Saturday, May 21, 2022

ಜಾತ್ರೆಯಲ್ಲಿ ಪಿಕ್ ಪಾಕೆಟ್ ಆರೋಪದಲ್ಲಿ ಖ್ಯಾತ ನಟಿ ರೂಪಾ ದತ್ತ ಬಂಧನ..!

ಕೊಲ್ಕೊತ್ತಾ :  ಖ್ಯಾತ ನಟಿ ರೂಪಾ ದತ್ತಾ ಅವರನ್ನು ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಈ ಘಟನೆ ನಡೆದಿದೆ.

ಜೇಬುಗಳ್ಳತನ ಆರೋಪದ ಮೇಲೆ ನಟಿ ರೂಪಾ ದತ್ತಾ ಬಂಧಿತರಾಗಿದ್ದಾರೆ. ವಿಧಾನನಗರ ಉತ್ತರ ಪೊಲೀಸ್ ಠಾಣೆಯ ಮೂಲಗಳ ಪ್ರಕಾರ ನಟಿ ರೂಪಾ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯೊಬ್ಬರು ಡಸ್ಟ್‌ಬಿನ್‌ಗೆ ಚೀಲವನ್ನು ಎಸೆಯುತ್ತಿರುವುದನ್ನು ನೋಡಿದ ಪೊಲೀಸರಿಗೆ ಆಕೆಯ ಬಗ್ಗೆ ಅನುಮಾನ ಬಂದಿತ್ತು. ನಂತರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ನಟಿಯ ಬಳಿ ಅಪಾರ ಪ್ರಮಾಣದ ಹಣ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪೊಲೀಸರು, ನಟಿ ರೂಪಾ ದತ್ತಾರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರೊಂದಿಗೆ ಅವರ ಬ್ಯಾಗ್‌ ಕೂಡ ತಪಾಸಣೆ ನಡೆಸಲಾಗಿದೆ.

ಅದರಲ್ಲಿ ಹಲವು ಹಣದ ಚೀಲಗಳು ಪೊಲೀಸರಿಗೆ ಸಿಕ್ಕಿವೆ. ಮೂಲಗಳ ಪ್ರಕಾರ, ಪೊಲೀಸರು ನಟಿಯಿಂದ 75 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ರೂಪಾ ದತ್ತಾ ಕೆಲವು ವರ್ಷಗಳ ಹಿಂದೆ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಈಗ 75 ಲಕ್ಷ ರೂಪಾಯಿ ಸೇರಿದಂತೆ ಹಲವು ದುಡ್ಡಿನ ಪರ್ಸ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮಹಿಳೆಯನ್ನು ಠಾಣೆಗೆ ಕರೆ ತಂದು ಇಲ್ಲಿ ವಿಚಾರಣೆ ನಡೆಸಿದಾಗ ಜೇಬುಗಳ್ಳತನ ವಿಷಯವನ್ನು ಒಪ್ಪಿಕೊಂಡಿದ್ದಾಳೆ.

ಅಲ್ಲದೆ ಸಾಕಷ್ಟು ಜಾತ್ರೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಜನರ ಪರ್ಸ್ ಕದ್ದಿದ್ದಾಳೆ.

ಈ ವಿಷಯವನ್ನು ನಟಿ ರೂಪಾ ಖುದ್ದಾಗಿ ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಈ ಸುದ್ದಿ ರೂಪಾ ದತ್ತಾ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇಷ್ಟೊಂದು ಜನಪ್ರಿಯ ನಟಿ ಪಿಕ್ ಪಾಕೆಟ್, ಜೇಬುಗಳ್ಳತನಕ್ಕೆ ಇಳಿದಿದ್ದು ಹೇಗೆ ಎಂದು ಪ್ರಶ್ನೆ ಹುಟ್ಟು ಹಾಕಿದೆ.

ಇದು ಯಾರಿಗೂ ಅರ್ಥವಾಗುತ್ತಿಲ್ಲ. ರೂಪಾ ದತ್ತಾ ಅನೇಕ ಚಲನಚಿತ್ರಗಳಲ್ಲಿ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಜೇಬುಗಳ್ಳತನ ಪ್ರಕರಣದಲ್ಲಿ ನಟಿ ರೂಪಾ ಅವರನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪಠ್ಯದಲ್ಲಿ ನಾರಾಯಣಗುರು ಹೆಸರು ಕೈ ಬಿಟ್ಟಿರುವುದು ಮಾನವ ಕುಲಕ್ಕೆ ನೋವಾಗಿದೆ-ಮಾಜಿ ಸಚಿವ ರೈ

ಮಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರು ಕೈ ಬಿಟ್ಟಿರುವುದು ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ನೋವಾಗಿಲ್ಲ. ಸಮಸ್ತ ಮಾನವ ಸಮಾಜಕ್ಕೆ ನೋವು ತರುವಂತಹ ವಿಚಾರ ಎಂದು ಮಾಜಿ ಸಚಿವ...

ಪಶುವೈದ್ಯೆಯ ಅತ್ಯಾಚಾರದ ಆರೋಪಿಗಳ ಎನ್‌ಕೌಂಟರ್‌ ‘ಪೊಲೀಸರ ಸೃಷ್ಟಿ’: ಮಾನವ ಹಕ್ಕುಗಳ ಆಯೋಗ

ಹೊಸದಿಲ್ಲಿ: ತೆಲಂಗಾಣದ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅಮಾನುಷ ಹತ್ಯೆ ಹಾಗೂ ಅದರ ಬಳಿಕ ನಡೆದಿದ್ದ ಆರೋಪಿಗಳ ಎನ್‌ಕೌಂಟರ್‌ 'ಪೊಲೀಸರ ಸೃಷ್ಟಿ' ಎಂದು ಮಾನವ ಹಕ್ಕುಗಳ ಆಯೋಗ ವರದಿಯಲ್ಲಿ ಉಲ್ಲೇಖಿಸಿದೆ.ಎನ್‌ಕೌಂಟ್ ಘಟನೆಯ...

ಬಂಟ್ವಾಳ: ಅಪ್ರಾಪ್ತೆಯ ಮೇಲೆ ಅತ್ಯಾಚಾರ-ಫೊಕ್ಸೋ ಪ್ರಕರಣ ದಾಖಲು

ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗಂಡು ಮಗುವಿನ ಜನ್ಮ ನೀಡಲು ಕಾರಣನಾದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.ಕಿನ್ನಿಗೋಳಿ...