Home ಸಿನೆಮಾ ಆಹಾ.. ‘ಭಾಮಾ’ನಿಗೆ ಮದ್ವೆಯಂತೆ..!! ಹುಡುಗ ಯಾರು.?

ಆಹಾ.. ‘ಭಾಮಾ’ನಿಗೆ ಮದ್ವೆಯಂತೆ..!! ಹುಡುಗ ಯಾರು.?

ಮುದ್ದಾದ ಮಲ್ಲು ಬೆಡಗಿ ಭಾಮಾ ಹಸೆಮಣೆ ಏರಲು ಸಜ್ಜಾಗಿದ್ದು, ಈಗಾಗಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ನಿನ್ನೆ (ಜನವರಿ 21) ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಉದ್ಯಮಿ ಅರುಣ್ ಎಂಬುವರ ಜೊತೆ ನಟಿ ಭಾಮಾ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕೇರಳ ಮೂಲದ ಉದ್ಯಮಿ ಅರುಣ್ ಕೆನಡಾದಲ್ಲಿ ವ್ಯಾಸಂಗ ಮಾಡಿದ್ದು, ಭಾಮಾ ಅವರ ಹತ್ತಿರ ಸಂಬಂಧಿಗೆ ಅರುಣ್ ಆತ್ಮೀಯ ವ್ಯಕ್ತಿಯಾಗಿದ್ದಾರೆ. ಇದೀಗ ಮನೆಯವರ ಜೊತೆ ಮಾತುಕತೆ ನಡೆಸಿ, ಮದುವೆ ನಿಶ್ಚಯ ಮಾಡಲಾಗಿದೆ.
ಕೊಚ್ಚಿಯಲ್ಲಿ ಕೇರಳ ಸಂಪ್ರದಾಯದಂತೆ ಇದೇ ತಿಂಗಳಲ್ಲಿ ಮದುವೆ ನಡೆಸಲು ಹಿರಿಯರು ನಿಶ್ಚಿಯಿಸಿದ್ದಾರೆ ಎನ್ನಲಾಗಿದೆ. ವಿವಾಹ ಮಹೋತ್ಸವವನ್ನು ಕೂಡ ಖಾಸಗಿಯಾಗಿ ನಡೆಸಲು ಉದ್ಧೇಶಿಸಿದ್ದು, ನಟಿಯ ಸ್ನೇಹಿತರು, ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಲಿದ್ದಾರಂತೆ.

2007ರಲ್ಲಿ ‘ನಿವೇದ್ಯಂ’ ಚಿತ್ರದ ಮೂಲಕ ಮಲಯಾಳಂ ಇಂಡಸ್ಟ್ರಿ ಪ್ರವೇಶಿಸಿದ ನಟಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಬರೀ ಮಾಲಿವುಡ್ ಮಾತ್ರವಲ್ಲದೇ, ಕಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಲಯಾಳಂ ಬಿಟ್ಟರೆ ನಟಿ ಭಾಮಾ ಅತಿ ಹೆಚ್ಚು ಸಿನಿಮಾ ಮಾಡಿದ್ದು ಸ್ಯಾಂಡಲ್ ವುಡ್ ನಲ್ಲಿ. 2010ರಲ್ಲಿ ಯಶ್ ಅಭಿನಯಿಸಿದ್ದ ‘ಮೊದಲ ಸಲ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಭಾಮ ನಂತರ ‘ಶೈಲೂ’, ‘ಆಟೋರಾಜ’, ‘ಬರ್ಫಿ’, ‘ಅಪ್ಪಯ್ಯ’, ‘ಅರ್ಜುನ’, ‘ಅಂಬರ’, ‘ರಾಗ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

RECENT NEWS

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..!

ಎಂ ಆರ್‌ ಪಿ ಎಲ್ ಸಿಐಎಸ್‌ಎಫ್ ಅಧಿಕಾರಿ ಕೊರೊನಾಕ್ಕೆ ಬಲಿ..! ಮಂಗಳೂರು : ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಎಂ ಆರ್‌ ಪಿ ಎಲ್‌...

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..!

ದಕ್ಷಿಣ ಕನ್ನಡದಲ್ಲಿ ಕೊರೊನಾ ಮರಣಮೃದಂಗ : ಇಂದು ಮತ್ತೆ ಎಂಟು ಬಲಿ ಪಡೆದ ಕೊರೊನಾ..! ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಬೆಂಗ್ಳೂರು ಬಳಿಕ ಕರಾವಳಿ ನಗರಿ, ಮಂಗಳೂರು...

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..!

ಕೊರೊನಾ ಸಮುದಾಯಕ್ಕೆ ಹರಡಿರುವುದು ಸತ್ಯ : ಶಾಸಕ ಯು.ಟಿ. ಖಾದರ್..! ಮಂಗಳೂರು : ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ. ಆದ್ದರಿಂದ ಶೀಘ್ರದಲ್ಲೇ ರಾಂಡಮ್ ಟೆಸ್ಟ್‌ ಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ರಾಂಡಂ ಟೆಸ್ಟ್‌...

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..!

ಕೊರೊನಾ ಸೊಂಕಿನ ಭೀತಿ- ಸ್ವಯಂ ಲಾಕ್‌ ಡೌನ್ ಘೋಷಿಸಿದ ಪುದು ಗ್ರಾಮ ಪಂಚಾಯತ್..! ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಜನ ಸಾಮಾನ್ಯರಲ್ಲಿ ಚಳಿ ಕೂರಿಸಿದೆ. ಕಳೆದ...
error: Content is protected !!