Connect with us

    LATEST NEWS

    ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆ; ಉತ್ಪಾದನಾ ಘಟಕಗಳಿಗೆ ನೋಟಿಸ್

    Published

    on

    ಬೆಂಗಳೂರು: ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಪತ್ತೆಯಾಗಿದೆ.

    ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ, ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಬಳಕೆ ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರ ರಾಜ್ಯದಲ್ಲಿ ತಯಾರಾಗುವ ಖಾಸಗಿ ತುಪ್ಪದ ಮಾದರಿ ಪರೀಕ್ಷೆಗೆ ಸೂಚಿಸಿತ್ತು. ಪರೀಕ್ಷೆ ವೇಳೆ ರಾಜ್ಯದ ಎರಡು ಘಟಕಗಳಲ್ಲಿ ತಯಾರಾಗುವ ತುಪ್ಪ ಕಲಬೆರಕೆ ತುಪ್ಪ ಎಂಬುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು. ಈ ವೇಳೆ ರಾಜ್ಯದ ಎರಡು ಕಡೆ ಕಲಬೆರಕೆ ತುಪ್ಪ ಕಂಡುಬಂದಿದೆ.

    ಬೆಂಗಳೂರು ಹಾಗೂ ಬಾಗಲಕೋಟೆಯ ಘಟಕದಲ್ಲಿ ತಯಾರಾಗುವ ತುಪ್ಪ ಸುರಕ್ಷಿತ ಇಲ್ಲ ಎಂಬುದು ತಿಳಿದುಬಂದಿದೆ. ಆಹಾರ ಇಲಾಖೆ ವರದಿ ಹಿನ್ನೆಲೆಯಲ್ಲಿ ಎರಡೂ ಘಟಕಗಳಿಗೆ ನೋಟಿಸ್ ನೀಡಲಾಗಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚನೆ ನೀಡಿದೆ. ಮೈಸೂರು ಲ್ಯಾಬ್‌ನಲ್ಲಿ ಖಚಿತತೆಯ ಪರೀಕ್ಷೆ ನಡೆಸಲಾಗುತ್ತಿದೆ.

    DAKSHINA KANNADA

    300 ಕೋಟಿ ವಂಚನೆ..!ಮಥುರಾ ಕೃಷ್ಣ ದೇವಸ್ಥಾನದಲ್ಲಿದ್ದ ಆರೋಪಿಯ ಬಂಧನ..!

    Published

    on

    ಮಂಗಳೂರು/ಮುಂಬೈ : ಮಥುರಾ ಕೃಷ್ಣ ಗೋಪಾಲ ದೇವಸ್ಥಾನದ ವೃಂದಾವನದ ಮಹಾಂತ ಎಂದು ಜನರನ್ನು ವಂಚಿಸಿ 300 ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಥುರಾ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆಯಲ್ಲಿ ಮಂಹಾಂತನ ಸೋಗಿನಲ್ಲಿದ್ದ ಆರೋಪಿ ವಿಶ್ವನಾಥ ಶಿಂಧೆಯನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಯಾಗಿದ್ದ ವಿಶ್ವನಾಥ ಶಿಂಧೆ, ಜಿಜಾವು ಮಾಸಾಹೇಬ್‌ ಮಲ್ಟಿ ಸ್ಟೇಟ್ ಬ್ಯಾಂಕ್‌ ನ ಠೇವಣಿದಾರರಿಗೆ 300 ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ. ಈ ನಕಲಿ ಮಹಾಂತ ಶಿಂಧೆಗಾಗಿ ಅನೇಖ ದಿನದಿಂದ ಬೀಡ್ ಪೊಲೀಸರು ಹುಡುಕಾಟ ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶದ ಮಥುರಾ ಕೃಷ್ಣ ಗೋಪಾಲ ದೇವಸ್ಥಾನದಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕಿತ್ತು. ಮಥುರಾದ ಶಿವಾಜಿನಗರ ಪೊಲೀಸರ ಸಹಾಯ ಪಡೆದ ಬೀಡ್ ಪೊಲೀಸರು ದೇವಸ್ಥಾನಕ್ಕೆ ದಾಳಿ ನಡೆಸಿದ್ದು ಈ ವೇಳೆ ಕೊಠಡಿಯೊಂದರಲ್ಲಿ ವಿಶ್ವನಾಥ ಶಿಂಧೆ ಅಡಗಿ ಕುಳಿತಿದ್ದ. ಆತ ಬಂಧನದ ಬಳಿಕ ಮಥುರಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡು ಆರೋಪಿಯನ್ನು ಮುಂಬೈಗೆ ಕರೆತರಲಾಗಿದೆ. ಆರೋಪಿಯು ಈ ಹಿಂದೆ ಕೂಡಾ ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    Continue Reading

