ಅಪ್ಪನ ಜೊತೆ ಮಂಗಳೂರಿಗೆ ಬಂದ ಪೂಜಾ ಹೆಬ್ಬಲಸು ತುಳುವಿನಲ್ಲೇ ಪೆಜಕಾಯಿ ಹಣ್ಣನ್ನು ಸವಿದ ಅದ್ಭುತ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಮಂಗಳೂರು : ಬಹುಭಾಷಾ ನಟಿ ತುಳುನಾಡ ಕುವರಿ ಪೂಜಾ ಹೆಗ್ಡೆ ಇತ್ತೀಚಿನ ದಿನಗಳಲ್ಲಿ ಅನೇಕ ಚಿತ್ರಗಳ ಮೂಲಕ ಸಕತ್ ಸೌಂಡ್ ಮಾಡುತ್ತಿದ್ದಾಳೆ.
ಕರಾವಳಿಯ ತುಳು ಕುಟುಂಬದಲ್ಲಿ ಬೆಳೆದ ಈ ಹುಡುಗಿ ಆಗಾಗ ತನ್ನಿಷ್ಟದ ಮಂಗಳೂರಿಗೆ ಬರುತ್ತಿರುತ್ತಾರೆ.
ಇದೀಗ ಅಪ್ಪನ ಜೊತೆ ಮಂಗಳೂರಿಗೆ ಬಂದ ಪೂಜಾ ಹೆಬ್ಬಲಸು ತುಳುವಿನಲ್ಲೇ ಪೆಜಕಾಯಿ ಹಣ್ಣನ್ನು ಸವಿದ ಅದ್ಭುತ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಅದರ ಜೊತೆ ಏಡಿ ಸುಕ್ಕವನ್ನು ಕೂಡ ಸವಿದಿದ್ದಾರೆ.
ಈ ಬೇಸಿಗೆಯ ಸೀಸನ್‌ನಲ್ಲಿ ಕರಾವಳಿ ಭಾಗದಲ್ಲಿ ಮಾತ್ರ ಸಿಗುವ ಕಾಡು ಹಲಸಿನ(ಪೆಜಕಾಯಿ) ಹಣ್ಣನ್ನು ಟೇಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ತಾನು ಇಷ್ಟ ಪಡುವ ಮಂಗಳೂರು ಖಾದ್ಯ ಮತ್ತು ಕಾಡು ಹಲಸಿನ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟಿಯ ಸರಳತೆಗೆ ಫಿದಾ ಆಗಿದ್ದಾರೆ.