ಕತಾರ್: ಕತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್ ಟೂರ್ನಿಯಲ್ಲಿ ನಟಿ ನೋರಾ ಫತೇಹಿ ವಿಶೇಷವಾದ ಪ್ರದರ್ಶನ ನೀಡಿದ್ದು ಆದರೆ ಅವರು ತಲೆಕೆಳಗಾಗಿ ಭಾರತದ ಧ್ವಜ ಹಾರಿಸಿದ ಪರಿಣಾಮ ಇದೀಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್‌ನ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೋರಾ ಫತೇಹಿ ಹೆಜ್ಜೆ ಹಾಕಿದರು. ಡ್ಯಾನ್ಸ್ ಮಾಡುತ್ತಾ ಭಾರತದ ಧ್ವಜ ಹಾರಿದರು.
ಜೈ ಹಿಂದ್ ಎಂದು ಕೂಗಿದರು. ಆದರೂ ನೋರಾ ಫತೇಹಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ತಿರಂಗಾಗೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.
ನೃತ್ಯ ಮಾಡುವಾಗ ನೋರಾ ಫತೇಹಿ ಭಾರತದ ಧ್ವಜ ಹಾರಿಸಿದರು. ಧ್ವಜ ತೆಗೆದುಕೊಂಡ ನೋರಾ ಮೊದಲು ಸರಿಯಾಗಿ ಹಾರಿಸಿದರು. ಆದರೆ ನಂತರ ತಲೆಕೆಳಗಾಗಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ನಟಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ನೋರಾ ಉಲ್ಟಾ ತಿರಂಗಾ ಹಾರಿಸಿದ ಫೋಟೋ ಶೇರ್ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ನೋರಾ ಫತೇಹಿ ಡ್ಯಾನ್ಸ್ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅನೇಕರು ನೋರಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಇದರ ಜೊತೆಗೆ ತಲೆಕಳಗಾಗಿ ತಿರಂಗಾ ಹಾರಿಸಿ ಟ್ರೋಲ್ ಆಗುತ್ತಿದ್ದಾರೆ.