ಮಂಗಳೂರು/ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್‌ನಲ್ಲಿ ಇರುತ್ತಿದ್ದ ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ.
ಮೃದಂಗ, ತಬಲಾ, ಢೋಲಕ್ , ಢೋಲ್ಕಿ, ಖಂಜರಿ, ಕೋಲ್ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು.
ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್. ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದು.
ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದರು. ಮನೆಯಲ್ಲಿ ಸಂಗೀತದ ವಾತಾವರಣವಿತ್ತು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಬಾಗಿಯಾಗಿದ್ದಾರೆ.
ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ ಎಸ್. ಬಾಲಿ ಅವರದ್ದಾಗಿದೆ. ಶಂಕರನಾಗ್ ಅವರ ಸಂಕೇತ್ ಸ್ಟುಡಿಯೊ ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳನ್ನು ಎದುರಿಸಲು ಬಾಲಿ ಹೆಗಲು ನೀಡಿದರು.
ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರು. ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವದೆಲ್ಲೆಡೆ ಬಾಲಿ ಅವರ ಲಯ ಸಂಗೀತ ಶಾಶ್ವತವಾಗಿ ಮೊಳಗುತ್ತಲೇ ಇದೆ. 1970ರ ದಶಕದಲ್ಲಿ ಬಾಲಿ ಬಹುಬೇಡಿಕೆಯ ವ್ಯಕ್ತಿಯಾಗಿದ್ದರು. ಅವರಿಗ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಮಂಗಳೂರು/ಮುಂಬೈ: ಟಾಲಿವುಡ್ ಖ್ಯಾತ ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಹೊಸ ವರ್ಷದ ಹಿನ್ನೆಲೆ ಕೆಲವು ವಿಶೇಷ ಹಾಗೂ ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ.
ಈ ನಿಟ್ಟಿನಲ್ಲಿ ನಿರ್ದೇಶಕರು 2025 ರಲ್ಲಿ ಅವರ ನಿರ್ಣಯಗಳ ಬಗ್ಗೆ ಹೇಳುವ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದೆಲ್ಲಾ ಸಾಧ್ಯವಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮಾ ಈ ವರ್ಷ ಪ್ರಮುಖ 7 ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಅವರೇ ಟ್ವೀಟ್ ಮಾಡಿದಂತೆ…
ಈ ವರ್ಷ ನಾನು ತೆಗೆದುಕೊಂಡ 7 ನಿರ್ಣಯ
1. ಇನ್ಮುಂದೆ ವಿವಾದಕ್ಕೀಡಾಗದೇ ಇರಲು ನಿರ್ಧರಿಸಿದ್ದೇನೆ
2. ನನಗೂ ಒಳ್ಳೆಯ ಕುಟುಂಬಸ್ಥನಾಗಬೇಕು
3. ನನಗೆ ದೇವರ ಮೇಲೆ ಭಯ ಭಕ್ತಿ ಇದೆ
4. ಇನ್ನು ಮುಂದೆ ಪ್ರತಿ ವರ್ಷ ಸತ್ಯದಂತೆ 10 ಸಿನಿಮಾ ಮಾಡುತ್ತೇನೆ
5. ನಾನು ಯಾರ ಬಗ್ಗೆಯೂ ನಕಾರಾತ್ಮಕ ಟ್ವೀಟ್ ಗಳನ್ನು ಅಥವಾ ಕಾಮೆಂಟ್ ಗಳನ್ನು ಪೋಸ್ಟ್ ಮಾಡುವುದಿಲ್ಲ
6. ನಾನು ಮಹಿಳೆಯರನ್ನು ನೋಡುವುದೇ ಇಲ್ಲ
7. ನಾನು ವೋಡ್ಕಾ ಕುಡಿಯುವುದನ್ನು ಸಹ ನಿಲ್ಲಿಸುತ್ತೇನೆ
ಕೊನೆಗೆ, ‘ಇವನ್ನೆಲ್ಲ ನಾನು ಖಂಡಿತವಾಗಿ ಅನುಸರಿಸುತ್ತೇನೆ ಎಂದು ನಿಮ್ಮೆಲ್ಲರ ಮೇಲೆ ಆಣೆ ಹಾಕುತ್ತೇನೆ’ ಎಂದು ರಾಮ್ ಗೋಪಾಲ್ ವರ್ಮಾ ತಮ್ಮದೇ ಶೈಲಿಯಲ್ಲಿ ಟ್ವಿಸ್ಟ್ ನೀಡಿದ್ದಾರೆ. ಇದರ ಜೊತೆಗೆ ‘ಹೊಸ ವರ್ಷದ ಶುಭಾಶಯಗಳು’ ಎಂದು ಶುಭ ಹಾರೈಸಿದರು.
