Connect with us

FILM

ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ: ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಶ್ವೇತಾ ತಿವಾರಿ

Published

on

ಮುಂಬೈ: ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ “ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ” ಎಂಬ ಹೇಳಿಕೆಯನ್ನು ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನು ಖಂಡಿಸಿರುವ ಮಧ್ಯಪ್ರದೇಶದ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ.

ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣಾ ಖ್ಯಾತಿ ಸೌರಭ್ ರಾಜ್ ಜೈನ್ ಜೊತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯೊಂದರಲ್ಲಿ ಶ್ವೇತಾ ತಿವಾರಿ ನಟಿಸಿದ್ದು,

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇತ್ತೀಚೆಗೆ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಶ್ವೇತಾ, “ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ” (ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೇ) ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ದೇವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಅನೇಕರು ಇದರ ವಿರುದ್ಧ ಕಿಡಿಕಾರಿದ್ದಾರೆ.

FILM

ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟ ‘ಪಾರು’ ಧಾರಾವಾಹಿ ನಟ ‘ಆದಿ’!

Published

on

ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಿದ್ದ ಧಾರಾವಾಹಿಗಳಲ್ಲಿ ‘ಪಾರು’ ಕೂಡಾ ಒಂದು. ಆದಿ – ಪಾರು ಪ್ರೇಮಕಥೆ, ಅಖಿಲಾಂಡೇಶ್ವರಿ ಎಂಬ ಹಿರಿಮೆ ಎಲ್ಲವೂ ಧಾರಾವಾಹಿಯ ಜೀವಾಳವಾಗಿತ್ತು. ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

ಕಿರುತೆರೆಯಲ್ಲಿ ಸುಮಾರು ಆರು ವರ್ಷಗಳ ಈ ಧಾರಾವಾಹಿ ಪ್ರಸಾರವಾಗಿದೆ. ಈ ಧಾರಾವಾಹಿಯಲ್ಲಿ ಪಾರು ಪಾತ್ರದಿಂದ ಮೋಕ್ಷಿತಾ ಪೈ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದರು. ಹಾಗೆಯೇ ಆದಿ ಪಾತ್ರದಿಂದ ನಟ ಶರತ್ ಪದ್ಮನಾಭ್ ಕೂಡ ಅಭಿಮಾನಿಗಳನ್ನು ಗಳಿಸಿದ್ದಾರೆ.

ಜೀ ಕನ್ನಡದಲ್ಲಿ ಬರುತ್ತಿದ್ದ ಪಾರು ಸೀರಿಯಲ್ ಈಗ ಅಂತ್ಯ ಕಂಡಿದೆ. ಈ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಅಂದರೆ ಶರತ್ ಪದ್ಮನಾಭ್ ಹಿರಿತೆರೆ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬೆಳ್ಳಿಪರದೆ ಮೇಲೆ ‘ಆದಿ’

ಹೌದು, ನಟ ಶರತ್ ಪದ್ಮನಾಭ್ ನಾಯಕನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ‘ಅನಿಮಾ’. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ನಿರ್ದೇಶಕ ವರ್ಧನ್ ಎಂ ಎಚ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಅನಿಮಾ’ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.

ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿಮಾ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗಲೇ ಶೂಟಿಂಗ್ ನಡೆಸಲಾಗುತ್ತಿದೆ.

ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ. ಸಿನಿಮಾ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ಶರತ್ ಪದ್ಮನಾಭ್ ಹಂಚಿಕೊಂಡಿದ್ದಾರೆ.


” ಅನಿಮಾ, ನಮ್ಮ ಸಿನಿಮಾ, ನಿಮ್ಮ ಸಿನಿಮಾ ಆಗುವ ಮೊದಲ ಹೆಜ್ಜೆ!! Presenting you the title poster of our movie !! ಒಂದು ರೋಚಕವಾದ ಕಥೆಯನ್ನು ಹೇಳಲು ಆದಷ್ಟು ಬೇಗ ಬರ್ತಾ ಇದೀವಿ !! ನಮ್ಮ ತಂಡಕ್ಕೆ ನಿಮ್ಮ ಬೆಂಬಲವಿರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಅನುಷಾ ಕೃಷ್ಣ ನಾಯಕಿ

ಅನಿಮಾ ಚಿತ್ರದಲ್ಲಿ ಶರತ್ ಪದ್ಮನಾಭ್ ಗೆ ನಾಯಕಿಯಾಗಿ ಅನುಷಾ ಕೃಷ್ಣ ಜೊತೆಯಾಗಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಸಂಗೀತ ಚಿತ್ರಕ್ಕಿದೆ.

Continue Reading

FILM

ಯಶ್ ಅಭಿನಯದ “ಟಾಕ್ಸಿಕ್” ಗೆ ಹಿರೋಯಿನ್‌ ಫಿಕ್ಸ್..!!