    LATEST NEWS

    ಯುರೋಪ್ ದೇಶಕ್ಕೂ ಕಾಲಿಟ್ಟ ಯಕ್ಷಧ್ರುವ ಪಟ್ಲ ಫೌಂಡೇಶನ್

    Published

    on

    ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಅಮೆರಿಕಾದಲ್ಲಿ ಪಸರಿಸಿ ಅಲ್ಲಿನ ಜನರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾಡಿತ್ತು. ಪಟ್ಲ ಸತೀಶ್ ಸೇರಿದಂತೆ ತಂಡದ 9 ಕಲಾವಿದರು ಸುಮಾರು 75 ದಿನಗಳ ಕಾಲ ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನದ ಜೊತೆ ಕಾರ್ಯಾಗಾರ ನಡೆಸಿದ್ದರು.

    ಇದೀಗ ಯಕ್ಷಧ್ರುವ ಪಟ್ಲ ಫೌಂಡೇಶನ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದು, ಯುರೋಪ್ ದೇಶದಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದೆ. ಅಕ್ಟೋಬರ್ 3 ರಂದು ಜರ್ಮನಿಯ ಮ್ಯೂನಿಕ್ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಯೂರೋಪ್ ಘಟಕ ಉದ್ಘಾಟನೆಗೊಳ್ಳಲಿದೆ.

    ಮ್ಯೂನಿಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ರಾಜೀವ್ ಚಿತ್ಕರ್, ನಿವೃತ್ತ ಎಮಿನೆಂಟ್ ಇಂಡೋಲಜಿಯ ಪ್ರೋಫೆಸರ್ ಡಾ.ರೋಬಾರ್ಟ್, ಸನಾತನ ಅಕಾಡೆಮಿಯ ಸಂಸ್ಥಾಪಕರಾದ ಡಾ.ಅನೂಷ್ ನಾಗರಾಜ್ ಶಾಸ್ತ್ರಿ , ಸಿರಿಗನ್ನಡ ಕೂಟ ಮ್ಯೂನಿಕ್ ಇದರ ಅಧ್ಯಕ್ಷರಾದ ಶ್ರೀಧರ್ ಲಕ್ಷ್ಮಾಪುರ್, ಹಾಗೂ ರೈನ್ ಮೈನ್ ಕನ್ನಡ ಸಂಘ ಜರ್ಮನಿ ಇದರ ಅಧ್ಯಕ್ಷರಾದ ವೇದಮೂರ್ತಿ ಕುಮಾರ್ ಅವರು ಈ ಜರ್ಮನಿ ಘಟಕದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಮಕ್ಕಳ ತಂಡದಿಂದ ಮಾಯಾಮೃಗ ಎಂಬ ಕಥಾ ಪ್ರಸಂಗದ ಪ್ರದರ್ಶನ ಕೂಡಾ ಆಯೋಜಿಸಲಾಗಿದೆ. ಜೊತೆಗೆ ಯಕ್ಷಗಾನದ ಬಣ್ಣಗಾರಿಕೆ, ನೃತ್ಯ, ಹಿಮ್ಮೇಳದ ಬಗ್ಗೆ ಪ್ರಾತಿಕ್ಷಿಕೆ ಕೂಡಾ ನಡೆಸಲಾಗುವುದು.