ಸದ್ಯ ರಾಮ್ ಗೋಪಾಲ್ ವರ್ಮಾ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ಸಿನಿಮಾ ಅಭಿಮಾನಿಗಳು ಹಾಗೂ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ‘ಇದೆಲ್ಲ ಮಾಡೋಕೆ ಆಗಲ್ಲ, ನಿಮ್ಮಿಂದ ಅಲ್ಲ ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಯಾನ್ಸರ್ಗೆ ಸರ್ಜರಿ ಮಾಡಿಸಿಕೊಂಡಿರುವ ಶಿವರಾಜ್ ಕುಮಾರ್ ಅವರು ಫುಲ್ ಹ್ಯಾಪಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಎಲ್ಲ ಟೆಸ್ಟ್ಗಳು ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರು ಫುಲ್ ಖುಷಿಯಾಗಿ ಮಾತನಾಡಿದ್ದಾರೆ. ಅಲ್ಲದೇ ಐ ವಿಲ್ ಬ್ಯಾಕ್, ಮೊದಲಿಗಿಂತ ಎರಡರಷ್ಟು ಪವರ್ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾದಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್ ಅವರು, ಅಭಿಮಾನಿ ದೇವರುಗಳು, ಕೋ ಆರ್ಟಿಸ್ಟ್, ಸಂಬಂಧಿಕರು, ಡಾಕ್ಟರ್ಸ್, ಕಿಮೋ ಮಾಡಿರುವ ಡಾಕ್ಟರ್ ಶಶಿಧರ್, ದಿಲೀಪ್, ಗೀತಾ, ಶ್ರೀನಿವಾಸ್, ನರ್ಸ್ಗಳು ಪ್ರತಿಯೊಬ್ಬರು ಚೆನ್ನಾಗಿ ನೋಡಿಕೊಂಡಿದ್ದರಿಂದ ಧೈರ್ಯವಾಗಿ ಇರುತ್ತಿದ್ದೆ. ಹೀಗಾಗಿಯೇ ಶೂಟಿಂಗ್ ಅನ್ನು ಏನೋ ಒಂದು ಜೋಶ್ನಿಂದ ಮಾಡಿಬಿಡುತ್ತಿದ್ದೆ. ಕಿಮೋದಲ್ಲೇ 45 ಸಿನಿಮಾಗಳ ಶೂಟಿಂಗ್ನಲ್ಲಿ ಫೈಟ್ ಎಲ್ಲ ಮಾಡಿರುವ ಕ್ರೆಡಿಟ್ ರವಿವರ್ಮಾ ಅವರಿಗೆ ಹೋಗಬೇಕು ಎಂದು ಹೇಳಿದ್ದಾರೆ.
ಗೆಳೆಯರಾದ ಶೇಖರ್, ವಿಜಯ್ ಪ್ರಸಾದ್, ನಟ ಅಂತ ಕಸಿನ್ ಒಬ್ಬರು ಜೊತೆಗೆ ಇದ್ದರು. ಗೀತಾ ಅಂತೂ ಯಾವಾಗಲೂ ನನ್ನ ಜೊತೆ ಇರುತ್ತಿದ್ದರು. ಜೀವನದಲ್ಲಿ ಗೀತಾ ಇಲ್ಲ ಅಂದರೆ ಶಿವಣ್ಣ ಇಲ್ಲವೇ ಇಲ್ಲ. ಹೆಂಡತಿ ಸಪೋರ್ಟ್ ಎಷ್ಟು ಇದೆಯೋ ಅಷ್ಟೇ ಮಗಳು ಸಪೋರ್ಟ್ ಕೂಡ ಇದೆ. ಪ್ರಶಾಂತ್, ಅಮೆರಿಕದಲ್ಲಿರುವ ಅನು, ಮಧು, ಮನೋಹರ, ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮಿಯಾಮಿಯ ಕ್ಯಾನ್ಸರ್ ಸೆಂಟರ್ನ ವೈದ್ಯರು, ನರ್ಸ್ಗಳು ಎಲ್ಲರೂ ಸೇರಿ ನನ್ನನ್ನು ಮಗು ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಈಗ ಆರೋಗ್ಯವಾಗಿದ್ದೇನೆ. ವೈದ್ಯರು ಮೊದಲು ಒಂದು ತಿಂಗಳು ನಿಧಾನವಾಗಿ ಇರಬೇಕು ಎಂದು ಹೇಳಿದ್ದಾರೆ. ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್ ಬಿ ಬ್ಯಾಕ್. ಶಿವಣ್ಣ ಆವಾಗ ಹೇಗಿದ್ದನೋ ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್, ಫೈಟ್, ಲುಕ್ ಎಲ್ಲದರಲ್ಲೂ ಇರುತ್ತೆ. ಮತ್ತೆ ನೀವು ನೋಡುತ್ತೀರಾ. ನಿಮ್ಮ ಪ್ರೀತಿ ವಿಶ್ವಾಸ ಯಾವಾತ್ತೂ ಮರೆಯಲ್ಲ, ನಿಮ್ಮ ಆಶೀರ್ವಾದ ಇರುವವರೆಗೂ ನಾನು ಖಂಡಿತಾ ಇದ್ದೆ ಇರುತ್ತೇನೆ. ಎಲ್ಲರಿಗೂ ಫ್ಲೈಯಿಂಗ್ ಕಿಸ್ ಕೊಟ್ಟು ಲವ್ ಯು ಆಲ್, ಹ್ಯಾಪಿ ನ್ಯೂ ಇಯರ್ ಎಂದು ಶಿವಣ್ಣ ವಿಶ್ ಮಾಡಿದ್ದಾರೆ.