Published

on

ಕೆಜಿಎಫ್ ಹಿಟ್ ಬಳಿಕ ಯಶ್ ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ತನಕ ಫ್ಯಾನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಯಶ್ ಜೊತೆ ತೆರೆ ಹಂಚಿಕೊಳ್ಳಲು ಹೀರೋಯಿನ್‌ಗಳು ತುದಿಗಾಲಿನಲ್ಲಿದ್ದಾರೆ. ಯಶ್ ಅಭಿನಯದ ಕೆಜಿಎಫ್-1, ಕೆಜಿಎಫ್-2 ಭಾರೀ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟಾನುಘಟಿ ಆ್ಯಕ್ಟರ್ಸ್ ಗಳನ್ನು ಹೊಂದಿದ್ದ ಸಿನೆಮಾ ದಾಖಲೆಯನ್ನೇ ನಿರ್ಮಿಸಿತ್ತು.

ಕೆಜಿಎಫ್‌ನಲ್ಲಿ ಯಶ್ ಗೆ ಕರಾವಳಿ ಬೆಡಗಿ ಶ್ರೀನಿಧಿ ಶೆಟ್ಟಿ ಹಿರೋಯಿನ್‌ ಆಗಿದ್ದರು. ಬಳಿಕ ಅವರ ಸ್ಟಾರ್ ಬದಲಾಗಿದ್ದು, ಅನೇಕ ಸಿನೆಮಾ ಆಫರ್‌ಗಳು ಕೂಡಾ ಒಲಿದು ಬಂತು. ಇದೀಗ ಯಶ್ ರವರ ‘ಟಾಕ್ಸಿಕ್’ ಸಿನಿಮಾಕ್ಕೆ ಹೀರೋಯಿನ್ ಯಾರಾಗಲಿದ್ದಾರೆ..? ಎಂಬುದು ಚಂದನವನದಲ್ಲಿ ಭಾರೀ ಕುತೂಹಲ ಉಂಟುಮಾಡಿದೆ.

ಯಶ್ ಗೆ ಜೋಡಿಯಾಗಲಿದ್ದಾರ ಸೌತ್ ಸಿನೆಮಾ ನಟಿ..!!

ಟಾಕ್ಸಿಕ್ ಸಿನೆಮಾ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನುಂಟು ಮಾಡಿದೆ.ಯಶ್ ಸಿನೆಮಾ ಅಂದ್ರೆ ಹಾಗೆನೆ.. ಇವರು ಅಭಿನಯಿಸಿರುವ ಎಲ್ಲಾ ಸಿನೆಮಾಗಳು ಸೂಪರ್ ಹಿಟ್. ಟಾಕ್ಸಿಕ್ ನಲ್ಲಿ ಬಾಲಿವುಡ್ ಹಿರೋಯಿನ್‌ ಗಳ ಹೆಸರು ಕೇಳಿಬರುತ್ತಿದೆ. ಹೌದು, ಟಾಕ್ಸಿಕ್ ಸಿನೆಮಾದಲ್ಲಿ ನಾನಿರುವುದಾಗಿ ಸಂದರ್ಶನವೊಂದರಲ್ಲಿ  ಕರೀನಾ ಕಪೂರ್ ರವರು ಖುದ್ದಾಗಿ ಮಾಹಿತಿ ನೀಡಿದ್ದಾರೆ. ಆದ್ರೆ ಹಿರೋಯಿನ್ ಆಗಿ ಅಲ್ಲ. ಸಿನೆಮಾದಲ್ಲಿ ಯಶ್ ರವರ ತಂಗಿಯಾಗಿ ನಟನೆ ಮಾಡಲಿದ್ದಾರೆ.

ಹಿರೋಯಿನ್ ಆಗಿ ಒಂದೆರಡು ಹೆಸರು ಚಂದನವನದಲ್ಲಿ ಓಡಾಡ್ತ ಇದೆ. ಸೌತ್ ಸಿನಿಮಾದ ನ್ಯಾಚುರಲ್ ಬ್ಯೂಟಿ ಕ್ವೀನ್, ಪಡ್ಡೆ ಹೈಕಳ ಮನಕದ್ದ ಮಲರ್ ಯಶ್ ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಾ ಇದೆ. ಹೌದು, ಟಾಕ್ಸಿಕ್‌ ಸಿನೆಮಾದ ರಾಣಿಯಾಗಲಿದ್ದಾರಂತೆ ಸಾಯಿ ಪಲ್ಲವಿ. ಯಶ್ 19ನೇ ಸಿನಿಮಾ ಟಾಕ್ಸಿಕ್​. ಮಲಯಾಳಂ ಡೈರೆಕ್ಟರ್ ಗೀತು ಮೋಹನ​ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯ ಸಿನಿ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿರುವ ಸಿನಿಮಾವಾಗಿದೆ.

 

Continue Reading

DAKSHINA KANNADA

ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ…! ಯಾವ ಕ್ಷೇತ್ರದಿಂದ ಸ್ಪರ್ಧೆ..!?