    Continue Reading

    LATEST NEWS

    35 ರ ಆಸುಪಾಸಿನವರೇ ಈತನ ಟಾರ್ಗೆಟ್; 17 ಮಹಿಳೆಯರಿಗೆ ವಂಚಿಸಿದಾತ ಪೊಲೀಸ್ ಬಲೆಗೆ!

    Published

    on

    ಮಂಗಳೂರು/ನೋಯ್ಡಾ : ದುಡಿದು ತಿನ್ನುವ ವಯಸ್ಸಿನಲ್ಲೂ ಕುಳಿತು ತಿನ್ನಲು ಬಹಳ ಜನ ನಾನಾ ರೀತಿಯ ಸಂಚು ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ ಸಲ್ಲದ ಅನ್ಯ ಮಾರ್ಗವನ್ನು ಹುಡುಕುವವರ ಸಂಖ್ಯೆ ಬೆಳೆಯುತ್ತಿದೆ. ಇಲ್ಲೊಬ್ಬ ವ್ಯಕ್ತಿ ಲಕ್ಷ ಲಕ್ಷ ಸಂಬಳ ಬರೋ ಕೆಲಸ ಕಳೆದುಕೊಂಡ ಬಳಿಕ ಸುಲಭದಲ್ಲಿ ಹಣ ಮಾಡಬೇಕೆಂದು ಮ್ಯಾಟ್ರಿಮೋನಿ ಸೈಟ್ಗಳಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿ ಹಣ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.


    ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ 1.37 ಲಕ್ಷ ಸಂಬಳ ಬರುವ ಕೆಲಸ ಮಾಡ್ತಿದ್ದ ರಾಹುಲ್ ಚತುರ್ವೇದಿ ಎಂಬ ಖತರ್ನಾಕ್ ಖಿಲಾಡಿ ಕೆಲಸ ಕಳೆದುಕೊಂಡ ಬಳಿಕ ಸುಲಭ ದಾರಿಯಲ್ಲಿ ಹಣ ಗಳಿಸಲು ಮ್ಯಾಟ್ರಿಮೋನಿ ಸೈಟ್ಗಳಲ್ಲಿ ನಕಲಿ ಖಾತೆ ತೆರೆದಿದ್ದಾನೆ. 35 ರ ಆಸುಪಾಸಿನ ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ದೋಚುತ್ತಿದ್ದ. ಈವರೆಗೆ ಈತ ಮದುವೆಯಾಗುವುದಾಗಿ ನಂಬಿಸಿ ಸುಮಾರು 17 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ ಎಂದು ವರದಿಯಾಗಿದೆ.
    ವಂಚನೆಗೊಳಗಾದ ಮಹಿಳೆಯೊಬ್ಬಳು ದೂರು ನೀಡಿದ ಆಧಾರದ ಮೇಲೆ ಈ ಖದೀಮನನ್ನು ಬಂಧಿಸಲಾಗಿದೆ. ʼ39 ವರ್ಷದ ರಾಹುಲ್ ಚತುರ್ವೇದಿ ವಿವಿಧ ಮ್ಯಾಟ್ರಿಮೋನಿ ವೆಬ್ಸೈಟ್ಗಳಲ್ಲಿ ನಕಲಿ ಖಾತೆಯನ್ನು ತೆರೆದು ಸುಮಾರು 35 ರ ಆಸುಪಾಸಿನ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬಲೆಗೆ ಬೀಳಸಿ ಮದುವೆಯಾಗುತ್ತೇನೆಂದು ನಂಬಿಸಿ ಸ್ನೇಹ ಬೆಳೆಸಿ ಕೊನೆಗೆ ವಿವಿಧ ಆಮಿಷವೊಡ್ಡಿ ಆ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ’ ಎಂಬುವುದಾಗಿ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending