Connect with us

    FILM

    ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಹರ್ಷಿಕಾ ಪೂಣಚ್ಚ

    Published

    on

    ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಹೊಸ ಬೇಬಿ ಬಂಪ್  ಫೋಟೋಶೂಟ್‌ವೊಂದನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ನಟಿ ಮುದ್ದಾಗಿ ಪೋಸ್ ನೀಡಿದ್ದಾರೆ. ಈ ಫೋಟೋಸ್ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

    ನೇರಳೆ ಬಣ್ಣದ ಸೀರೆಯುಟ್ಟು ಹರ್ಷಿಕಾ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿರ ಮಿರ ಎಂದು ಮಿಂಚಿದ್ದಾರೆ. ಫೋಟೋದಲ್ಲಿ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ನಟಿಯ ಬ್ಯಾಕ್ ಟು ಬ್ಯಾಕ್ ಬೇಬಿ ಬಂಪ್ ಫೋಟೋಶೂಟ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಹರ್ಷಿಕಾ ಮತ್ತು ಭುವನ್ ದಂಪತಿ ಮೊದಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ಚೊಚ್ಚಲ ಮಗು ಆಗಮನಕ್ಕೆ ದಿನಗಣನೆ ಶುರುವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದಾರೆ.

    DAKSHINA KANNADA

    ಮೊದಲ ಬಾರಿಗೆ ತುಳು ಚಿತ್ರದಲ್ಲಿ ಕಾಣಿಸಲಿದ್ದಾರೆ ಬಹುಭಾಷಾ ನಟ ಸುಮನ್ ತಳವಾರ್

    Published

    on

    ಮಂಗಳೂರು : ತುಳು ಸಿನೆಮಾ ಒಂದಕ್ಕೆ ಬಹುಭಾಷ ನಟ ಸುಮನ್ ತಳವಾರ್ ಬಣ್ಣ ಹಚ್ಚಿದ್ದಾರೆ. ತುಳು ಸಹಿತ ಐದು ಭಾಷೆಯಲ್ಲಿ ಈ ಸಿನೆಮಾ ರಿಲೀಸ್ ಆಗಲಿದ್ದು, ಸುಮನ್ ತಳವಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆತ್ತರ ಕೆರೆ ಎಂಬ ಊರೊಂದರ ಸುತ್ತ ಹೆಣೆಯಲಾದ ಕಥೆ ಇದಾಗಿದ್ದು, ವಿಭಿನ್ನ ಚಿತ್ರಕಥೆಯನ್ನು ಈ ಸಿನೆಮಾ ಹೊಂದಿದೆ. ಮಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸಿನೆಮಾದ ಚಿತ್ರೀಕರಣ ಭರದಿಂದ ಸಾಗಿದೆ.

     

    ಸಿನೆಮಾ ಇಂಡಸ್ಟ್ರೀಯಲ್ಲಿ 46 ವರ್ಷಗಳನ್ನು ಪೂರೈಸಿ 47 ನೇ ವರ್ಷಕ್ಕೆ ಕಾಲಿರಿಸಿರುವ ಸುಮನ್ ತಳವಾರ್ ಮೂಲತಃ ಮಂಗಳೂರಿನವರು. ಆದ್ರೆ ಇವರು ತೆಲುಗು ಚಿತ್ರರಂಗದಲ್ಲಿ ಸುಮಾರು 100 , ತಮಿಳಿನ 50 ಹಾಗೂ ಕನ್ನಡದ 25 ಸಿನೆಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೇಶದ ಹಲವು ಭಾಷೆಗಳ ಸಿನೆಮಾದಲ್ಲಿ ನಟಿಸಿ ಸುಮಾರು 700 ಕ್ಕೂ ಅಧಿಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ತುಳು ಸಿನೆಮಾ ಮಾಡಬೇಕು ಎಂಬ ಇವರ ಹಲವು ವರ್ಷದ ಆಸೆಗೆ ಇದೀಗ ಅವಕಾಶ ದೊರೆತಿದೆ. ಈ ಹಿಂದೆ ಅವಕಾಶ ಸಿಕ್ಕಿದ್ದರೂ ತನಗೊಪ್ಪುವ ಪಾತ್ರ ಸಿಗದ ಕಾರಣ ನಿರಾಕರಿಸಿದ್ದೆ” ಅಂತ ಸುಮನ್ ತಳವಾರ್ ಹೇಳಿದ್ದಾರೆ.

    ನೆತ್ತರ ಕೆರೆ ಎಂಬ ಸಿನೆಮಾದ ಕಥೆ ಹಾಗೂ ಅದರ ಪಾತ್ರ ಮತ್ತು ಸಿನೆಮಾ ತಂಡಕ್ಕೆ ಇರುವ ಬದ್ಧತೆಯನ್ನು ನೋಡಿ ಸಿನೆಮಾ ಒಪ್ಪಿಕೊಂಡಿದ್ದಾಗಿ ಸುಮನ್ ಹೇಳಿದ್ದಾರೆ. ಇದೊಂದು ತುಳು ಸಿನೆಮಾ ಆಗಿದ್ದು, ಈ ಸಿನೆಮವನ್ನು ಲಂಚುಲಾಲ್ ಅವರ ಅಸ್ತ್ರ ಗ್ರೂಪ್ ನಿರ್ಮಾಣ ಮಾಡುತ್ತಿದ್ದು, ಸ್ವರಾಜ್ ಶೆಟ್ಟಿ ಅವರ ನಿರ್ದೇಶನದಲ್ಲಿ ಈ ಸಿನೆಮಾ ಚಿತ್ರೀಕರಣ ನಡೆಯುತ್ತಿದೆ, ಮಂಗಳೂರು ಆಸುಪಾಸಿನಲ್ಲಿ ಈ ಸಿನೆಮಾ ಚಿತ್ರೀಕರಣ ನಡೆಯುತ್ತಿದ್ದು ಸದ್ಯು ಕೆಂಜಾರು ಗುತ್ತು ಮನೆಯಲ್ಲಿ ಚಿತ್ರಿಕರಣ ಭರದಿಂದ ಸಾಗಿದೆ. ಈ ಸಿನೆಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ. ಕೇಂ

