Home ಉಡುಪಿ ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟಲಿನೊ ವಿಶ್ವಸುಂದರಿ ಸ್ಪರ್ಧೆಗೆ ಆಯ್ಕೆ..!

ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟಲಿನೊ ವಿಶ್ವಸುಂದರಿ ಸ್ಪರ್ಧೆಗೆ ಆಯ್ಕೆ..!

ಉಡುಪಿ ಮೂಲದ ಆ್ಯಡ್ಲಿನ್ ಕ್ಯಾಸ್ಟಲಿನೊ ವಿಶ್ವಸುಂದರಿ ಸ್ಪರ್ಧೆಗೆ ಆಯ್ಕೆ..!

 

ಉಡುಪಿ :  ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಕುವರಿ ಒಬ್ಬಳ ಸೌಂದರ್ಯದ ಗುಣಗಾನ ನಡೆಯುತ್ತಿದೆ.

ಹೌದು ಮುಂಬಯಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕರಾವಳಿ ಆ್ಯಡ್ಲಿನ್ ಕಾಸ್ತಲಿನೊ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಿಂದಿನ ಆವೃತ್ತಿಯ ವಿಜೇತೆ ವರ್ತಿಕಾ ಸಿಂಗ್ ಅವರು ಆ್ಯಡ್ಲಿನ್ ಕಾಸ್ತಲಿನೊಗೆ ‘ಮಿಸ್ ದಿವಾ ಯುನಿವರ್ಸ್ 2020’ ಕಿರೀಟ ತೊಡಿಸಿದರು.

ಆ್ಯಡ್ಲಿನ್ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಎರಡನೇ ಸ್ಥಾನ ಗಳಿಸಿದ ಜಬಲ್ಪುರದ ಆವೃತಿ ಚೌಧರಿ ಮಿಸ್ ದಿವಾ ಸುಪ್ರನ್ಯಾಷನಲ್ ಹಾಗೂ ಪುಣೆಯ ನೇಹಾ ಜೈಸ್ವಾಲ್  ಮಿಸ್ ದಿವಾ ರನ್ನರ್ ಆಪ್ ಕಿರೀಟಕ್ಕೆ ಭಾಜನರಾಗಿದ್ದಾರೆ.

ಈ ಪೈಕಿ ಆವೃತಿ ಅವರು ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಲಿವಾ ಮಿಸ್ ದಿವಾ ಯುನಿವರ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಭುವನ ಸುಂದರಿ ಬಾಲಿವುಡ್ ನಟಿ ಲಾರಾ ದತ್ತ, ಆಶಾ ಭಟ್, ವಿನ್ಯಾಸಗಾರರಾದ ಶಿವನ್ ಭಾಟಿಯಾ, ನರೇಶ್ ಕುಕ್ರೇಜಾ, ನಿಖಿಲ್ ಮೆಹ್ರಾ, ನಟರಾದ ಯಮಿ ಗೌತಮ್, ಆದಿತ್ಯ ರಾಯ್ ಕಪೂರ್ ಮತ್ತು  ಅನಿಲ್ ಕಪೂರ್ ಭಾಗವಹಿಸಿದ್ದರು.

ಆ್ಯಡ್ಲಿನ್ ಕಾಸ್ತೆಲಿನೋ ಮೂಲತ ಉಡುಪಿ ಜಿಲ್ಲೆಯ ಕೊರಂಗ್ರಪಾಡಿ ನಿವಾಸಿ. ಅಲ್ಫೋನ್ಸಸ್ ಕಾಸ್ತೆಲಿನೋ ಮತ್ತು ಮೀರಾ ಕಾಸ್ತೆಲಿನೋ ದಂಪತಿಯ ಪುತ್ರಿಯಾಗಿದ್ದು ಮುಂಬೈಯಲ್ಲಿ ವಾಸವಾಗಿದ್ದಾರೆ.ಆ್ಯಡ್ಲಿನ್ ಪ್ರಸ್ತುತ ಕುವೈತ್‌ನಲ್ಲಿ ನೆಲೆಸಿದ್ದಾರೆ.

 

ವಿಡಿಯೋಗಾಗಿ..

 

- Advertisment -

RECENT NEWS

ದಕ್ಷಿಣ ಕನ್ನಡದ ಉಳಿದ ಆ 26 ಮಂದಿ ಯಾರು.. ಎಲ್ಲಿ..!?

Corona Breaking :ದಕ್ಷಿಣ ಕನ್ನಡದ ಉಳಿದ ಆ 26 ಮಂದಿ ಯಾರು.. ಎಲ್ಲಿ..!? ಮಂಗಳೂರು: ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಿಂದ 28 ಮಂದಿ ಭಾಗಿಯಾಗಿದ್ದರೆಂಬ ಅಘಾತಕಾರಿ ಅಂಶ ಬಯಲಾಗಿದೆ, ಆ ಪೈಕಿ...

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ...

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ ಪುತ್ತೂರು: ಹತ್ತೂರ ಒಡೆಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅಂದ್ರೆ ಭಯಂಕರ ಗ್ರ್ಯಾಂಡ್ ಆಗಿ ನಡೆಯುತ್ತಿತ್ತು. 'ಪುತ್ತೂರು ಬೆಡಿ' ಅಂದ್ರೆ...

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ‌ ಬೆಳ್ತಂಗಡಿ: ನೆರಿಯ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ...