Wednesday, January 27, 2021

ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ..!

ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ

ಉಡುಪಿ: ಕೆಂದ್ರ ಸರಕಾರದ  ಕಾರ್ಮಿಕ ವಿರೋಧಿ ನೀತಿ, ಜನ ವಿರೋಧಿ ನೀತಿಯ ವಿರುದ್ದ , ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವಾಗಿ ಉಡುಪಿಯಲ್ಲಿಯೂ  ಮುಷ್ಕರ ನಡೆಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಮಾ ನೌಕರರ ಸಂಘ ದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಮಾತನಾಡಿ ” ದೇಶದ ಲಕ್ಷ್ಮಿಯಾದ ಎಲ್ .ಐಸಿ ಯನ್ನು  ಸರಕಾರ ಮಾರಲು ಹೊರಟಿದೆ. ಕೆಂದ್ರ ಸರಕಾರ ಕಪ್ಪು ಹಣ ತಂದು ಚಿನ್ನದ ರಸ್ತೆಯನ್ನು ಮಾಡುತ್ತೇನೆ ಎಂದಿತು. ನಿಜವಾಗಿಯೂ ಚಿನ್ನದ ರಸ್ತೆಯನ್ನು ಮಾಡಿ ರಸ್ತೆಯಲ್ಲಿ ನಡೆದಾಡದ ಹಾಗೆ ಮಾಡಿದ್ದಾರೆ.

ಈ ದೇಶದ ಕಪ್ಪು ಹಣ ಬರುತ್ತೆ ಹೇಳಿದರು ಆದರೆ ಕಪ್ಪು ಹಣದ ಲೆಕ್ಕ  ಇವರ ಬಳಿ ಇಲ್ಲ. ಈ ದೇಶದ ಧನಲಕ್ಷ್ಮಿ ಯನ್ನು ಮಾರಲು ಹೊರಟಿದ್ದಾರೆ. 5 ಕೋಟಿ ಬಂಡವಾಳ ದಿಂದ ಬಂದ ಎಲ್. ಐಸಿ ಇವತ್ತು 32 ಲಕ್ಷ ಕೋಟಿಯ ಸಂಸ್ಥೆಯಾಗಿ ಬೆಳೆದಿದೆ. ಇವತ್ತು ಎಲ್.ಐಸಿ ಯ ಸರ್ವಿಸ್ ಇದೆ ಎಂದು ಎಲ್ಲಾ ಸಾರ್ವಜನಿಕರಿಗೆ ಗೊತ್ತಿದೆ ಎಂದರು.

 

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.