    Continue Reading

    FILM

    ಯಶ್ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ

    Published

    on

    ರಾಕಿ ಭಾಯ್ ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಮಕ್ಕಳೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ. ಇದರ ವಿಡಿಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬದ ಆಚರಣೆ ಇದ್ದೇ ಇರುತ್ತದೆ. ಕ್ರಿಸ್ಮಸ್ ಟ್ರೀ ಅನ್ನು ರೆಡಿ ಮಾಡಿಸಿದ್ದು, ಅದರ ಮುಂದೆ ಸಾಂತಾ ಕ್ಲಾತ್ ಡ್ರೆಸ್ ಧರಿಸಿ ಮಕ್ಕಳೊಂದಿಗೆ ರಾಧಿಕಾ ಮಿಂಚಿದ್ದಾರೆ. ಈ ವೇಳೆ, ಯಶ್ ಕೂಡ ಜಾಯಿನ್ ಆಗಿದ್ದಾರೆ. ಕ್ರಿಸ್ಮಸ್ ಹಬ್ಬದ ತಯಾರಿ ಹೇಗಿತ್ತು? ಎಂಬುದರ ಝಲಕ್ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ಯಶ್ ಮತ್ತು ರಾಧಿಕಾ ಪಂಡಿತ್ ‘ಯುಐ’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಉಪೇಂದ್ರ ಕಥೆ ಹೇಳಿರುವ ರೀತಿ ಕಂಡು ಮೆಚ್ಚಿದ್ದರು. ಸಿನಿಮಾದ ಪ್ರಿಮಿಯರ್ ಶೋ ವೇಳೆ, ಸುದೀಪ್ ಮತ್ತು ಯಶ್ ಅನಿರೀಕ್ಷಿತ ಭೇಟಿ ಕೂಡ ಹೈಲೆಟ್ ಆಗಿತ್ತು.

    ಇನ್ನೂ ಯಶ್ ಸಿನಿಮಾ ವಿಚಾರಕ್ಕೆ ಬರೋದಾದ್ರೆ, `ಟಾಕ್ಸಿಕ್’ ಮತ್ತು ಬಾಲಿವುಡ್‌ನ `ರಾಮಾಯಣ’ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ.

    Continue Reading

    FILM

    ಶಿವರಾಜ್​ಕುಮಾರ್​ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ

    Published

    on

    ಶಿವರಾಜ್​ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 24ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ವೇಳೆ ಏನು ಮಾಡಲಾಯಿತು ಎಂಬುದರ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಅಪ್​ಡೇಟ್ ನೀಡಲಾಗಿದೆ.

    ಶಿವರಾಜ್​ಕುಮಾರ್ ಅವರು ಮೊದಲು ಕ್ಯಾನ್ಸರ್ ಇರುವ ವಿಚಾರವನ್ನು ರಿವೀಲ್ ಮಾಡಲಾಗಿರಲಿಲ್ಲ. ಅನಾರೋಗ್ಯ ಎಂದಷ್ಟೇ ಅವರು ಹೇಳಿದ್ದರು. ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಿದರು. ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ಅವರು ಒಪ್ಪಿಕೊಂಡರು. ಶಿವರಾಜ್​ಕುಮಾರ್ ಅವರಿಗೆ ಮೂತ್ರಪಿಂಡದ ಕ್ಯಾನ್ಸರ್ ಇತ್ತು ಎಂಬುದು ನಂತರ ರಿವೀಲ್ ಆಯಿತು.

    ‘ಸದ್ಯ ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನ ತೆಗೆದು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಕರುಳನ್ನು ಬಳಸಿ ಕೃತಕ ಮೂತ್ರ ಪಿಂಡವನ್ನ ಅಳವಡಿಸಲಾಗಿದೆ. ಶಿವರಾಜ್​ಕುಮಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ’ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

    ಶಿವಣ್ಣನ ಆರೋಗ್ಯದ ಬಗ್ಗೆ ಗೀತಕ್ಕ ಕೂಡ ಮಾಹಿತಿ ನೀಡಿದ್ದಾರೆ. ‘ಅಭಿಮಾನಿಗಳು ಹೇಗೆ ದೇವರೋ ಹಾಗೆ ಡಾಕ್ಟರ್ ಕೂಡ ದೇವರ ರೀತಿ ಬಂದಿದ್ದಾರೆ. ಸದ್ಯ ಶಿವರಾಜ್​ಕುಮಾರ್ ಐಸಿಯುನಲ್ಲಿದ್ದಾರೆ. ಎಲ್ಲವೂ ಯಶಸ್ವಿಯಾಗಿದೆ. ಸದ್ಯದಲ್ಲಿಯೇ ಶಿವರಾಜ್​ಕುಮಾರ್ ನಿಮ್ಮ ಬಳಿ ಮಾತನಾಡುತ್ತಾರೆ’ ಎಂದು ಗೀತಾ ಅವರು ಮಾಹಿತಿ ನೀಡಿದ್ದಾರೆ.

    Continue Reading

    LATEST NEWS

    Trending