Sunday, November 27, 2022

ಕ್ಯಾನ್ಸರ್‌ ಗೆದ್ದಿದ್ದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ…

ಪಶ್ಚಿಮ ಬಂಗಾಳ: ಅನಾರೋಗ್ಯಕ್ಕೆ ಒಳಗಾಗಿದ್ದ, ಬೆಂಗಾಲಿಯ ಸಾಕಷ್ಟು ಸೀರಿಯಲ್ ಮೂಲಕ ಮೋಡಿ ಮಾಡಿದ್ದ ಐಂದ್ರಿಲಾ ಶರ್ಮಾ (24) ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.


ಹೃದಯಾಘಾತಕ್ಕೊಳಗಾಗಿದ್ದ ಇವರನ್ನು ನಿನ್ನೆ ರಾತ್ರಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ನ.20) ಮಧ್ಯಾಹ್ನ ನಿಧನರಾಗಿದ್ದಾರೆ.


ಸ್ತನ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದ ನಟಿ ಐಂದ್ರಿಲಾ ಕ್ಯಾನ್ಸರ್ ಗೆದ್ದು ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದಂತೆ ಐಂದ್ರಿಲಾ ಬ್ರೈನ್ ಸ್ಟ್ರೋಕ್‌ಗೆ ಒಳಗಾದರು. ಮತ್ತೆ ಐಂದ್ರಿಲಾ ಆಸ್ಪತ್ರೆಗೆ ದಾಖಲಾದರು.

ಎರಡೂ ಕಾಯಿಲೆಯಿಂದ ಸುಧಾರಿಸಿಕೊಂಡಿದ್ದ ಐಂದ್ರಿಲಾ ಇದೀಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಐಂದ್ರಿಲಾ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

LEAVE A REPLY

Please enter your comment!
Please enter your name here

Hot Topics

ವಿಶ್ವದಲ್ಲೇ ಬೃಹತ್ ಗಾತ್ರದ ಮೂತ್ರಕೋಶದ ಕಲ್ಲು ಹೊರತೆಗೆದ ಮಣಿಪಾಲ ವೈದ್ಯರು..!

ಉಡುಪಿ: ವ್ಯಕ್ತಿಯೋರ್ವರ 11.5 x 7.5 ಸೆಂಮೀ ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿ ಹೊರೆ ತೆಗೆದಿರುವ ಘಟನೆ ನಡೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ...

ಚೀನಾದಲ್ಲಿ ನಿಮಿಷಕ್ಕೆ 10 ಮಕ್ಕಳು ಜನಿಸಿದ್ರೆ ಭಾರತದಲ್ಲಿ 30 ಮಕ್ಕಳು ಜನಿಸ್ತಾರೆ-ಕೇಂದ್ರ ಸಚಿವ

ನವದೆಹಲಿ: ಇಂದು ಚೀನಾದಲ್ಲಿ ನಿಮಿಷಕ್ಕೆ 10 ಮಕ್ಕಳು ಜನಿಸುತ್ತಿದ್ದರೆ, ಭಾರತದಲ್ಲಿ 30 ಮಕ್ಕಳು ಜನಿಸುತ್ತಿದ್ದಾರೆ. ಹೀಗಿರುವಾಗ ನಾವು ಚೀನಾದೊಂದಿಗೆ ಸ್ಪರ್ಧಿಸೋದು ಹೇಗೆ? ಆದ್ದರಿಂದ ಮಸೂದೆಯನ್ನು ಧರ್ಮ ಅಥವಾ ಪಂಗಡವನ್ನು ಲೆಕ್ಕಿಸದೇ ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ...

ಇನ್ಮುಂದೆ ಬಾಡಿಗೆ ಮನೆ ಪಡೆಯಲು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಅಗತ್ಯ-ಮೈಸೂರು ನಗರ ಪೊಲೀಸ್ ಕಮಿಷನರ್ ಹೊಸ ಸುತ್ತೋಲೆ

ಮಂಗಳೂರು: ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಆಗಿರುವ ಘಟನೆ ಬೆನ್ನಲ್ಲೇ ಆರೋಪಿ ವಾಸವಾಗಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಬಾಡಿಗೆ ಮನೆ ನೀಡುವ ಮಾಲಕರು ಯಾರೂ ಗುರುತು ಪರಿಚಯ...