ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಾಲ್ ನಬಿಝಾದ ಮತ್ತು ಅವರ ಅಂಗರಕ್ಷಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕಾಬೂಲ್ : ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಾಲ್ ನಬಿಝಾದ ಮತ್ತು ಅವರ ಅಂಗರಕ್ಷಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರಕಾರವಿದ್ದಾಗ ಸಂಸತ್ ಸದಸ್ಯೆಯಾಗಿದ್ದ ಮುರ್ಸಾಲ್ರನ್ನು ಅವರ ಮನೆಯಲ್ಲಿಯೇ ಶನಿವಾರ ತಡರಾತ್ರಿ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ.
ದಾಳಿಯಲ್ಲಿ ಅವರ ಅಂಗರಕ್ಷಕನೂ ಮೃತಪಟ್ಟಿದ್ದು ಮುರ್ಸಾಲ್ ಅವರ ಸಹೋದರ ಗಾಯಗೊಂಡಿದ್ದಾನೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತಕ್ಷಣ ತನಿಖೆ ಆರಂಭಿಸಲಾಗಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝದ್ರಾನ್ ಹೇಳಿದ್ದಾರೆ.
ಅಫ್ಘಾನ್ನ ಪೂರ್ವದಲ್ಲಿರುವ ನಂಗರ್ಹಾರ್ ಪ್ರಾಂತದವರಾದ 32 ವರ್ಷದ ಮುರ್ಸಾಲ್ 2018ರಲ್ಲಿ ಸಂಸತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದರು.
2021ರಲ್ಲಿ ಅಫ್ಘಾನ್ನ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಅವರಿಗೆ ಸುರಕ್ಷಿತವಾಗಿ ದೇಶದಿಂದ ಹೊರಹೋಗುವ ಆಯ್ಕೆ ನೀಡಿದ್ದರೂ ಅದನ್ನು ತಿರಸ್ಕರಿಸಿ ದೇಶದಲ್ಲೇ ನೆಲೆಸಿದ್ದವರು.