾಯಿತಾ..!
ಆದರೆ ಇದೀಗ ಮೂರು ವರ್ಷಗಳ ಬಳಿಕ ಇವರಿಬ್ಬರ ವಿಚ್ಚೇದನಕ್ಕೆ ಕಾರಣ ತಿಳಿದು ಬಂದಿದೆ. ತೆಲಂಗಾಣ ರಾಜಕೀಯದಲ್ಲಿ ಭಾರಿ ಅಲೆಗಳನ್ನು ಎಬ್ಬಿಸಿರುವ ಫೋನ್ ಟ್ಯಾಪಿಂಗ್ನಿಂದಲೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಫೋನ್ ಟ್ಯಾಪಿಂಗ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ತೆಲುಗು ಚಿತ್ರರಂಗದ ತಾರಾ ಜೋಡಿಯೊಂದರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣವಾಗಿದೆ ಎಂಬ ಅಂಶ ಹರಿದಾಡುತ್ತಲೇ ಇತ್ತು. ಆದರೆ ಆ ತಾರಾ ಜೋಡಿ ಯಾರೆಂಬುದು ಬೆಳಕಿಗೆ ಬಂದಿರಲಿಲ್ಲ. ಆ ತಾರಾ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.