LATEST NEWS
ಪ್ರವೀಣ್ ಪತ್ನಿಯಿಂದ ರಹಸ್ಯ ಮಾಹಿತಿ ಕಲೆ ಹಾಕಿದ ADGP ಅಲೋಕ್ ಕುಮಾರ್
ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ನಿನ್ನೆ ಮಧ್ಯಾಹ್ನ ಭೇಟಿ ನೀಡಿದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು , ಪ್ರವೀಣ್ ಪತ್ನಿ ನೂತನಾ ಅವರಿಂದ ಕೆಲವೊಂದು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡರು.
ಮನೆಗೆ ಆಗಮಿಸಿದ ಅಲೋಕ್ ಕುಮಾರ್ ಅವರು ನೂತನಾ ಜತೆ ಮಾತನಾಡುತ್ತಿದ್ದಂತೆ, ತನಗೆ ನಿಮ್ಮ ಜತೆ ಖಾಸಗಿಯಾಗಿ ಮಾತನಾಡಬೇಕು ಎಂದು ನೂತನಾ ಇಂಗಿತ ವ್ಯಕ್ತಪಡಿಸಿದರು.
ತಕ್ಷಣ ಸಮ್ಮತಿಸಿದ ಅಲೋಕ್ ಕುಮಾರ್ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರನ್ನು ಕರೆದುಕೊಂಡು ಮನೆಯ ಕೋಣೆಯಲ್ಲಿ ನೂತನಾ ಜತೆ ಮಾತನಾಡಿದರು. ಸುಮಾರು ಹತ್ತು ನಿಮಿಷಗಳ ಕಾಲ ತನ್ನಲ್ಲಿದ್ದ ಮಾಹಿತಿಗಳನ್ನು ನೂತನಾ ಪೊಲೀಸ್ ಅಧಿಕಾರಿಗಳ ಜೊತೆ ಹಂಚಿಕೊಂಡರು.
ನಿತ್ಯ ಪತಿಯ ಚಿಕನ್ ಫಾರ್ಮ್‌ಗೆ ಬೆಳಿಗ್ಗೆ, ಸಂಜೆ ಹೋಗುತ್ತಿದ್ದ ನೂತನಾ ಸಂಜೆ ತನ್ನ ಕಾಲೇಜು ಕರ್ತವ್ಯ ಮುಗಿಸಿ ಬಂದ ಬಳಿಕ ರಾತ್ರಿ ಅಂಗಡಿ ಮುಚ್ಚುವವರೆಗೂ ಪತಿಯ ಜೊತೆ ಫಾರ್ಮ್‌ನಲ್ಲಿ ಇರುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬರುತ್ತಿದ್ದ ವ್ಯಕ್ತಿಗಳು ಮತ್ತು ರಹಸ್ಯ ಸಂಗತಿಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಹೊರಬಂದ ಅಲೋಕ್ ಕುಮಾರ್ ಅವರಲ್ಲಿ ಹಿಂದೂ ಸಂಘಟನೆ ಮುಖಂಡರು, ಸ್ಥಳೀಯ ಪೊಲೀಸ್ ಸಿಬ್ಬಂದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ತಕ್ಷಣ ಅಮಾನತು ಮಾಡಬೇಕು ಇಲ್ಲವೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಕ್ರಿಯೆ ನೀಡಿದ ಅಲೋಕ್ ಕುಮಾರ್, ಯಾವ ದಿಕ್ಕನ್ನೂ ತನಿಖೆಯಿಂದ ಹೊರಗಿಡುವುದಿಲ್ಲ. ಎಲ್ಲಾ ರೀತಿಯಿಂದಲೂ ಕುಟುಂಬಕ್ಕೆ ಮತ್ತು ಮೃತರಿಗೆ ನ್ಯಾಯ ಒದಗಿಸುವ ಕೆಲಸವನನ್ಉ ಕಾನೂನು ಚೌಕಟ್ಟಿನಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಪ್ರವೀಣ್ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉಸ್ತುವಾರಿ ಸಚಿವರು, ಎಡಿಜಿಪಿ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ಅದಿಕಾರಿಗಳ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ.
ದ. ಕ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಕಾನೂನು ಸುವ್ಯವಸ್ಥೆ ಮರು ಸ್ಥಾಪಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಳೆದೆರಡು ದಿನಗಳಲ್ಲಿ ಸರಣಿ ಸಭೆ ನಡೆಸಲಾಗಿದೆ.