Published

on

ಕ್ಷಿಣ ಕನ್ನಡ ಜಿಲ್ಲೆಯ ಚೆಲುವೆ…ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸದ್ಯ ರಾಜಕೀಯ ವಲಯದಲ್ಲಿ ಸುದ್ದಿಯಾಗಿದ್ದಾರೆ. ಟಾಲಿವುಡ್‌ನ ಬ್ಯೂಟಿ ಕ್ವೀನ್‌ ಆಗಿ ಮೆರೆದಿದ್ದ ಅನುಷ್ಕಾ ಶೆಟ್ಟಿಗೆ ಇರುವ ದೊಡ್ಡ ಅಭಿಮಾನಿ ಬಳಗ ಕೂಡಾ ಇಂತಹ ಒಂದು ಚರ್ಚೆ ನಡೆಸ್ತಾ ಇದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಅನುಷ್ಕಾ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಈ ಬಾರಿ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ದೊಡ್ಡ ಚರ್ಚೆ ಆರಂಭವಾಗಿದೆ.

ಲೋಕಸಭೆ ಚುನಾವಣೆಯ ಜೊತೆಯಲ್ಲೇ ಆಂಧ್ರ ವಿಧಾನಸಭೆಗೂ ಚುನಾವಣೆ ನಡೆಯುತ್ತಿರುವುದೇ ಈ ಚರ್ಚೆಗೆ ಕಾರಣವಾಗಿದೆ. ಅನುಷ್ಕಾ ಶೆಟ್ಟಿ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಮಾತ್ರವಲ್ಲದೆ, ರಾಜಕೀಯ ವಲಯದಲ್ಲೂ ಚರ್ಚೆ ನಡೆದಿದೆ.

ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದ ಅನುಷ್ಕಾ ಶೆಟ್ಟಿ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ ಅನ್ನೋ ಸುದ್ದಿ ಹರಡಿದೆ. ಬಿಜೆಪಿ ಹಾಗೂ ಟಿಡಿಪಿ ಪಕ್ಷದ ಬೆಂಬಲ ಹೊಂದಿರುವ ಜನಸೇನಾ ಪಕ್ಷದ ಪ್ರಮುಖ ನಾಯಕರ ಜೊತೆ ಅನುಷ್ಕಾ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಅನುಷ್ಕಾ ಜನಸೇನಾ ಪಕ್ಷಕ್ಕೆ ಸ್ಟಾರ್ ಪ್ರಚಾರಕಿಯಾಗಿ ಹೋಗಲಿದ್ದಾರೆ. ಚುನಾವಣೆಗೆ ನಿಲ್ಲೋದು ಸುಳ್ಳು ಸುದ್ದಿ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋದೊಂದು ನಕಲಿ ಸುದ್ದಿ ಎಂದು ಕೆಲ ಸುದ್ದಿ ವಾಹಿನಿಗಳು ಕೂಡಾ ವರದಿ ಮಾಡಿದೆ. ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು, ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ ಹಿಂದಿಗೆ ರಿಮೇಕ್ ಆಗುತ್ತಿದೆ ಝೀ ಕನ್ನಡದ ಫೇಮಸ್‌ ಸೀರಿಯಲ್‌…! ಪ್ರೋಮೋ ರಿಲೀಸ್‌..! 

ಮಲಯಾಳಂ ಸಿನಿಮಾದಲ್ಲಿ ಬಿಝಿ :

‘ಬಾಹುಬಲಿ’ ಸಿನಿಮಾದ ಬಳಿಕ ಅನುಷ್ಕಾ ಶೆಟ್ಟಿ ಭಾರಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಬಾಹುಬಲಿ 2’ ಸಿನಿಮಾದ ಬಳಿಕ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರವೇ ಅನುಷ್ಕಾ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಕಾಮಿಡಿ ಹಾಗೂ ಡ್ರಾಮಾ ಕಥೆಯಾಗಿದ್ದ ಇದು ಪ್ರೇಕ್ಷಕರನ್ನು ರಂಜಿಸಿದೆ.ಇದೀಗ ಅನುಷ್ಕಾ ಶೆಟ್ಟಿ ಮಲಯಾಳಂ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ.

ಮಲಯಾಳಂನಲ್ಲಿ RIAL 5- ಹಾರ‌ರ್ ಸಿನಿಮಾ ಒಂದರಲ್ಲಿ ಅನುಷ್ಕಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅನುಷ್ಕಾ ಶೆಟ್ಟಿ ರಾಜಕೀಯ ಪ್ರವೇಶ ಮಾಡುವ ಬದಲಿಗೆ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರಲಿ ಎಂಬುದು ಅಭಿಮಾನಿಗಳ ಆಶಯ. ಆದ್ರೆ, ಅನುಷ್ಕಾ ರಾಜಕೀಯ ಎಂಟ್ರಿಯನ್ನೂ ತಳ್ಳಿ ಹಾಕಲು ಸಾದ್ಯವಿಲ್ಲ ಅನ್ನೋದು ಸದ್ಯ ಚಾಲ್ತಿಯಲ್ಲಿರುವ ಚರ್ಚಾ ವಿಷಯ.

Continue Reading

LATEST NEWS

Trending