ಪುತ್ತೂರು: ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಸುಮಾರು 26 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ನಗರ ಠಾಣೆಯಲ್ಲಿ ದರೋಡೆ ಪ್ರಕಣವೊಂದರಲ್ಲಿ ದಾಖಲಾದ ಪ್ರಕರಣವೊಂದರ ಆರೋಪಿ ಜೊಡ್ ಸನ್ ಎಂಬಾತ ಸುಮಾರು 26 ವರ್ಷದಿಂದ ತಲೆ ಮರೆಸಿಕೊಂಡಿದ್ದನು.
ಈತ ಕೇರಳದ ಎರ್ನಾಕುಲಂ ವರುಪುಝ ಪುತ್ತನ್ ಪಲ್ಲಿ ಕೈತಡ್ಕ ಚಾಲಿ ಎಂಬಲ್ಲಿ ಪ್ರಸ್ತುತ ವಾಸ್ತವ್ಯವಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎ.ಎಸ್.ಐ ಚಂದ್ರ, ಹೆಚ್.ಸಿ ಪರಮೇಶ್ವರ ಮತ್ತು ಹೆಚ್.ಸಿ ಜಗದೀಶ್ ಅವರು ನಿನ್ನೆ ಬಂಧಿಸಿ,
ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.