LATEST NEWS
ಕಟಪಾಡಿ: ಅಂತಾರಾಷ್ಟ್ರೀಯ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಸ್ಟೀಲ್ ನಟ್‌ಗಳ ಶಿವ
ಕಟಪಾಡಿ: ಇಲ್ಲಿನ ಕೋಟೆ ಗ್ರಾಮದ ಮಟ್ಟು ನಿವಾಸಿ ಅಮಿತ್ ಅಂಚನ್ ಅವರು ಸುಮಾರು 7,600 ಸ್ಟೀಲ್ ನಟ್‌ಗಳನ್ನು ಬಳಸಿ 3 ತಿಂಗಳಲ್ಲಿ ನಿರ್ಮಿಸಿದ ಶಿವನ ಮಾದರಿಯ ಲೋಹ ಶಿಲ್ಪ ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿರುತ್ತದೆ.
ಲೋಹದ ನಟ್ ಬಳಸಿ ಅಮಿತ್ ಅಂಚನ್ ನಿರ್ಮಿಸಿರುವ ಈ ಶಿಲ್ಪವು ‘ಯಂಗೆಸ್ಟ್ ಮೇಕ್ ಬಿಗ್ಗೆಸ್ಟ್ ಸ್ಕಲ್‌ಪ್ಚರ್ ಆಫ್ ಲಾರ್ಡ್ ಶಿವ’ ಎಂದು ವರ್ಲ್ಡ್ ರೆಕಾರ್ಡ್‌ನಲ್ಲಿ ಗುರುತಿಸಲ್ಪಟ್ಟಿದೆ. ಈ ಕಲಾಕೃತಿಯು 3.5 ಅಡಿ ಎತ್ತರ 5 ಅಡಿ ಅಗಲ ಹೊಂದಿದೆ.
ಅಮಿತ್ ಅಂಚನ್ ಅವರು ಪ್ರಗತಿಪರ ಕೃಷಿಕ ಮಟ್ಟು ಲಕ್ಷ್ಮಣ್ ಹಾಗೂ ಪ್ರಮೀಳಾ ದಂಪತಿಯ ಪುತ್ರ. ಮೆಕ್ಯಾನಿಕಲ್ ಡಿಪ್ಲೊಮಾ ಮಾಡಿರುವ ಅಮಿತ್ ಅಂಚನ್ ಆರಂಭದಲ್ಲಿ ಮಣ್ಣಿನ ಮೂರ್ತಿ ತಯಾರಿಸಿ ಪ್ರತಿಕೃತಿಯನ್ನು ತೆಗೆದು ಬಳಿಕ 58 ಕಿಲೋ ನಟ್‌ಗಳನ್ನು ಬೆಸುಗೆ ಮಾಡಿ ಶಿವನನ್ನು ನಿರ್ಮಿಸಿದ್ದಾರೆ. ಯುವಕನ ಸಾಧನೆಗೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
LATEST NEWS
ಅಂಡರ್ ಪಾಸ್ ನೀರಿನಲ್ಲಿ ಸಿಲುಕಿದ ಕಾರು: ಬ್ಯಾಂಕ್ ಮ್ಯಾನೇಜರ್, ಕ್ಯಾಶಯರ್ ಮೃ*ತ್ಯು
ನವದೆಹಲಿ: ಜಲಾವೃತಗೊಂಡಿದ್ದ ಅಂಡರ್ ಪಾಸ್ ನೊಳಗೆ ಕಾರು ಚಲಾಯಿಸಿದ ಪರಿಣಾಮ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಶಿಯರ್ ಉಸಿರುಗಟ್ಟಿ ಮೃ*ತಪಟ್ಟಿರುವ ಘಟನೆ ದೆಹಲಿಯ ಫರಿದಾಬಾದ್ ನಲ್ಲಿ ನಡೆದಿದೆ.
ದೆಹಲಿ ಮತ್ತು ನ್ಯಾಷನಲ್ ಕ್ಯಾಪಿಟಲ್ ರೀಜನ್(NCR)ನಲ್ಲಿ ನಿರಂತರ ಮಳೆಯಿಂದಾಗಿ ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಗುರುಗ್ರಾಮ್ ಸೆಕ್ಟರ್ 31ರ ಎಚ್ ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಪುಣ್ಯಶ್ರೇಯ ಶರ್ಮಾ ಮತ್ತು ಕ್ಯಾಶಿಯರ್ ವಿರಾಜ್ ದ್ವಿವೇದಿ ಎಕ್ಸ್ ಯುವಿಯಲ್ಲಿ ಮನೆಗೆ ತೆರಳುತ್ತಿದ್ದರು.
