Connect with us

    DAKSHINA KANNADA

    ಕಟೀಲು ಕ್ಷೇತ್ರಕ್ಕೆ ಕುಟುಂಬ ಸಮೇತ ನಟಿ ಅಮೂಲ್ಯ ಭೇಟಿ

    Published

    on

    ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟಿ ಅಮೂಲ್ಯ ಕುಟುಂಬ ಸಮೇತ ಭೇಟಿ ನೀಡಿದರು.

    ದೇವಳದ ವತಿಯಿಂದ ಅಮೂಲ್ಯಗೆ ಶ್ರೀ ದೇವರ ಶೇಷ ವಸ್ತ್ರ ಪ್ರಸಾದವನ್ನು ಅರ್ಚಕ ಕಮಲಾದೇವಿ ಪ್ರಸಾದ್ ಅಸ್ರಣ್ಣ ನೀಡಿದರು. ನಂತರ ಕಟೀಲು ಅನೆ ಮಹಾಲಕ್ಷಿ ಜೊತೆ ಅಮೂಲ್ಯ ಸ್ವಲ್ಪ ಹೊತ್ತು ಕಳೆದರು.

    ಇದನ್ನೂ ಓದಿ: ಮಂಗಳೂರು : ಕರಾವಳಿಯಲ್ಲಿ ಅಬ್ಬರಿಸಿದ ಫೆಂಗಲ್ ಚಂಡಮಾರುತ !!

    ದೇವಳದಲ್ಲಿ ಅನ್ನ‌ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

    DAKSHINA KANNADA

    ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ

    Published

    on

    ಉಳ್ಳಾಲ: ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರವು ಪ್ರಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್ ನಟ , ನಿರ್ದೇಶಕ ಉಪೇಂದ್ರ ಹೇಳಿದರು.

    ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿಸೆಂಬರ್ 20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ ಯುಐ ಸಿನೆಮಾದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.

    ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ. ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪ್ರಕೃತಿ ರಮಣೀಯವಾಗಿದೆ. ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು.  ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಲಹರಿ ವೇಲು, ನವೀನ್ ಮನೋಹರ್ , ರಾಜೇಶ್ ಭಟ್ ಮೊದಲಾದವರಿದ್ದರು. ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನು  ಕ್ಷೇತ್ರದ ಪರವಾಗಿ ಅಭಿನಂದಿಸಿದರು.

    Continue Reading

    DAKSHINA KANNADA

    ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!

    Published

    on

    ಮಂಗಳೂರು : ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿದೆ. ನವೆಂಬರ್ 30ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಅಕ್ರಮ್‌ ವೈಖರ್‌ ಎನ್ನುವ ಇ-ಮೇಲ್‌ ಐಡಿಯಿಂದ ಬೆದರಿಕೆ ಸಂದೇಶ ಬಂದಿದ್ದು, ಟರ್ಮಿನಲ್‌ನಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಬೆದರಿಕೆ ಒಡ್ಡಲಾಗಿದೆ.

    ನಿಲ್ದಾಣದ ಸಿಐಎಸ್‌ಎಫ್‌ ಸಿಬಂದಿ ಟರ್ಮಿನಲ್‌ನಲ್ಲಿ ಸೇರಿದಂತೆ ನಿಲ್ದಾಣದ ವಿವಿಧೆಡೆ ಶೋಧ ನಡೆಸಿದ್ದು, ಯಾವುದೇ ಬಾಂಬ್‌ ಸ್ಫೋಟಕಗಳು ಪತ್ತೆಯಾಗಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇ-ಮೇಲ್‌ ಸಂದೇಶದಲ್ಲಿ ತಮಿಳು ನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್‌ ಕಿಂಗ್‌ಪಿನ್‌ ಎನ್ನಲಾದ ಜಾಫರ್‌ ಸಾದಿಕ್‌ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್‌ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಪ್ರಕರಣವನ್ನು ವಾಪಸ್‌ ಪಡೆಯಬೇಕು.

    ತಿರುಚ್ಚಿ ಸೆಂಟ್ರಲ್‌ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್‌. ಮಾರನ್‌ನನ್ನು ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ. ಇದೇ ರೀತಿಯ ಬೆದರಿಕೆ ಸಂದೇಶ ಕಳೆದ ಅ. 25ರಂದು ತಿರುಪತಿಯ ಮೂರು ಹೊಟೇಲ್‌ಗ‌ಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್‌ ಸಾದಿಕ್‌ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖ ಆಗಿತ್ತು. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಈ ಕೃತ್ಯದಲ್ಲಿ ಅಲ್ಲಿನವರೇ ಇರುವ ಸಾಧ್ಯತೆಯಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹಿಂದೆ ಹಲವು ಬಾರಿ ಬಾಂಬ್‌ ಬೆದರಿಕೆಯ ಇ-ಮೇಲ್‌ಗ‌ಳು ಬಂದಿವೆ.

    Continue Reading

    BANTWAL

    ವಿಟ್ಲ: ಬಾಡಿಗೆಗೆಂದು ಹೋದ ಅಟೋ ಚಾಲಕ ನಾಪತ್ತೆ

    Published

    on

    ವಿಟ್ಲ: ಬಾಡಿಗೆಗೆಂದು ಹೋದ ಆಟೋ ಚಾಲಕ ನಾಪತ್ತೆಯಾದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಧನರಾಜ್‌ ನಾಪತ್ತೆಯಾದವರು. ಆತನ ಆಟೋ ರಿಕ್ಷಾ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದು, ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ನವೆಂಬರ್‌ 28 ರಂದು ಅವರು ಬಾಯಿಲದ ತನ್ನ ಮನೆಯಿಂದ ಅಟೋ ರಿಕ್ಷಾವನ್ನು ತೆಗೆದುಕೊಂಡು ಬೆಳಗ್ಗೆ ಹೊರಟಿದ್ದು, ವಾರ ಕಳೆದರೂ ಮನೆಗೆ ವಾಪಸ್‌ ಬಂದಿಲ್ಲ.

    ಈ ಬಗ್ಗೆ ಸಂಬಂದಿಕರಲ್ಲಿ ,ನೆರೆಕರೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಹುಡುಕಾಡಿದಾಗ ಧನರಾಜ್‌ನ ರಿಕ್ಷಾ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದ್ದು ಆತನ ಮೊಬೈಲ್‌ ಸ್ವೀಚ್‌ ಆಫ್‌ ಬರುತ್ತಿದೆ. ಹಾಗಾಗಿ ಆತನನ್ನು ಪತ್ತೆ ಹಚ್ಚಿ ಕೊಡುವಂತೆ ಮನೆಯವರು ಠಾಣೆಗೆ ನೀಡಿದ ದೂರಿನಲ್ಲಿ ಕೋರಿದ್ದಾರೆ.

    Continue Reading

    LATEST NEWS

    Trending