ಮಂಗಳೂರು: ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆ ಮಂಗಳೂರಿನ ತಲಪಾಡಿ ಚೆಕ್‌ಪೋಸ್ಟ್‌ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿ ಭದ್ರತೆ ಬಗ್ಗೆ ತಪಾಸಣೆ ನೀಡಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಪ್ರಸ್ತುತ ಕೇರಳದಿಂದ ಕಾಸರಗೋಡು ಜಿಲ್ಲೆಯ ಮೂಲಕ ತಲಪಾಡಿ ಗಡಿ ಭಾಗವಾಗಿ ದಿನನಿತ್ಯ ನೂರಾರು ಮಂದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆರ್‌ಟಿಪಿಆರ್ ವರದಿಯನ್ನು ಕಡ್ಡಾಯವಾಗಿ ಮಾಡಿದ್ದಾರೆ. ಆದರೆ ಜಿಲ್ಲಾಡಳಿತದ ಈ ಏಕಾಏಕಿ ನಿರ್ಧಾರವು ಕಾಸರಗೋಡು ಜನತೆಯನ್ನು ಆಕ್ರೋಶಕ್ಕೀಡು ಮಾಡಿದ್ದು, ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಜೊತೆಗೆ ಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ತಲಪಾಡಿ ಗಡಿಯಲ್ಲಿ ಆರ್‌ಟಿಪಿಸಿಆರ್ ವ್ಯವಸ್ಥೆಯನ್ನು ರದ್ದು ಮಾಡಿತ್ತು. ಇದರಿಂದ ಕೆರಳಿದ ಕೆಲವೊಂದು ಸಂಘಟನೆಗಳು ಏಕಾಏಕಿ ನಿನ್ನೆ ಪ್ರತಿಭಟನೆಯನ್ನೂ ನಡೆಸಿ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರವನ್ನೂ ಕೂಗಿದ್ದರು. ಈ ಸಂದರ್ಭ ಪೊಲೀಸರು ಒಬ್ಬ ಕೇರಳಿಗನನ್ನು ವಶಕ್ಕೆ ಪಡೆದಿದ್ದರು. ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಬಳಿಕ ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿಸ್ವಾಗತ್ ಅವರು ಕೇರಳದ ಗಡಿಭಾಗದಲ್ಲಿ ಆರ್‌ಟಿಪಿಆರ್ ವ್ಯವಸ್ಥೆಯನ್ನು ಕಾಸರಗೋಡು ಜಿಲ್ಲಾಡಳಿತದಿಂದ ಮಾಡಿಸಲು ವ್ಯವಸ್ಥೆ ಮಾಡಿದ್ದಾರೆ.