ಅವರು ಹಳೇ ಫರಿದಾಬಾದ್ ರೈಲ್ವೆ ಅಂಡರ್ ಪಾಸ್ ತಲುಪಿದಾಗ, ನೀರು ತುಂಬಿಕೊಂಡಿರುವುದು ಕಂಡಿದ್ದು, ಅದು ಎಷ್ಟು ಪ್ರಮಾಣದ ನೀರು ಎಂಬುದನ್ನು ಊಹಿಸಲು ಅವರು ವಿಫಲರಾಗಿದ್ದರು ಎಂದು ತಿಳಿಸಿದ್ದಾರೆ.
LATEST NEWS
ಪ್ರಧಾನಿ ಕುಟುಂಬಕ್ಕೆ ಹೊಸ ಸದಸ್ಯೆಯ ಆಗಮನ; ದೀಪಜ್ಯೋತಿಗೆ ಮುತ್ತಿಡುವ ವೀಡಿಯೋ ಹಂಚಿಕೊಂಡ ಮೋದಿ
ಮಂಗಳೂರು/ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸಕ್ಕೆ ಹೊಸ ಸದಸ್ಯೆಯ ಆಗಮನವಾಗಿದೆ. ಪ್ರಧಾನಿಯವರ ಮನೆಯ ಆವರಣದಲ್ಲಿರುವ ಹಸು ಕರು ಹಾಕಿದ್ದು, ಆ ಕರುವಿನ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
‘ದೀಪಜ್ಯೋತಿ’ ಆಗಮನ :
ಕರುವಿನ ಹಣೆ ಮೇಲೆ ವಿಶಿಷ್ಟವಾದ ಗುರುತು ಇದ್ದು, ಇದು ಬೆಳಕಿನ ಸಂಕೇತವನ್ನು ಹೋಲುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಗುರುತಿಸಿ, ಪ್ರಧಾನಿ ಮೋದಿ ಅವರು ಕರುವಿಗೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದಾರೆ.
ಪ್ರಧಾನಮಂತ್ರಿಯವರು ಕರುವನ್ನು ಮನೆಯೊಳಗೆ ಕರೆತಂದು ಅದಕ್ಕೆ ಶಾಲು ಹೊದಿಸಿ ಹೂಮಾಲೆ ಹಾಕುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.
‘ನಮ್ಮ ಗ್ರಂಥಗಳಲ್ಲಿ ಗಾವಃ ಸರ್ವಸುಖ ಪ್ರದಾಃ ಎಂದು ಹೇಳಲಾಗಿದೆ. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಮಂಗಳಕರ ಆಗಮನವಾಗಿದೆ. ಪ್ರಧಾನಿ ನಿವಾಸದಲ್ಲಿ ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದ್ದು, ಹಣೆಯ ಮೇಲೆ ಬೆಳಕಿನ ಗುರುತು ಇದೆ. ಹಾಗಾಗಿ ಇದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದೇನೆ’ ಎಂದಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಪ್ರಧಾನಿ ಮೋದಿ ಅವರು ದೀಪ ಜ್ಯೋತಿಯ ಆಗಮನದಿಂದ ಸಂತಸಗೊಂಡಿದ್ದಾರೆ. ಪೋಸ್ಟ್ ಮಾಡಿದ ವೀಡಿಯೋದಲ್ಲಿ, ಪ್ರಧಾನಿ ಮೋದಿ ಅವರು ಕರುವನ್ನು ಪ್ರಾರ್ಥನೆ ಮಾಡಿ ಪ್ರೀತಿಯಿಂದ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಪ್ರಧಾನಿ ಕರುವನ್ನು ಮುದ್ದಾಡುವುದು ಮತ್ತು ಆಟವಾಡುವುದು, ಅದರ ಹಣೆಯ ಮೇಲೆ ಮುತ್ತಿಡುವ ದೃಶ್ಯಗಳನ್ನು ವೀಡಿಯೋ, ಫೋಟೋಗಳಲ್ಲಿ ಕಾಣಬಹುದು.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