Monday, October 18, 2021

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಯುಎಇಯಲ್ಲಿ ಪತ್ತೆ: ‘ಹೆಲಿಕಾಫ್ಟರ್​ನಲ್ಲಿ ಹಣ ತಂದಿದ್ದು ಸುಳ್ಳು’ ಎಂದ ಘನಿ

ಹೊಸದಿಲ್ಲಿ: ತಾಲಿಬಾನ್ ಪಡೆ ಅಫ್ಘಾನಿಸ್ತಾನ ಸ್ವಾಧೀನಪಡಿಸಿಕೊಂಡ ಬೆನ್ನಿಗೇ ದೇಶ ಬಿಟ್ಟು ಪಲಾಯನ ಮಾಡಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪ್ರತ್ಯಕ್ಷರಾಗಿದ್ದಾರೆ.


‘ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಅವರ ಕುಟುಂಬವನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಲಾಗಿದೆ ಎಂದು ಯುಎಇ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ತಿಳಿಸಿದೆ.

“ತಾಲಿಬಾನ್‌ಗಳು ಗೆದ್ದಿದ್ದಾರೆ” ಹಾಗೂ “ರಕ್ತಪಾತದ ಪ್ರವಾಹ” ವನ್ನು ತಪ್ಪಿಸಲು ದೇಶ ಬಿಟ್ಟು ಬಂದಿದ್ದೇನೆ ಎಂದು ರವಿವಾರ ಅಫ್ಘಾನಿಸ್ತಾನವನ್ನು ತೊರೆದಿರುವ ಘನಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

‘ಅಪ್ಘನ್​ಗೆ ಮರಳಲು ಯೋಚಿಸುತ್ತಿದ್ದೇನೆ’
ಇನ್ನು ಅಫ್ಘಾನಿಸ್ತಾನವನ್ನು ತಾಲಿಬಾನ್​ಗಳು ವಶಪಡಿಸಿಕೊಳ್ಳುತ್ತಿದ್ದಂತೆ ದೇಶ ಬಿಟ್ಟು ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ, ಫೇಸ್​ಬುಕ್​ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ಸದ್ಯಕ್ಕೆ ಎಮಿರೇಟ್ಸ್‌ನಲ್ಲಿದ್ದು ಶೀಘ್ರದಲ್ಲೇ ದೇಶಕ್ಕೆ ವಾಪಸಾಗುವ ಸುಳಿವು ಕೊಟ್ಟಿದ್ದಾರೆ.

ಜೊತೆಗೆ ಹಮೀದ್ ಕರ್ಜೈ ತಾಲಿಬಾನಿಗಳ ಜೊತೆ ನಡೆಸುತ್ತಿರುವ ಮಾತುಕತೆಯನ್ನು ಸ್ವಾಗತಿಸಿ ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ.
‘ಹೆಲಿಕಾಫ್ಟರ್​ನಲ್ಲಿ ಹಣ ತಂದಿದ್ದು ಸುಳ್ಳು’
25 ವರ್ಷಗಳ ಹಿಂದೆ ತಾಲಿಬಾನಿಗಳು ನಡೆಸಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು ಅನ್ನೋ ಉದ್ದೇಶದಿಂದ ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದಲ್ಲ. ದೇಶದ ಸುರಕ್ಷತೆಯನ್ನು ಭದ್ರತಾ ಪಡೆಗಳಿಗೆ ವಹಿಸಿ ದೇಶ ತೊರೆದೆ.

ದೇಶ ಬಿಟ್ಟು ಬರುವಾಗ ಬಟ್ಟೆ ಬಿಟ್ರೆ ಬೇರೇನನ್ನೂ ತಂದಿಲ್ಲ. ಕಾರು, ಹೆಲಿಕಾಪ್ಟರ್ ತುಂಬ ಹಣ ತೆಗೆದುಕೊಂಡು ಬಂದಿದ್ದೇನೆ ಅನ್ನೋದು ಸತ್ಯಕ್ಕೆ ದೂರವಾದದ್ದು.

ಸದ್ಯಕ್ಕೆ ಎಮಿರೇಟ್ಸ್‌ನಲ್ಲಿದ್ದು ಶೀಘ್ರದಲ್ಲೇ ದೇಶಕ್ಕೆ ವಾಪಸಾಗುವ ಕುರಿತು ಯೋಚಿಸುತ್ತಿದ್ದೇನೆ.
ಅಶ್ರಫ್ ಘನಿ, ಅಫ್ಘಾನಿಸ್ತಾನದ ಅಧ್ಯಕ್ಷ

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...